ಸದಸ್ಯರ ಗೈರು ಕೋರಂ ಕೊರತೆ ಪುರಸಭೆ ಬಜೆಟ್ ಸಭೆ ಮುಂದೂಡಿಕೆಗೈರಾಗುವ ಮೂಲಕ ಮುಖ್ಯಾಧಿಕಾರಿಗಳ ಮೇಲೆ ಸದಸ್ಯರ ಆಕ್ರೋಶ್

ಅಫಜಲಪುರ :ಮಾ.14: ಪಟ್ಟಣದ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಶಹಾದ ಬೇಗಂ ಅಬ್ದುಲ್
ರಹುಫ್ ಅಧ್ಯಕ್ಷತೆಯಲ್ಲಿ ಮಾರ್ಚ್ 13 ರ ಸೋಮವಾರ ತಾಲೂಕ ಪಂಚಾಯತ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ 2023-2024ನೇ ಸಾಲಿನ ಆಯವ್ಯಯ ಬಜೆಟ್ ಸಭೆಯನ್ನು ಆಯೋಜಿಸಲಾಗಿತ್ತು.
ಶಾಸಕ ಎಂ.ವೈ .ಪಾಟೀಲ್ ಅವರು ಕಾಂಗ್ರೇಸ್ ಪಕ್ಷದ ಶಾಸಕರಾಗಿರುವುದರಿಂದ ಇವರ ಮೇಲೆ ನಂಬಿಕೆ ಇಟ್ಟು 16ಜನರನ್ನು ಕಾಂಗ್ರೇಸ್ ಪಕ್ಷದಿಂದ ಪುರಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಿದರೆ ಒಬ್ಬರನ್ನು ಪಕ್ಷೇತರ ಆಯ್ಕೆಯಾಗಿ ನಂತರ ಕಾಂಗ್ರೇಸ್ ಪಕ್ಷ ಸೇರಿದ ಹಿನ್ನಲೆ 17 ಜನ ಪುರಸಭೆ ಸದಸ್ಯರನ್ನಾಗಿ ಆಯ್ಕೆಯಾದರೆ. ಇನ್ನೂ ಬಿಜೆಪಿಯಿಂದ 6 ಜನ ಪುರಸಭೆ ಸದಸ್ಯರನ್ನಾಗಿ ಆಯ್ಕೆಯಾದರು.
ಇತ್ತೀಚೆಗೆ 5 ಜನರನ್ನು ಪುರಸಭೆಗೆ ನಾಮನಿರ್ದೇಶನ ಸದಸ್ಯರನ್ನಾಗಿ ಬಿಜೆಪಿ ಸರಕಾರ ನೇಮಕ ಮಾಡಿತ್ತು.
ಮೊದಲು ಬಾರಿಗೆ ಶಾಸಕರು ವಿಶ್ವಾಸವಿಟ್ಟು ಮಹಿಳಾ ಮೀಸಲಾತಿ ಹಾಗೂ ಸಮುದಾಯದ ಪ್ರಾತಿನಿಧ್ಯ ಅನುಗುಣವಾಗಿ ಅಧ್ಯಕ್ಷೆಯಾಗಿ ಶ್ರೀಮತಿ ರೇಣುಕಾ ರಾಜಶೇಖರ ಪಾಟೀಲ್ 15 ತಿಂಗಳ ಒಪ್ಪಂದದ ಮೇರೆಗೆ ಪುರಸಭೆಯ ಅಧ್ಯಕ್ಷರಗಾದಿಗೆ ಆಯ್ಕೆ ಮಾಡಿದ್ದರು.ಇವರ ಅವಧಿಯಲ್ಲಿ ಕೆಲವೊಂದಿಷ್ಟು ಅಭಿವೃದ್ಧಿ ಕೆಲಸಗಳಾಗಿವೆ.15 ತಿಂಗಳ ಅವಧಿ ಮುಗಿದ ನಂತರ ಶಾಸಕರ ನಿರ್ದೇಶನದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.ಹೀಗಾಗಿ ಎರಡನೇ ಅವಧಿಗೆ ಶ್ರೀಮತಿ ಶಹದಾ ಬೇಗಂ ಅಬ್ದುಲ್ ರಹುಫ್ ಅವರನ್ನು ಶಾಸಕರು ತಮ್ಮ ಪಕ್ಷದಿಂದ ಎಲ್ಲಾ ಪುರಸಭೆಯ ಸದಸ್ಯರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಆಯ್ಕೆ ಮಾಡಿದ್ದರು.
ಹೀಗಾಗಿ ಕಾಂಗ್ರೇಸ್ ಶಾಸಕ ಎಂ.ವೈ.ಪಾಟೀಲ್
ಹಿಡಿತದಲ್ಲಿರುವುದರಿಂದ ಆಡಳಿತರೂಢ ಕಾಂಗ್ರೇಸ್ ಪಕ್ಷದಿಂದ ಅತಿ ಹೆಚ್ಚು ಸದಸ್ಯರು ಆಯ್ಕೆಯಾಗಿರುವುದರಿಂದ ಪುರಸಭೆಯು ಕಾಂಗ್ರೇಸ್ ಆಡಳಿತದಲ್ಲಿದೆ.
ಅತಿ ಹೆಚ್ಚು ಬಾರಿ ಈ ಹಿಂದೆ ಅನೇಕ ಬಾರಿ ಪಟ್ಟಣ ಪಂಚಾಯತ್ ಇದ್ದಾಗಲೂ ಸದ್ಯ ಪುರಸಭೆಯಲ್ಲಿಯೂ ಕೂಡಾ ಶಾಸಕ ಎಂ.ವೈ.ಪಾಟೀಲ್ ಅವರ ಹಿಡಿತದಲ್ಲಿದೆ.
ಆದರೆ ಇಂದು ಆಡಳಿತರೂಢ ಕಾಂಗ್ರೇಸ್ ಪಕ್ಷದ ಪುರಸಭೆಯ ಅಧ್ಯಕ್ಷೆ ಶ್ರೀಮತಿ ಶಹಾದ ಬೇಗಂ ಅಬ್ದುಲ್ ರಹುಫ್ ಹಾಗೂ ಚಂದು ದೇಸಾಯಿ ಇಬ್ಬರನ್ನೂ ಹೊರತು ಪಡಿಸಿ ಇನ್ನೂಳಿದ ಕಾಂಗ್ರೇಸ್ ಪಕ್ಷದ ಪುರಸಭೆಯ 15 ಸದಸ್ಯರು ಸಭೆಗೆ ಗೈರು ಹಾಜರಾಗುವು ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದ್ದು.
ಹಾಗೂ ಬಿಜೆಪಿಯ ಸದಸ್ಯರಾದ ಶಿವಾನಂದ ಸಲಗರ , ಭೀಮು ಬಬಲಾದ ಹಾಗೂ ಬಿಜೆಪಿಯ ನಾಮನಿರ್ದೇಶಿತ ಸದಸ್ಯರಾದ ಮಳೇಂದ್ರ ಡಾಂಗೆ, ಶ್ರೀಮತಿ ಪ್ರತಿಭಾ ಮಹಿಂದರಕರ ಮಾತ್ರ ಬಜೆಟ್ ಮಂಡನೆ ಸಭೆಗೆ ಹಾಜರ್ ಆಗಿರುವುದರಿಂದ ಕೋರಂ ಭರ್ತಿ ಹಿನ್ನೆಲೆ 2023-2024 ನೇ ಸಾಲಿನ ಆಯವ್ಯಯ ಬಜೆಟ್ ಸಭೆಯನ್ನು ಮುಂದೂಡಿರುವುದು ವಿಪರ್ಯಾಸ ಸಂಗತಿಯಾಗಿದೆ. ಹೀಗಾಗಿ ಕೋರಂ ಕೊರತೆಯಿಂದ
ಪುರಸಭೆಯ ಅಧ್ಯಕ್ಷೆ ಶ್ರೀಮತಿ ಶಹಾದ ಬೇಗಂ ಅಬ್ದುಲ್ ರಹುಫ್ ಅಪ್ಪಣೆ ಮೇರೆಗೆ ಬಜೆಟ್ ಮಂಡನೆ ಸಭೆಯು ಮುಂದೂಡಲಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿಗಳಾದ ಶ್ರೀಮತಿ ಪಂಕಜಾ ರಾವೂರ್ ತಿಳಿಸಿದರು.
ಹೀಗಾಗಿ ಬಜೆಟ್ ಸಭೆ ಮುಂದೂಡಿದ ಹಿನ್ನಲೆ ಪುರಸಭೆ ಸದಸ್ಯರಾದ ಕಾಂಗ್ರೇಸ್ಸಿನ್ ಚಂದು ದೇಸಾಯಿ ಬಿಜೆಪಿಯ ಪುರಸಭೆಯ ನಾಮನಿರ್ದೇಶಿತ ಸದಸ್ಯ ಮಳೇಂದ್ರ ಡಾಂಗೆ ಒಂದೇ ವಾಹನ ಹತ್ತಿ ಹೊರಟುಹೋದರು. ಡಾಂಗೆ ಹೊರಟು ಹೋಗುವ ಮುನ್ನ ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿ ಕೆಲ ಸದ್ಯಸರುಗಳಿಗೆ ಹೊಟ್ಟೆ (ಅಕ್ರಮವಾಗಿ) ತುಂಬುತ್ತಿಲ್ಲ ಹೀಗಾಗುವದು ಸಹಜ,ದಿನದ ಖರ್ಚಿಗೆ ಬ್ರೆಕ್ ಬಿದ್ದಿದೆ, ಊಟ ಡ್ರಿಂಕ್ಸ ಇತ್ಯಾದಿ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಇಷ್ಟು ದಿನ ಮಜಾ ಮಾಡಿದ್ದಾರೆ ಈಗ ಇವುಗಳಿಗೆ ಅವಕಾಶ ಸಿಗುತ್ತಿಲ್ಲ ಕೆಲ ಸದಸ್ಯರು ಅಸಮದಾನ ಆಗುವದು ಸಹಜ ಎಂದು ಹೇಳಿದರು.
ಏತನ್ ಮಧ್ಯೆ ಪುರಸಭೆಯ ಸದಸ್ಯೆಯ ಹೆಸರು ಹೇಳದ ಪತಿ ಹೇಳುವು ಪ್ರಕಾರ ಪುರಸಭೆಯ ಮುಖ್ಯ ಅಧಿಕಾರಿಗಳು ಪುರಸಭೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹಾಗೂ ಸಭೆ ಕರೆಯೋ ಮುನ್ನ ಸದಸ್ಯರಗಳ ಜೊತೆ ಚರ್ಚಿಸದೆ .ಏಕರೂಪ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಮುಖ್ಯ ಅಧಿಕಾರಿ ಶ್ರೀಮತಿ ಪಂಕಜ ರಾವೂರ್ ಮೇಲೆ ಆಕ್ರೋಶ್ ವ್ಯಕ್ತಪಡಿಸಿದರು.
ಇನ್ನೊಬ್ಬ ಸದಸ್ಯಇವತ್ತು ಬಜೆಟ್ ಮಂಡನೆ ಇರುವುದು ನನಗೆ ಗೊತ್ತಿಲ್ಲ ನಾನಂತೂ ಬರುವುದಿಲ್ಲ ಅಲ್ಲದೆ ಸೋಮವಾರ ಸಭೆ ಸಮಾರಂಭಗಳು, ಮದುವೆಗಳು ಇದುದ್ದರಿಂದ ಬಜೆಟ್ ಮಂಡನೆ ಸಭೆಗೆ ಇನ್ನುಳಿದ ಸದಸ್ಯರು ಬಂದಿರಲಿಕ್ಕಿಲ್ಲವೆಂದು ಹೇಳಿದರು.
ಏನೇ ಆದರೂ ಪಟ್ಟಣದ ನಾಗರೀಕರ ಹಿತದೃಷ್ಟಿಯಿಂದ ಸರ್ಕಾರದಿಂದ ಅನುದಾನ ಸದ್ಬಳಕೆಯಾಗಿ ಪುರಸಭೆ ಬಜೆಟ್ ಲೇಖಾನುದಾನವನ್ನು ಮುಂದಿನ ಬಜೆಟ್ ಮಂಡನೆ ಸಭೆಯಲ್ಲಾದರೂ ಪುರಸಭೆಯ ಸದಸ್ಯರಿಂದ ಅನುಮೋದನೆ ಸಿಗುವಂತಾಗಲಿ ಎಂದು ಪಟ್ಟಣದ ನಾಗರೀಕರ ಆಶಯವಾಗಿದೆ.