ಸತ್ಯ ಸಂಗತಿಗಳನ್ನು ತಲುಪಿಸುವುದೇ ಪತ್ರಕರ್ತನ ಪ್ರಮುಖ ಕರ್ತವ್ಯ

ಕಲಬುರಗಿ:ಮಾ.3:ಪತ್ರಿಕೆಯು ನಿಜವಾದ ಸಂದೇಶಗಳನ್ನು ಬಿತ್ತರಿಸುವುದು ಪತ್ರಿಕಾ ಧರ್ಮ ಜನರಿಗೆ ನಿಜವಾದ ಸುದ್ದಿಗಳನ್ನು ತಲುಪಿಸುವ ಜವಾಬ್ದಾರಿ ಪತ್ರಕರ್ತನ ಪ್ರಮುಖ ಕರ್ತವ್ಯ ಎಂದು ಕಮಾಂಡೋ ಶಿವಪ್ಪ ಉಪ ಆರಕ್ಷಕರು ಅಶೋಕನಗರ ಪೆÇಲೀಸ್ ಠಾಣೆ ಅವರು ಆದರ್ಶ ಕಲಬುರಗಿ ಕನ್ನಡ ದಿನಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು ಪತ್ರಿಕಾ ರಂಗವು ಹಾಗೂ ತಮ್ಮ ಸಂಬಂಧವು ಸುಮಾರು 30 ವರ್ಷಗಳ ಕಾಲ ಸಂಬಂಧದ ಕುರಿತು ಹೇಳಿದರು ತೊಂಬತ್ತರ ದಶಕದಲ್ಲಿ ಪತ್ರಿಕೆಗಳು ಬಹಳಷ್ಟು ಪ್ರಭಾವ ಬೀರಿದ್ದವು ಆಗಿನ ಕಾಲದಲ್ಲಿ ಜಿಲ್ಲಾ ಮಟ್ಟದ ಪತ್ರಿಕೆಗಳು ಬಹಳಷ್ಟು ಪ್ರಚಲಿತದಲ್ಲಿತ್ತು ಆಗಿನ ದಿನಮಾನಗಳಲ್ಲಿ ಪ್ರಮುಖ ಸುದ್ದಿಗಳನ್ನು ತಿಳಿಯಲು ನಮಗೆಲ್ಲ ಸಹಾಯಕವಾಗಿತ್ತು ಎಂದು ತಿಳಿಸಿದರು. ಒಂದು ಪತ್ರಿಕೆಯನ್ನು ನಡೆಸಲು ಬಹಳಷ್ಟು ಕಷ್ಟಕರವಾದ ಕೆಲಸ ಮತ್ತು ಪತ್ರಿಕೆಯನ್ನು ನಡೆಸಲು ಪ್ರಾಮಾಣಿಕತೆಯು ಕೂಡಾ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.

ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ವರ್ಷಾ ರಾಜೀವ್ ಜಾನೆ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪತ್ರಕರ್ತ ಹಣಮಂತ ಬೋಧನಕರ್ ಮಾತನಾಡಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಹಿಂದೆಯೇ ಮಹತ್ವದ ಸಾಧನೆಯನ್ನು ಮಾಡಿದ್ದರು ಅವರು ಅಂದಿನ ದಿನಗಳಲ್ಲಿ ಪ್ರಾರಂಭಿಸಿದ ಪತ್ರಿಕೆಗಳು ಮೂಕನಾಯಕ, ಬಹಿಷ್ಕ್ರತ್ ಹಿತಕಾರಿ ಸಭಾ, ಜನತಾ, ಪ್ರಬುದ್ಧ ಭಾರತ, ಸಮತಾ ಮುಂತಾದ ಪತ್ರಿಕೆಗಳನ್ನು ಅಂದು ಆರಂಭಿಸಿ ದಲಿತ, ದಮನಿತರ ಬಗ್ಗೆ ಬೆಳಕು ಚೆಲ್ಲಿದರು ಅಂದು ಅವರಿಂದಾದ ಸಾಧನೆ ಇಂದು ನಮಗೆ ದಾರಿದೀಪವಾಗಿವೆ ಎಂದು ಹೇಳಿದರು.

ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಸೋಮಶೇಖರ ಮೇಲಿನಮನಿ
ಮಾತನಾಡಿ ಪತ್ರಿಕೆಯು ನೂತನ ಯುವಜನತೆಗೆ ಹೊಸ ಹೊಸದಾದ ವಿಚಾರಗಳು ತಿಳಿಯುವಂತಾಗಲಿ ಅನೇಕ ವಿಷಯಗಳು ನಿಮ್ಮ ಪತ್ರಿಕೆ ಮೂಲಕ ಎಲ್ಲರಿಗೂ ದೊರೆಯಲೆಂದು ಶುಭ ಹಾರೈಸಿದರು. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಬಾಬುರಾವ ಕೋಬಾಳ ಪ್ರವೀಣ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ನಾಗರಾಜ್ ಕಾಂಬಳೆ ಕಾರ್ಯಕ್ರಮ ಕುರಿತು ಮಾತನಾಡಿದರು.

ಕುಮಾರ ಆದರ್ಶ ಆರ್ ಭಂಡಾರಿ ಪ್ರಾರ್ಥನಾ ಗೀತೆಯನ್ನು ಹಾಡಿದರು. ಆದರ್ಶ ಕಲಬುರ್ಗಿ ಪತ್ರಿಕೆ ಸಂಪಾದಕರಾದ ರುಕ್ಮೇಶ್ ಆರ್ ಭಂಡಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು ಸಮಾರಂಭದ ನಿರೂಪಣೆ ಹಾಗೂ ವಂದನಾರ್ಪಣೆ ಮಹೇಶ ಎಮ್ ತೆಗ್ಗೆಳ್ಳಿ ಮಾಡಿದರು.

ಸಮಾರಂಭದಲ್ಲಿ ಸಂಜೀವಕುಮಾರ ಮೇಲಿನಮನಿ, ಸೂರ್ಯಕಾಂತ ಕೊಟ್ಟರಗಾ, ಮಹೇಶ ಸಂಗಾವಿ, ಚಂದ್ರಕಾಂತ ಹಾಗರಗಿ, ಕುಮಾರ ಭಂಡಾರಿ, ಹಣಮಂತ ಇಟಗಿ,ಶ್ರೀಮತಿ ನಾಗಮ್ಮ ಕೋಬಾಳ, ಹಿರಿಯ ಪತ್ರಕರ್ತರು ಸುರೇಶ್ ಶಿಂಧೆ, ಮಿಲಿಂದ ಸನಗುಂದಿ, ಗೌತಮ್, ಹಾಗೂ ಭಂಡಾರಿ ಪರಿವಾರದವರು ಭಾಗವಹಿಸಿದ್ದರು.