ಸದಾನಂದ ದಾಟೆ ಎನ್‌ಐಎ ಮುಖ್ಯಸ್ಥ

ಮುಂಬೈ, ಏ. ೧- ರಾಷ್ಟ್ರೀಯ ತನಿಖಾ ಸಂಸ್ಥೆಯ ನೂತನ ಮುಖ್ಯಸ್ಥರಾಗಿ ಸದಾನಂದ ದಾಟೆ ಅಧಿಕಾರಿ ವಹಿಸಿಕೊಂಡಿದ್ದಾರೆ. ನಿರ್ಗಮಿತ ಎನ್‌ಐಎ ಮುಖ್ಯಸ್ಥರಾಗಿದ್ದ ದಿನಕರ್ ಗುಪ್ತರಿಂದ ಅಧಿಕಾರ ವಹಿಸಿಕೊಂಡಿದ್ದರು.
ಮಹಾರಾಷ್ಟ್ರ ಕೇಡರ್‌ನ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಮುಂಬೈ ದಾಳಿ ನಡೆದ ವೇಳೆ ಕಾರ್ಯಾಚರಣೆಯಲ್ಲಿ ಸದಾನಂದ ಅವರು ನಿuಯಕ ಪಾತ್ರ ವಹಿಸಿದ್ದರು.
೨೦೦೮ ನವೆಂಬರ್ ೨೬ ರಂದು ಮುಂಬೈಯಲ್ಲಿ ನಡೆದಿದ್ದ ಉಗ್ರರ ದಾಳಿಯ ವೇಳೆ ಶಸ್ತ್ರಸಜ್ಜಿತ ಉಗ್ರರ ವಿರುದ್ಧ ಸದಾನಂದ ನಡೆಸಿದ ಹೋರಾಟಕ್ಕಾಗಿ ರಾಷ್ಟ್ರಪತಿ ಪದಕ ಲಭಿಸಿತ್ತು.
ಮುಂಬೈ ದಾಳಿಯ ಬಳಿಕ ಭಯೋತ್ಪಾದಕರನ್ನು ಮಟ್ಟ ಹಾಕಲು ೨೦೦೮ರಲ್ಲಿ ಕೇಂದ್ರ ಸರ್ಕಾರ ಎನ್‌ಐಎ ಸ್ಥಾಪಿಸಿತ್ತು.