ಸತ್ಸಂಗ ಕಾರ್ಯಕ್ರಮ

ನವಲಗುಂದ,ಏ18 : ಪಟ್ಟಣದ ಶಿವಶರಣ ಹರಳಯ್ಯ ಸಮಗಾರ ಓಣಿಯ ಶ್ರೀಚಕ್ರ ಧಾರಿಣಿ ಬಳ್ಳಾರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಏ 19 ರಂದು ಶುಕ್ರವಾರ ಶ್ರೀ ಲಲಿತಾ ಸಹಸ್ರನಾಮ ಪಾರಾಯಣದೊಂದಿಗೆ ಕುಂಕುಮಾರ್ಚನೆ ಮತ್ತು ಸತ್ಸಂಗ ಕಾರ್ಯಕ್ರಮ ಜರುಗಲಿದೆ.

ಪಟ್ಟಣದ ಶ್ರೀ ಶಾರದೇಶ್ವರಿ ಆಶ್ರಮದ ಅನನ್ಯಮಯಿ ಮಾತಾಜಿಯವರು ಸಾನಿಧ್ಯ ವಹಿಸಿಲಿದ್ದಾರೆ. ಮಾಜಿ ಪುರಸಭೆ ಉಪಾಧ್ಯಕ್ಷರಾದ ಪೂರ್ಣಿಮಾ ಜೋಶಿ ಹಾಗೂ ಮೃತ್ಯುಂಜಯ ಕುಲಕರ್ಣಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸುವರು.