
ಕಲಬುರಗಿ,ಅ.28: ಮಹಾಗ್ರಂಥಗಳು ಮಾನವ ಕಲ್ಯಾಣವನ್ನು ಬಯಸಿದ್ದು ಧರ್ಮದ ದಾರಿಯಲ್ಲಿ ನಡೆದು ಬದುಕು ಹಸನಾಗಿಸಲು ಧರ್ಮ ಗ್ರಂಥಗಳು ಮಾನವನಿಗೆ ಪ್ರೇರಣಿಯಾಗಿವೆ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಹೇಳಿದರು.
ಶನಿವಾರದಂದು ಡಾ. ಎಸ.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಲಬುರಗಿ ಇವರುಗಳ ಸಂಯುಕ್ತಾಶ್ರದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮಾಲಾರ್ಪಣೆ ಮಾಡಿ ಮಾತನಾಡಿದರು.
ಸ್ವಭಾವದ ವಿವಿಧ ಮುಖಗಳನ್ನು ತಿಳಿಸುವ ಮಹಾಚಿಂತನೆ,ಮಹಾದರ್ಶನ, ಮಹಾಶೈಲಿ, ಮಹಾಕಲ್ಪನೆ ಮೊದಲಾದ ತತ್ವಗಳಿಂದ ಕಾವ್ಯ ಇಡೀ ಜಗತ್ತಿನ ನಾಡಿ ಮಿಡಿತವನ್ನು ಮುಟ್ಟಿದೆ ಜನಜೀವನ ಸುಧಾರಣೆಯಾಗುವಲ್ಲಿ, ಬದುಕು ಪವಿತ್ರಗೊಳಿಸುವಲ್ಲಿ ಬದುಕಿನ ಜೀವನಾದರ್ಶಗಳ ನ್ಶೆಜಚಿತ್ರಣ ಕಟ್ಟಿಕೊಟ್ಟಿರುವ ವಾಲ್ಮೀಕಿ ಮಹರ್ಷಿಗಳ ಪಾತ್ರ ಹಿರಿದಾಗಿದೆ ರಾಮಾಯಾಣದಂಥ ಮಹಾಕಾವ್ಯ ಬರೆದು ನಾಡಿಗೆ ಬೆಳಕಾಗಿದ್ದಾರೆ.
ಬದುಕಿನಲ್ಲಿ ಸಂಘರ್ಷ ಅನಿವಾರ್ಯ, ಅಂತಿಮವಾಗಿ ಗೆಲುವು ಮಾತ್ರ ಸತ್ಯ, ಧರ್ಮ ನಿಸ್ವಾರ್ಥ ತುಂಬಿದ ಮಾನವೀಯ ಮೌಲ್ಯಗಳಿಗೆ ಎನ್ನುವ ಸಾರ್ವಕಾಲಿಕ ಜೀವನದರ್ಶನವನ್ನು ನೀಡಿರುವುದರಿಂದ ಜೊತೆಗೆ ಜನಸಾಮಾನ್ಯ ಕಲ್ಯಾಣವೇ ಕೃತಿಯ ಪ್ರಧಾನ ಆಶಯವಾಗಿರುವುದರಿಂದ, ಜೊತೆಗೆ ಜನಸಾಮಾನ್ಯರ ಕಲ್ಯಾಣವೇ ಕೃತಿಯ ಪ್ರಧಾನ ಆಶಯವಾಗಿರುವುದರಿಂದ ಯುಗಯುಗಗಳೇ ಕಳೆದರೂ ರಾಮಾಯಣದ ನಮ್ಮಲರಲ್ಲಿ ಜೀವಂತವಾಗಿದೆ ಎಂದರು.
ಕಲಬುರಗಿ ವಿಭಾಗದ ಸಹಾಯಕ ಆಯುಕ್ತರಾದ ಮಮತಾ ಕುಮಾರಿ ಭಾವಚಿತ್ರ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿಸಿ ಉದ್ಪಾಟಿಸಿದರು.
ಚಿತ್ತಾಪೂರ ತಾಲೂಕಿ ಚಿಂಚೋಳಿ(ಹೆಚ್)ಪ್ರೌಢಶಾಲೆ ಸಹಶಿಕ್ಷಕಿ ಶ್ರೀದೇವಿ ಗಂಗಾಧರ ಕಾಪ್ಸೆ ಉಪನ್ಯಾಸ ನೀಡುತ್ತಾ ಮಾತನಾಡಿ, ನಾಲ್ಕು ಯುಗಗಳಲ್ಲಿ ಒಂದಾದ ತ್ರೇತಾಯುಗ, ಅದರ ಮೊದಲ ಗುರು ವಾಲ್ಮೀಕಿ ಅವರಾಗಿದ್ದರು ಆಜ್ಞಾನದಿಂದ ಜ್ಞಾನ ಜ್ಯೋತಿ ಹಚ್ಚಿದ ಮಹಾನ್ ವ್ಯಕ್ತಿ ಅವರದು ಎಂದರು.
ಮೂಲತ: ಬೇಟಿಗಾರ ವಂಶಕ್ಕೆ ಸೇರಿದ ಇವರ ಮೂಲ ವೃತಿ ಬೇಟಿಯಾಡುವುದಾಗಿತ್ತು ಸಮಾಜಕ್ಕೆ ಆದರ್ಶ ಪುರುಷರಾದ ಮಹರ್ಷಿ ವಾಲ್ಮೀಕಿ ಅವರ ಜೀವನಗಾಥೆ ಆಗಾಧವಾದದ್ದು, ಜ್ಞಾನದ ಖಣಿಯಾಗಿದ್ದ ರತ್ನಾಕರ ಎಂಬ ಹೆಸರಿನವರೇ ಮುಂದೊಂದು ದಿನ ಮಹರ್ಷಿ ವಾಲ್ಮೀಕಿ ಆಗಿ ಉದಯವಾಗುತ್ತಾರೆ.
ವಾಲ್ಮೀಕಿ ಮಹರ್ಷಿಗಳ ಜಯಂತಿ ಎಂದರೆ ರಾಮಯಾಣ ಮಹಾಕಾವ್ಯದ ಸ್ಮರಣೆ 24 ಸಾವಿರ ಶ್ಲೋಕದ ಈ ರಾಮಯಾಣವು ಇಡೀ ಹಿಂದೂ ರಾಷ್ಟ್ರಕ್ಕೆ ಅತಿ ದೋಡ್ಡ ಅತ್ಯಮೂಲ ಸಂಪತ್ ಆಗಿದೆ
24 ಸಾವಿರ ಶ್ಲೋಕದ 4 ಲಕ್ಷ 80 ಸಾವಿರ ಪದಗಳುಳ್ಳ ಮಹಾಕಾವ್ಯ ರಾಮಾಯಾಣವನ್ನು ಬರೆದು ಇತಿಹಾಸವನ್ನು ನಿರ್ಮಿಸುತ್ತಾರೆ ಮಹರ್ಷಿ ವಾಲ್ಮೀಕಿಯವರು ಕೇವಲ ವಾಲ್ಮೀಕಿ ಸಮಾಜಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕೆ ಮಹಾಗುರು ಆಗಿದ್ದಾರೆ. ಅವರ ಆದರ್ಶ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಅಂಕಪಡೆದ ಎಸ್.ಎಸ್.ಎಲ್.ಸಿ. ಹಾಗೂ ಪದವಿ ಪೂರ್ವ ಹಾಗೂ ಒಬ್ಬ ಎಂ.ಬಿ.ಬಿ.ಎಸ್. ಉತ್ತೀರ್ಣರಾಗಿರುವ ವಿದ್ಯಾರ್ಥಿನಿಗೆ ಸನ್ಮಾನಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭ ಸ್ವಾಗತಿಸಿದರು..ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ನಂದಕುಮಾರ ಮಾಲೀ ಪಾಟೀಲ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ರೆಡ್‍ಕ್ರಾಸ್ ಸಂಸ್ಥೆ 2000 ರೂಪಾಯಿಗಳ ಚೆಕ್‍ನ್ನು ನೀಡಿದರು.
ಇದಕ್ಕೂ ಮುನ್ನ ಎಸ್.ವಿ.ಪಿ. ವೃತ್ತದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯ್ ತರನ್ನುಮ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ವಾಲ್ಮೀಕಿ ಸಂಘದ ಗೌರವ ಅಧ್ಯಕ್ಷ ಚೆನ್ನಪ್ಪಾ ಆರ್. ಸೂರಪುರಕರ್, ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ನಂದಕುಮಾರ ಮಾಲಿಪಾಟೀಲ,ಗುರುರಾಜ ನರಿಬೊಳ, ವಿಜಯ ಕುಮಾರ ಸೇರಿದಂತೆ ಸಮಾಜ ಮುಖಂಡರು ವಾಲ್ಮೀಕಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮೆರವಣಿಗೆ ಚಾಲನೆ ನೀಡಿದರು.