ಸತ್ಯಪ್ರೇಮ್ ಕೀ ಕಥಾ ನೀರಸ ಪ್ರದರ್ಶನ

ಮುಂಬೈ,ಜು.೬-ಬಾಲಿವುಡ್ ನಟಿ ಕಿಯಾರ ಅಡ್ವಾಣಿ ಹಾಗೂ ನಟ ಕಾರ್ತಿಕ್ ಆರ್ಯನ್ ಅಭಿನಯಿಸಿರುವ ಸತ್ಯಪ್ರೇಮ್ ಕಿ ಕಥಾ ಸಿನಿಮಾ ಒಂದು ವಾರದಲ್ಲಿ ೫೦ ಕೋಟಿ ರೂ ಕಲೆಕ್ಷನ್ ಮಾಡಿಕೊಳ್ಳುವ ಮೂಲಕ ನೀರಸ ಪ್ರದರ್ಶನ ಕಂಡಿದೆ.
ಸಿನಿಮಾ ರಿಲೀಸ್ ಆಗಿ ಒಂದು ವಾರ ಕಳೆದರೂ ಕೇವಲ ೫೦ ಕೋಟಿ ಕಲೆಕ್ಷನ್ ಮಾತ್ರ ಮಾಡಿಕೊಂಡಿದೆ. ರಿಲೀಸ್ ಆದ ದಿನ ೯ ಕೋಟಿ ಕಲೆಕ್ಷನ್ ಮಾಡಿಕೊಂಡಿದ್ದ ಸಿನಿಮಾ ನಂತರದ ದಿನಗಳಲ್ಲಿ ನೀರಸ ಪ್ರದರ್ಶನ ಕಂಡಿದೆ.
ಕಳೆದ ವರ್ಷ ಇದೇ ಜೋಡಿ ಭೂಲ್ ಭೂಲೆಯಾ ೨ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿತ್ತು. ಆದರೆ ಈ ಬಾರಿ ಸತ್ಯಪ್ರೇಮ್ ಕಿ ಕಥಾ ಸಿನಿಮಾ ಅಷ್ಟೇನೂ ಸಕ್ಸಸ್ ತಂದು ಕೊಟ್ಟಿಲ್ಲ. ಸಿನಿಮಾ ಬಗ್ಗೆ ಉತ್ತಮ ವಿಮರ್ಶೆ ಬಂದರೂ ಸಹ ಥಿಯೇಟರ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿಲ್ಲ. ಹೀಗಾಗಿ ೫೦ ಕೋಟಿ ಕಲೆಕ್ಷನ್ ಮಾಡಿಕೊಳ್ಳಲು ಸಿನಿಮಾ ಹೆಣಗಾಡಿದೆ.
ಸಮೀರ್ ವಿದ್ವಾನ್ಸ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಕಿಯಾರ ಹಾಗೂ ಕಾರ್ತಿಕ್ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದು, ಉಳಿದಂತೆ ಸುಪ್ರಿಯಾ ಪತಕ್ ಕಪೂರ್, ಗಜರಾಜ್ ರಾವ್, ಸಿದ್ಧಾರ್ಥ್ ರಾಂದೇರಿಯಾ ಸೇರಿದಂತೆ ದೊಡ್ಡ ತಾರ ಬಳಗವೇ ಸಿನಿಮಾದಲ್ಲಿ ನಟಿಸಿದೆ.