ಸತ್ಯ, ಧರ್ಮ ಮತ್ತು ಸೇವೆಯಿಂದ ನೆಮ್ಮದಿ

ಕೋಲಾರ,ಏ.೨೦:ನಮ್ಮ ಜೀವನದಲ್ಲಿ ಒಳ್ಳೆಯ ಕೆಲಸಗಳು, ಸತ್ಯ ಜೀವನವನ್ನು, ಧರ್ಮಕಾರ್ಯಗಳನ್ನು ಮಾಡಿ ಸೇವೆಯೇ ಮುಖ್ಯ ಧ್ಯೇಯವಾಗಿ ಜೀವನ ಮಾಡಿದರೆ, ಶನಿದೇವರು ನಮ್ಮ ಜೀವನ ಬದುಕಿನಲ್ಲಿ ಪ್ರವೇಶ ಮಾಡುವುದಿಲ್ಲ. ಹಾಗೂ ಕಾಟವನ್ನು ಕೊಡುವುದಿಲ್ಲ ಎಂದು ಆಧ್ಯಾತ್ಮಿಕ ಚಿಂತಕ ಡಾ.ಪೋಸ್ಟ್ ನಾರಾಯಣಸ್ವಾಮಿ ತಿಳಿಸಿದರು.
ವೀರಾಪುರ ಗೇಟ್‌ನಲ್ಲಿರುವ ಕೈವಾರ ತಾತಯ್ಯ ಸದ್ಗುರು ಮಠದಲ್ಲಿ ಅಂಚೆರತ್ನ ಬಳೇ ಸೀತಾರಾಮಯ್ಯ ಹಾಗೂ ಕುಟುಂಬದವರಿಂದ ಚಿನ್ಮಯದಾಸರ ವಿರಚಿತ ಶನಿಪ್ರಭಾವ ಎಂಬ ಕಥಾಕಾಲಕ್ಷೇಪವನ್ನು ಏರ್ಪಡಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸುಗಟೂರಿನ ಬಳೇ ಸೀತಾರಾಮಯ್ಯನವರು ವಂಶಪಾರಂಪರ್ಯ ಸಂಗೀತ ಕುಟುಂಬ ಕಲಾವಿದರಾಗಿದ್ದು, ಅನೇಕ ಶಿಷ್ಯರನ್ನು ಹೊಂದಿದ್ದು, ಉಚಿತವಾಗಿ ಸಂಗೀತ ಹಾಗೂ ನಾಟಕ ನಿರ್ದೇಶನ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳನ್ನು ನಾವು ಕಾಣುವುದು ವಿರಳ. ಅವರಿಗೆ ದೇವರ ಆರ್ಶೀವಾದ ಸಿಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕಥಾಭಾಗವನ್ನು ಯಲವಾರ ವೈ.ಎನ್.ಬೈರೇಗೌಡ, ಎಂ.ಚನ್ನಯ್ಯ ಮತ್ತು ಟಿ.ಶ್ರೀನಿವಾಸ ಕಲ್ಲಂಡೂರು, ಮಠಧರ್ಮದರ್ಶಿ ಗೋವಿಂದಸ್ವಾಮಿ ನಡೆಸಿಕೊಟ್ಟರು. ಹಾರ್ರೋನಿಯಂ ಸಹಕಾರ ಬಳೇ ಸೀತಾರಾಮಯ್ಯ, ಅರಹಳ್ಳಿ ರಾಮಚಂದ್ರಪ್ಪ, ಕೀಬೋರ್ಡ್ ಭರತ್‌ಕುಮರ್ ಸುಗಟೂರು, ಮೃದಂಗ ಸಹಕಾರ ಎಸ್.ಮುರಳಿ ಉರಗಿಲಿ, ಘಡ ಸಹಕಾರ ಮೀಸೆ ವೆಂಕಟೇಶಪ್ಪ, ಅರಹಳ್ಳಿ ಗೋಪಾಲಪ್ಪ, ತಬಲ ಸಹಕಾರ ಸುಗಟುರು ಕಿಶೋರ್‍ಕುಮಾರ್ ನೀಡಿದರು.
ಪೂಜಾ ಕಾರ್ಯಗಳನ್ನು ಪ್ರಧಾನ ಅರ್ಚಕರಾದ ಹೆಚ್.ಜಿ.ಜಯರಾಂ ಅರಳಿಮರ ಹೊಸಹಳ್ಳಿಯವರು ನಡೆಸಿಕೊಟ್ಟರು. ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಸುಗಟೂರಿನ ಬಳೇ ಗೌರಮ್ಮರವರು ವಹಿಸಿದ್ದರು. ಹರಳಿಮರ ಹೊಸಹಳ್ಳಿ ಭಜನೆ ತಂಡ ಮತ್ತು ಭಗವಾನ್ ಸಿಂಗ್ ಭಜನೆ ತಂಡ ಕೊಂಡೇನಹಳ್ಳಿ, ಸೈಯದ್ ಪಾಷ ಬಜನೆ ತಂಡ ಮುದುವಾಡಿ ತಂಡಗಳು ಪಾಲ್ಗೊಂಡಿದ್ದರು.