ಸತ್ಯ ಮತ್ತು ಶಾಂತಿಯೊಂದಿಗೆ ಪರಮಾತ್ಮನಲ್ಲಿ ಒಂದಾಗಿರುವುದೇ ಆಧ್ಯಾತ್ಮ


ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ7: ಪರಮಾತ್ಮನೊಂದಿಗೆ ಕಾಂಟ್ರಾಕ್ಟ್ ಆಗಿರುವುದಿಕ್ಕಿಂತ ಕನೆಕ್ಟ್ ಆಗಿರುವುದೇ ನಿಜವಾದ ಆಧ್ಯಾತ್ಮ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ಹೊಸಪೇಟೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸತ್ಯ ಮತ್ತು ಶಾಂತಿ ಪರಮಾತ್ಮನಲ್ಲಿ ಒಂದಾಗುವಂತೆ ಮಾಡುತ್ತದೆ, ಈ ಶಾಂತಿಯೇ ಪರಮಾತ್ಮನ ಆರಾಧನೆಯಾಗಿದೆ ಎಂದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯ ಇಂತಹ ಮಾನಸ್ಸುಗಳನ್ನು ಶಾಂತಿ ಮತ್ತು ಸತ್ಯದೊಂದಿಗೆ ಬಾಳವುದನ್ನು ಕಲಿಸಿಕೊಡಲು ಶ್ರಮಿಸುತ್ತಿದೆ ಎಂದು ಬ್ರಹ್ಮಕುಮಾರಿಯರ ಸೇವೆಯನ್ನು ಶ್ಲಾಘಿಸಿದರು.
ಭಾರತೀಯ ಸ್ಟೇಟ್ ಬ್ಯಾಂಕ್‍ನ ಪ್ರಾದೇಶಿಕ ವ್ಯವಸ್ಥಾಪಕ ಅಮಿತ್‍ಗೋಯಲ್ ಹಾಗೂ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಸಂಚಾಲಕಿ ಮಾನಸಾಅಕ್ಕ ಮಾತನಾಡಿ ನಾವು ಕಲುಷಿತಗೊಂಡ ಪ್ರಕೃತಿಯನ್ನು  ಸಕಾರಾತ್ಮಕಥೆಯತ್ತ ಕೊಂಡೈಯಬೇಕು ಇದಕ್ಕೆ ಆಧ್ಯಾತ್ಮ ವೇದಿಕೆಯಾಗಿದೆ  ಭವಿಷ್ಯಕ್ಕೂ ಶುದ್ಧ ಪರಿಸರವನ್ನು ನೀಡಬೇಕಾಗಿದ್ದು ಹೊಣೆಗಾರಿಕೆಯನ್ನು ನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಮಕ್ಕಳು ಪ್ರಕೃತಿ ರಕ್ಷಣೆಯ ಉದ್ದೇಶದಿಂದ ಆಯೋಜಿಸಿದ್ದ ಚಿತ್ರಕಲಾ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇಯಿತ ಮಕ್ಕಿಳಿಗೆ ಬಹುಮಾನ ಹಾಗೂ ಗಿಡಮರಗಳನ್ನು ನೀಡಿ ಪುರಸ್ಕರಿಸಿದರು.