ಸದಾನಂದಗೌಡ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ

ಕಲಬುರಗಿ,ಅ.28-ಜನಪರ- ರೈತಪರ ಹೋರಾಟಗಾರ ಮಾರುತಿ ಮಾನ್ಪಡೆ ಸಾವಿನ ಕುರಿತಾದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಹೇಳಿಕೆ‌ ನಾಚಿಕೆಗೇಡಿನದ್ದು ಎಂದು ಕೆಪಿಸಿಸಿ ವಕ್ತಾರರೂ ಆದ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವಿಟ್ ಮೂಲಕ ತಮ್ಮ ಅಸಮಧಾನ ಹೊರಹಾಕಿರುವ ಅವರು ಕೇಂದ್ರ ಸರಕಾರ ಜಾರಿಗೆ ತಂದ ರೈತ ವಿರೋಧಿ ಮಸೂದೆಗಳ ವಿರುದ್ಧ ಮಾರುತಿ ಮಾನ್ಪಡೆಯವರು ಹೋರಾಡುತ್ತಲೇ ಬಂದಿದ್ದರು.
” ಕೊರೋನಾ‌ದಂತ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಲಜ್ಜೆಗೆಟ್ಟ ಬಿಜೆಪಿ ಸರಕಾರ ರೈತ ವಿರೋಧಿ ಮಸೂದೆ ಜಾರಿಗೆ ತಂದಾಗ ಮಾನ್ಪಡೆಯವರು ಹೋರಾಟಕ್ಕಿಳಿದಿದ್ದರು. ಆದರೆ ಈಗ ಅವರ ಸಾವಿನ ಕುರಿತಾಗಿ ಕೇಂದ್ರ ಸಚಿವರ ಹೇಳಿಕೆ ನಾಚಿಕೆಗೇಡಿನದ್ದು ” ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಬಿಜೆಪಿ‌ ಸರಕಾರ‌ ಕೊಡುಗೆ ಏನು ? ಎಂದು ಪ್ರಶ್ನಿಸಿರುವ ಅವರು, ನೆರೆ ಹಾವಳಿ ಸಂದರ್ಭದಲ್ಲಿ ಭೇಟಿ ನೀಡಲಿಲ್ಲವೇಕೆ ? ಎಂದು ಸದಾನಂದಗೌಡವರನ್ನು ಕುಟುಕಿದ್ದಾರೆ.