ಸದಸ್ಯರು ಸಂಘದ ಸದುಪಯೋಗ ಪಡೆದುಕೊಳ್ಳಿ  

ಹಿರಿಯೂರು.ಜೂ.2- ಸಂಘದ ಎಲ್ಲಾ ಸದಸ್ಯರು ಸಂಘದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು  ಸದುಪಯೋಗ ಪಡೆದುಕೊಳ್ಳಬೇಕು ಎಂದು ವೆಲ್ಡಿಂಗ್ ಮಾಲೀಕರು ಹಾಗೂ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪರಮೇಶ್ ಹೇಳಿದರು. ನಗರದ ಬೈಪಾಸ್ ರಸ್ತೆಯಲ್ಲಿರುವ  ಗಣೇಶ ಮೋಟರ್ಸ್ ಹತ್ತಿರ ಸಂಘದ ನೂತನ ಕಾರ್ಯಾಲಯ ಉದ್ಘಾಟನೆ ಹಾಗೂ ಸದಸ್ಯರಿಗೆ ಗುರುತಿನ ಪತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಗೌರವ ಅಧ್ಯಕ್ಷರಾದ ರಾಜ್ ಕುಮಾರ್, ನಯೀಂ, ಉಪಾಧ್ಯಕ್ಷರಾದ ಇಸ್ಮಾಯಿಲ್, ನಾಗರಾಜ್, ಕಾರ್ಯದರ್ಶಿ ಬಸವರಾಜ್, ಖಜಾಂಚಿ ಶ್ಯಾಮು, ಹಿರಿಯ ಸಲಹೆಗಾರರಾದ ವೆಂಕಟೇಶ್, ಅಬ್ದುಲ್ ಕರೀಂ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.