ಸದಸ್ಯರ ಹಿತಾಸಕ್ತಿ ಸೌಹಾರ್ದ ಸಹಕಾರಿಗಳ ಮುಖ್ಯ ಉದ್ದೇಶವಾಗಬೇಕು:ಜ್ಯಾಂತೀಕರ್

ಬೀದರ:ಮಾ.25:ಸಹಕಾರಿ ಸಂಸ್ಥೆಗಳು ಸದಸ್ಯರ ಹಿತಾಸಕ್ತಿ ಕಾಪಡಿಕೊಳ್ಳುವ ಮೂಲಕ ಲಾಭಗಳಿಸಬೇಕು ಎಂದು ಸಂಯುಕ್ತ ಸಹಕಾರಿ ರಾಜ್ಯ ನಿರ್ದೇಶಕ ಗುರುನಾಥ ಜ್ಯಾಂತೀಕರ ತಿಳಿಸಿದರು. ಸದಸ್ಯರು ಪರಸ್ಪರ ಸಹಕಾರದಿಂದ ಮಾತ್ರ ಸಂಸ್ಥೆ ಬೆಳವಳಿಗೆ ಸಾಧ್ಯ ಎಲ್ಲರು ಆಡಳಿತ ಮಂಡಳಿಗೆ ಸಹಕಾರ ನೀಡಬೇಕು ಎಂದರು. ಬೀದರ ನಗರದ ಶಿವನಗರ ಹತ್ತಿರದ ನೂತನವಾಗಿ ನೋಂದಣಿಗೊಂಡ ಬೀದರ ಸೌಹಾರ್ದ ಸಹಕಾರಿ ಸಂಘ ನಿ., ಬೀದರ ಇದರ ಕಛೇರಿ ಉದ್ಘಾಟನೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಸಹಕಾರಿ ಸಂಸ್ಥೆಗಳಲ್ಲಿ ಸರ್ವರ ಹಿತ ಮುಖ್ಯವಾಗಿದೆ ಆಡಳಿತ ಮಂಡಳಿಯವರು ಎಲ್ಲಾ ಸದಸ್ಯರ ಹಿತವನ್ನು ಕಾಪಾಡಿಕೊಂಡು ಸಂಸ್ಥೆಯನ್ನು ಮುನ್ನಡೆಸಬೇಕು ಎಂದು ಉದ್ಘಾಟಕರಾಗಿ ಆಗಮಿಸಿದ ಮಾಜಿ ಬೀದರ ನಗರಾಭಿವೃದ್ಧಿ ಅಧ್ಯಕ್ಷ ಬಾಬುರಾವ ಮದಕಟ್ಟಿ ತಿಳಿಸಿದರು.

ಸಹಕಾರಿಯ ಆಡಳಿತ ಮಂಡಳಿಯ ಸದಸ್ಯರು ಸಹಕಾರ ಕಾಯ್ದೆದೆ ಮತ್ತು ನಿಯಮಗಳು ಹಾಗೂ ಉಪ ವಿಧಿಯಲ್ಲಿ ತಿಳಿಸಿರುವಂತೆ ಕಾರ್ಯನಿರ್ವಹಿಸಬೇಕು ಎಂದು ನ್ಯಾಯವಾದಿ ಕೆ.ಹೆಚ್.ಪಾಟೀಲ್ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿಯ ಮುಖ್ಯ ಪ್ರವರ್ತಕರಾದ ಕ್ರಾಂತಿಕುಮಾರ ಕುಲಾಲ ವಹಿಸಿಕೊಂಡಿದರು,ಕಾರ್ಯಕ್ರಮದಲ್ಲಿ ಸಹಕಾರಿಯ ಪ್ರವರ್ತಕರಾದ ವಿನೋದ,ಬಸವರಾಜ,ಅರುಣ,ಸೂರ್ಯಕಾಂತ, ಸತೀಷ, ಸಿದ್ರಾಮ್ಮಪ್ಪ,ಅನೀಲ, ಶಾಹಬುದಿನ್, ವಿನಾಯಕ, ಗುರುಸಿದ್ಧ, ಕಲ್ಲಪ್ಪ, ಶಾಂತಕುಮಾರ, ಅಮರ, ವೀರೇಶ, ಪ್ರೇಮಾ ಬಿರಾದರ, ವಿಜಯಲಕ್ಷ್ಮೀ, ಪ್ರೇಮಲಾ ಕುಲಾಲ,ರೇಣುಕಾ, ಸಮಿನಾ, ಶಿಲ್ಪಾ,ವಿಜಯಲಕ್ಷ್ಮೀ, ಪ್ರತಿಭಾವ, ಸುರೇಖಾ, ಆಶಾ, ಭಾಗ್ಯಶ್ರೀ ಒಕ್ಕೂಟ ನಿರ್ದೇಶಕ ಜಗನಾಥ ಕರಂಜೆ, ಸಂಜಯ ಕ್ಯಾಸಾ ಮುಖ್ಯ ಕಾರ್ಯನಿರ್ವಾಹಕ ಅಮೃತ ಹೊಸಮನಿ ಸಹಕಾರಿಯ ಸದಸ್ಯರು ಉಪಸ್ಥಿತರಿದ್ದರು.