ಸತ್ಯ ಶುದ್ಧ ಕಾಯಕದಿಂದ ಜೀವನದಲ್ಲಿ ಮುಂದೆ ಬರಲು ಸಾಧ್ಯ:ನಾಗವೇಣಿ ಶಂಕರ

ಬೀದರ ಜ.5: ನಾವು ಮಾಡುವ ಯಾವುದೇ ಕೆಲಸವಾಗಿರಲಿ ಅದರಲ್ಲಿ ಸತ್ಯ ಶುದ್ಧ ಕಾಯಕದಿಂದ ಮಾಡಿದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ಮಹಿಳಾ ಸಾಧಕಿ ನಾಗವೇಣಿ ಶಂಕರ ಹೇಳಿದರು.

ಅವರು ಬುಧವಾರ ಬೀದರ ಉತ್ಸವ-2023ರ ಅಂಗವಾಗಿ ಝೀರಾ ಫಂಕ್ಷನ್ ಹಾಲನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇವರು ಎಲ್ಲರಿಗೂ ತಮ್ಮದೆಯಾದ ಸಾಮಥ್ರ್ಯವನ್ನು ಕೊಟ್ಟಿರುತ್ತಾನೆ ಅದನ್ನು ನಾವು ಸದುಪಯೋಗ ಪಡೆದುಕೊಳ್ಳಬೇಕು, ನಾನು ಮೊದಲಿಗೆ ಎರಡು ರೊಟ್ಟಿ ಮಾಡುತ್ತಿದ್ದೆ ನಂತರ ಐದನೂರು ರೊಟ್ಟಿಗಳನ್ನು ಮಾಡಲು ಆರಂಭಿಸಿದೇವು ಮುಂದೆ ಸಾವಿರ ಜನರಿಗೆ ಹೋಟೆಲ್ ಮುಖಾಂತರ ಊಟವನ್ನು ಹಾಕುವುದರ ಜೊತೆಗೆ ಸಮಾಜ ಸೇವೆಯನ್ನು ಮಾಡುತ್ತಿದ್ದೆನೆ. ಎಲ್ಲರಲ್ಲೂ ಈ ಶಕ್ತಿಯಿದೆ ನಾವು ಯಾವುದೇ ಕಾಯಕ ಸತ್ಯ ಶುದ್ಧದಿಂದ ಮಾಡುತ್ತಾ ಹೋದರೆ ಅದು ಹೆಚ್ಚುತ್ತಾ ಹೊಗುತ್ತದೆಂದು ಹೇಳಿದರು.

ರಾಷ್ಟ್ರೀಯ ನೈಟಿಂಗೆಲ್ ಪ್ರಶಸ್ತಿ ಪುರಸ್ಕøತರಾದ ಇನ್ನೋರ್ವ ಅತಿಥಿ ಲಕ್ಷ್ಮೀ ಮೇತ್ರೆ ಅವರು ಮಾತನಾಡಿ ನಾವು ನಾಲ್ಕು ಜನರಲ್ಲಿ ಗುರುತಿಸಿಕೊಳ್ಳಬೇಕಾದರೆ ಶ್ರಮಪಡಬೇಕು ಮತ್ತು ತ್ಯಾಗ ಮಾಡಬೇಕು ನಾನು ಮೊದಲು ಕಿರಿಯ ಆರೋಗ್ಯ ಸಹಾಯಕಿಯಾಗಿ ಕೆಲಸಕ್ಕೆ ಸೇರಿದೆ ಬಡತನ ಮತ್ತು ಅವಮಾನ ಮನುಷ್ಯನಿಗೆ ಬಹಳಷ್ಟು ಪಾಠ ಕಲಿಸುತ್ತವೆ, ನಾನು ಜೀವನದಲ್ಲಿ ಬಹಳಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದರೂ ಯಾರ ಹತ್ತಿರವು ಒಂದು ದುಡ್ಡನ್ನು ಪಡೆಯದೆ ಹಲವಾರು ಮಹಿಳೆಯರಿಗೆ ಉಚಿತವಾಗಿ ಹೆರಿಗೆಯನ್ನು ಮಾಡಿದ್ದೇನೆ. ನಾನು ನಿಮ್ಮಲ್ಲಿ ಒಬ್ಬಳಾಗಿದ್ದೇನೆ ನನ್ನಂತಹ ಹಲವಾರು ಮಹಿಳೆಯರ ಪ್ರೇರಣೆಯಿಂದ ತಾವು ಕೂಡ ಈ ರೀತಿ ನಿಸ್ವಾರ್ಥ ಸಮಾಜ ಸೇವೆ ಮಾಡುವ ಮೂಲಕ ಮುಂದೆ ಬರಬೇಕೆಂದು ಹೇಳಿದರು.

ಈ ಮಹಿಳಾ ಉತ್ಸವದಲ್ಲಿ ಭರತನಾಟ್ಯ, ಬಸವಣ್ಣನವರ ಕುರಿತ ಕಲ್ಯಾಣ ಕ್ರಾಂತಿ ಕಿರು ನಾಟಕ, ಗಾಯನ, ಸುಗಮ ಸಂಗೀತ, ಸಾಂಪ್ರದಾಯಿಕ ನೃತ್ಯ ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆದವು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾಂ ಎಂ., ಗುರಮ್ಮಾ ಸಿದ್ದಾರೆಡ್ಡಿ, ಶಂಕುತಲಾ ಬೆಲ್ದಾಳೆ, ಗೀತಾ ಪಂಡಿತ ಚಿದ್ರಿ, ಸಾವಿತ್ರಿ ಸಲಗರ, ಪೂರ್ಣಿಮಾ ಜಾರ್ಜ, ಕೀರ್ತಿ ಚಾಲಕ, ಜಿಲ್ಲಾ ಕೈಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಸುರೇಖಾ ಮುನ್ನೊಳ್ಳಿ, ಪ್ರತಿಮಾ ಗೋವಿಂದರೆಡ್ಡಿ, ಸಧ್ಯಾ ಕಿಶೋರಬಾಬು, ಪೂರ್ಣಿಮಾ ಮಹೇಶ ಮೇಘಣ್ಣವರ, ಗೀತಾ ಶಿವಕುಮಾರ ಶೀಲವಂತ, ರೇಖಾ ಸೌಧಿ, ಸಾಹಿತಿಗಳಾದ ಪಾರ್ವತಿ ಸೋನಾರೆ, ಭಾರತಿ ವಸ್ತ್ರದ ಸೇರಿದಂತೆ ಹಲವಾರು ಮಹಿಳೆಯರು ಭಾಗವಹಿಸಿದ್ದರು.