ಸತ್ಯ ಸಂದೇಶ ಸಾರಿದವರು ಗೌತಮ ಬುದ್ಧ


 ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.11: :ಮೌಢ್ಯ ತ್ಯಜಿಸಿ ಬೌದ್ಧಿಕ ಪ್ರಬುದ್ಧತೆ ಪಡೆದು ದಯ, ಕರುಣೆ,ಪ್ರಾಣಿಕತೆ ಹಾಗೂ ಸತ್ಯ ಸಂದೇಶವನ್ನು ಜಗತ್ತಿಗೆ ಸಾರಿದವರು ಗೌತಮ ಬುದ್ಧರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗೌತಮ ಬುದ್ಧರ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದುಃಖ, ದುಃಖದ ಹುಟ್ಟು, ದುಃಖ ಅಡಗಿಸುವಿಕೆ ಹಾಗೂ ದುಃಖ ನಿವಾರಣೆಗೆ ಇರುವ ಅಷ್ಟಾಂಗ ಮಾರ್ಗಗಳನ್ನು ತಿಳಿಸಿದರು. ಆಸೆಯೇ ದುಃಖಕ್ಕೆ ಮೂಲ ಕಾರಣ.ಸಿದ್ಧಾರ್ಥ ತನ್ನ ತಪ ಶಕ್ತಿಯಿಂದ ಬುದ್ಧನಾದ.ಬುದ್ಧ ಎಂದರೆ ಎಲ್ಲವನ್ನೂ ತಿಳಿದವನು ಎಂದರ್ಥ.ಆದ್ದರಿಂದ ಮಕ್ಕಳು ಚಿಕ್ಕಂದಿನಿಂದಲೇ ಸತ್ಯ ಹೇಳುವುದನ್ನು ಕಲಿಯಬೇಕು. ಜೊತೆಗೆ ಬುದ್ಧನ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದರು.
ಅತಿಥಿ ಶಿಕ್ಷಕ ಗುರುಪ್ರಸಾದ್ ಪೂಜೆ ನೆರವೇರಿಸಿದರು. ಗ್ರಾಮ ಪಂಚಾಯಿತಿ ನೌಕರ ಗಾದಿಲಿಂಗಪ್ಪ,ಅತಿಥಿ ಶಿಕ್ಷಕ ಸುಂಕಪ್ಪಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.