ಸತ್ಯವಾಣಿ ನಗರದಲ್ಲಿ ಶಾಸಕರ ಪ್ರಚಾರ


(ಸಂಜೆವಾಣಿ ವಾರ್ತೆ)
 ಬಳ್ಳಾರಿ, ಏ.11: ನಗರದ 35ನೇ ವಾರ್ಡ್ ನ ಸತ್ಯವಾಣಿ ನಗರ, ಇಂದಿರಾನಗರ ಪ್ರದೇಶದಲ್ಲಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರ ನೇತೃತ್ವದ ಬಿಜೆಪಿಗೆ ಮತ ನೀಡುವಂತೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಯ್ತು.
ಜನತೆ ತಮ್ಮ ಪ್ರದೇಶಕ್ಕೆ ಬಂದ ಶಾಸಕರಿಗೆ ಶಾಲು ಹೊದಿಸಿ, ಹೂ ಮಾಲೆ ಹಾಕಿ ಸನ್ಮಾನಿಸಿ ಗೌರವಿಸಿದರು. ಹತ್ತಾರು ವರ್ಷಗಳಿಂದ ನಮ್ಮ ಮನೆಗಳಿಗೆ ಪಟ್ಟಾ ಇರಲಿಲ್ಲ. ನೀವು ನಮಗೆ ಪಟ್ಟ ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು ಅಷ್ಟೇಅಲ್ಲ ಈ ಬಾರಿ ನಮ್ಮ ಮತ ನಿಮಗೆ ಎಂಬ ಭರವಶೆ ನೀಡಿದರು.  ಈ ಸಂದರ್ಭದಲ್ಲಿ  ಪ್ರತಾಪ್ ರೆಡ್ಡಿ, ಶಿವಾನಂದ, ಪ್ರಭಾಕರ್, ಶ್ರೀನಿವಾಸ ಮೋತ್ಕರ್ ಹಾಗು ಸ್ಥಳೀಯ ಮುಖಂಡರು, ಕಾರ್ಯಕರ್ತರು, ಪಕ್ಷದ ಬೆಂಬಲಿಗರು ಇನ್ನಿತರರು ಇದ್ದರು.

One attachment • Scanned by Gmail