ಸತ್ವಯುತ ಆಹಾರ-ಉಪನ್ಯಾಸ

ಲಕ್ಷ್ಮೇಶ್ವರ,ಜು18: ಪಟ್ಟಣದ ಎಂ.ಎ ಕಾಲೇಜಿನ ಸಭಾಂಗಣದಲ್ಲಿ ಸಿರಿಧಾನ್ಯಗಳ ಮಾತು ಸ್ವಾಸ್ಥ್ಯ ಜೀವನಕ್ಕೆ ಸತ್ವಯುತ ಆಹಾರ ಕುರಿತಾಗಿ ಆಹಾರ ತಜ್ಞ ಡಾಕ್ಟರ್ ಖಾದರ್ ಉಪನ್ಯಾಸ ನೀಡಿದರು.
ಕೃಷಿ ಕ್ಷೇತ್ರದಲ್ಲಿನ ಬದಲಾವಣೆಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು ಇಂದು ವಂದಿಲ್ಲ ಒಂದು ರೋಗದಿಂದ ಬಳಲುವ ಸ್ಥಿತಿ ನಿರ್ಮಾಣವಾಗಿದೆ ಈ ಹಿಂದೆ ಸಿರಿಧಾನ್ಯಗಳ ಸೇವನೆಯ ಸಂದರ್ಭದಲ್ಲಿ ಯಾವುದೇ ರೋಗ ರುಜಿನಗಳು ಇರಲಿಲ್ಲ ಆಹಾರಗಳಲ್ಲಿ ರೋಗನಿರೋಧಕ ಶಕ್ತಿಗಳು ಇದ್ದವು.
ಹಾಲು ಬೆಳೆಯುತ್ತಿರುವ ಆಹಾರ ಪದಾರ್ಥಗಳು ಎಲ್ಲವೂ ಕೃತಕವಾಗಿರುವುದರಿಂದ ಆಹಾರದ ಸ್ವರೂಪ ಬದಲಾವಣೆಯಾಗಿ ಇಂದು ಬುದ್ದಿಮಾಂದ್ಯ ಮಕ್ಕಳು ಜನಿಸುತ್ತಿದ್ದು ಇದು ದೊಡ್ಡ ಪಿಡುಗಾಗಿ ಪರಿಣಮಿಸಿದ್ದು ನಾವು ದುಡ್ಡಿನ ವ್ಯಾಮೋಹದಲ್ಲಿ ಸಿಲುಕಿ ನಮ್ಮ ಸಹಜ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ದುಡ್ಡಿನಿಂದ ಏನು ಆಗುವುದಿಲ್ಲ ಆರೋಗ್ಯ ಯುತ ಜೀವನ ಇಂದಿನ ಅವಶ್ಯಕತೆ ಎಂದು ಜನರು ಜೀವನ ಶೈಲಿಯನ್ನು ಬದ್ಲಾವಣೆ ಮಾಡಿಕೊಳ್ಳಬೇಕು ಎಂದರ.
ಕಾರ್ಯಕ್ರಮದಲ್ಲಿ ಗದಗ್ ಜಿಲ್ಲಾ ಕೃಷಿ ಇಲಾಖೆ, ಜಂಟಿ ನಿರ್ದೇಶಕ ಜಿ ಎಫ್ ಜಿಯಾವುಲ್ ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಬಾಬು ಚಂದ್ರಕಾಂತ್ ಜಮಾದಾರ್ ಅಶೋಕ್ ಬಟಗುರ್ಕಿ ಚನ್ನಪ್ಪ ಮೂಕಿ ಟಾಕಪ್ಪ ಸಾತಪುತೆ ಚಂದ್ರಶೇಖರ್ ಗೌಡ ನರಸಮ್ಮನವರ ಮತ್ತಿತರರು ಹಾಗೂ ರೈತರು ಪಾಲ್ಗೊಂಡಿದ್ದರು.