ಸತ್ಯ ನುಡಿಯುವುದೇ ಸಾಧನೆ ಎಂಬುದನ್ನು ತಿಳಿಸಬೇಕು; ಡಾ.ದೊಡ್ಡರಂಗೇಗೌಡ

ದಾವಣಗೆರೆ.ಜು.೧೫:  ಚಿತ್ರದುರ್ಗದ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಆಧುನಿಕ ಬಸವೇಶ್ವರರುಎಂದು ಹಾವೇರಿಯಲ್ಲಿ ನಡೆಯಲಿರುವ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ. ದೊಡ್ಡರಂಗೇಗೌಡ ಬಣ್ಣಿಸಿದರು.ನಗರದ ಶಿವಯೋಗಾಶ್ರಮದಲ್ಲಿ ಬಸವ ಚೇತನ ಶ್ರೀ ಮನ್ಮಹಾರಾಜ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 65ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿಯ ಮೂರನೇ ದಿನ ಕಾರ್ಯಕ್ರಮದಲ್ಲಿ ವಚನ ಸಂಸ್ಕೃತಿಯ ಸಮುದಾಯ ತತ್ವ ಮತ್ತು ಸಮಕಾಲೀನ ಸಂದರ್ಭ ಡಿ.ಲಿಟ್ ಕೃತಿ ಬಿಡುಗಡೆ ಗೊಳಿಸಿ ಮಾತನಾಡಿದರು.ಡಾ. ಶಿವಮೂರ್ತಿ ಮುರುಘಾ ಶರಣರು ಜಗತ್ತಿಗೆ ಒಂದು ಪವಾಡವಾಗಿ ಕಾಣುತ್ತಿದ್ದಾರೆ.‌ ಬಸವಣ್ಣನವರ ಕ್ರಾಂತಿಕಾರಿ ಆಲೋಚನೆ ಮೈಗೂಡಿಸಿಕೊಂಡವರು. ಅವರು ಮಾನವೀಯ ಹೃದಯವುಳ್ಳವರು. ಅವರ ನೇತ್ರಗಳಲ್ಲಿ ತಾಯಿಯ ಮಮತೆಯ ಕಾಣುತ್ತದೆ ಎಂದು ತಿಳಿಸಿದರು.ಡಾ. ಶಿವಮೂರ್ತಿ ಮುರುಘಾ ಶರಣರು ವಚನಗಳ ಸಾರಾಸಾರವನ್ನು ಇಂದಿನ ಕಾಲಕೆ ಅನುಗುಣವಾಗಿ ಡಿಲಿಟ್ ಕೃತಿ ರಚಿಸಿದ್ದಾರೆ. ಅಂತಹ ಕೃತಿಯನ್ನು ಬಿಡುಗಡೆ ಮಾಡುವ ಅವಕಾಶ ನನ್ನ ಸೌಭಾಗ್ಯ ಎಂದು ತಿಳಿಸಿದರು.ಎಲ್ಲಿ ಆದರ್ಶ ತಪ್ಪುತ್ತದೆ ಅಲ್ಲಿ ಜೀವನ ಮಟ್ಟ ಅಧೋಗತಿಗೆ ಹೋಗುತ್ತದೆ. ಮಾಲಿನ್ಯ ಎಲ್ಲ ಕಡೆ ಪಸರಿಸಿದೆ. ಹಾಗಾಗಿಯೇ ಜಡಿ, ಜೋರು ಮಳೆ ಆಗುತ್ತಿದೆ. ಇದು ಎಲ್ಲವೂ ಮಾನವರು ಮಾಡಿರುವ ಅಹಿತ ಕಾರ್ಯಗಳ ಫಲ.‌ ಕ್ಷುಲ್ಲಕ ಕಾರಣಗಳು ಆಘಾತಕಾರಿ ಘಟನೆ ಕಾಣ ಬರುತ್ತಿದೆ. ಇಂತಹ ಆಘಾತಕಾರಿ ಸಂದರ್ಭದಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಲು ಮುರುಘಾ ಶರಣರಂತಹವರು ಮುಂದಾಗಬೇಕು ಎಂದು ಆಶಿಸಿದರು.ಮುರುಘಾ ಶರಣರು ಚಿರಂತನ ಚಿಂತಕರು. ವಚನಗಳು ಆಶುಕವಿತೆ ಅಲ್ಲ. ಅವಿಭಾಜಿತ ಸಾರಗಳ ಸಾರ. ವಚನ ಓದಲು ಬದುಕನ್ನೇ ಸಮರ್ಥಿಸಿಕೊಂಡರೂ ಎಲ್ಲ ವಚನಗಳ ಓದಲು ಸಾಧ್ಯವಿಲ್ಲ ಎಂದು ತಿಳಿಸಿದರು.ನಾವಿರುವ ನೆಲವನ್ನೇ ಅನುಭವ ಮಂಟಪ ಆಗಬೇಕು. ಪ್ರತಿ ಮಠದ ಸ್ವಾಮಿಗಳು ಭಕ್ತರಿಗೆ ಅಕ್ಕರೆ, ಅಂತಃಕರಣ, ಧರ್ಮದ ನಂಬುಗೆ ಆದರ್ಶ ಆಗಬೇಕು ಎಂದು ತಿಳಿ ಹೇಳಬೇಕು ಎಂದು ಮನವಿ ಮಾಡಿದರು.ಬಸವಣ್ಣನವರು ಮುತ್ತಿನಂತ ಮಾತು ಹೇಳಿದ್ದಾರೆ. ಸತ್ಯ ನುಡಿಯುವುದೇ ಸ್ವರ್ಗ ಎಂದು ಹೇಳಿದ್ದಾರೆ. ಸತ್ಯ ನುಡಿಯುವುದೇ ಸಾಧನೆ ಎಂಬುದನ್ನು ತಿಳಿಸಬೇಕು. ವ್ಯಕ್ತಿತ್ವ ಪಾವನವಾಗಲು ದಿಟ ನುಡಿಯುವ ಕೈಂಕರ್ಯ ಎಲ್ಲರದ್ದಾಗಬೇಕು ಎಂದರು. ವೇದನೆ ಮತ್ತು ಯಾತನೆಯ ಜೊತೆಜೊತೆಯಲ್ಲೇ ಜೀವನ ಸಾಗಿಸಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.ವೇದನೆ ಇಲ್ಲದ ಕ್ಷೇತ್ರವೂ ಯಾವುದೂ ಇಲ್ಲ. ಸ್ವಾಮೀಜಿ, ರಾಜಕಾರಣಿ, ಸಾಹಿತಿ ಎಲ್ಲರಲ್ಲೂ ವೇದನೆ ಇದೆ.‌ ಸ್ವಾಮೀಜಿ ಯವರು ಸಹ ವೇದನೆಯಿಂದ ಹೊರತಾ ಗಿಲ್ಲ. ಬೇರೆಯವರು ವೇದನೆ ಹೇಳಿಕೊಳ್ಳು ವರು‌. ಆದರೆ, ಸ್ವಾಮೀಜಿಗಳು ಹೇಳಿ ಕೊಳ್ಳದೆ ಅವರೇ ಅನುಭವಿಸುತ್ತಾರೆ ಎಂದು ತಿಳಿಸಿದರು.ಚಿತ್ರದುರ್ಗದ ಬೃಹನ್ಮಠ ಎಲ್ಲ ಪೀಠಗಳು ಅಗ್ನಿಪೀಠಗಳು. ಉರಿಪೀಠಗಳು. ಅದರ ಮೇಲೆ ಕುಳಿತುಕೊಳ್ಳುವುದು ಅಷ್ಟೊಂದು ಸುಲಭ ಅಲ್ಲ.‌ ಆದರೂ, ಪೀಠದ ಮೇಲೆ ಕುಳಿತವರು ಉರಿಯಬಾರದು ಎಂದು ಮಾರ್ಮಿಕವಾಗಿ ಹೇಳಿದರು.ಎಲ್ಲರ ವೇದನೆಗೆ ಸಂವೇದನೆ ಮಾಡಬೇಕು. ಸಂವೇದನೆಯೇ ನಮ್ಮ ಜೀವನದ ಮುಖ್ಯ ಸಾರ. ವೇದನೆಗೆ ಸಂವೇದನೆಯ ಮೂಲಕ ಕೆಲಸ ಮಾಡುತ್ತಿದ್ದೇವೆ. ನಮಗೆ ಶ್ರೀಮಂತ ಬದುಕಿಗಿಂತಲೂ ಸಂವೇದನೆಯ ಜೀವನ ನಡೆಸುವುದು ತಮಗೆ ಬಹಳ ಇಷ್ಟದ ಕೆಲಸ ಎಂದು ತಿಳಿಸಿದರು.ಈ ವೇಳೆ ವಿರಕ್ತ ಮಠದ ಬಸವಪ್ರಭು ಶ್ರೀ, ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಹಾಗೂ ಮಠದ ಭಕ್ತರು ಇದ್ದರು.