ಸತ್ಯಪ್ರತಿಪಾದನ ಸತ್ಯಾಗ್ರಹದಲ್ಲಿ ಜಿಲ್ಲೆಯ ಸಾವಿರಾರು ಭಕ್ತರು ಭಾಗಿ

ವಿಜಯಪುರ, ಆ.4-ಅಗಸ್ಟ 1 ಮತ್ತು 2 ರಂದು ಖ್ಯಾತ ನ್ಯಾಯವಾದಿ ಬಿ.ಡಿ. ಹಿರೇಮಠ ನೇತೃತ್ವದಲ್ಲಿ ಬೆಂಗಳೂರಿನ ಪ್ರೀಡಂಪಾರ್ಕನಲ್ಲಿ ನಡೆಯುತ್ತಿರುವ ಸತ್ಯಪ್ರತಿಪಾದನ ಸತ್ಯಾಗ್ರಹದ 33 ಹಾಗೂ 34 ನೇ ದಿನದ ಸರತಿ ಸತ್ಯಾಗ್ರಹದಲ್ಲಿ ವಿಜಯಪುರದ ಸಾವಿರಕ್ಕೂ ಹೆಚ್ಚು ಜಂಗಮ ಬಂಧುಗಳು ಭಾಗವಹಿಸಿದ್ದರು.
ಕಾನೂನುಬದ್ದವಾಗಿ ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ 92 ಜಾತಿಗಳು ವಂಚಿತವಾಗಿದ್ದು ಪಟ್ಟಿಯಲ್ಲಿ 19ನೇ ಸ್ಥಾನದ ಬೇಡಜಂಗಮ ಸಮಾಜದ ಸರ್ಟಿಫಿಕೇಟ್ ನೀಡಲು ಕೆಲವರು ಪಿತೂರಿ ನಡಸಿದ್ದು ಕೂಡಲೇ ಸರ್ಕಾರ ಆದೇಶ ಪ್ರತಿ ನೀಡಿದಿದ್ದರೆ ಉಗ್ರ ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದರು.
ಕುಲಶಾಸ್ತ್ರ ಅಧ್ಯಯನದಲ್ಲಿ ಡಾ. ಕಾಮತ ವರದಿಯಲ್ಲಿ ವೀರಶೈವ ಜಂಗಮರೇ ಬೇಡ ಜಂಗಮರು ಅಂತಾ ಹೇಳಿದ್ದು ಸುಪ್ರೀಂಕೋರ್ಟ ಸಹ ಇದನ್ನು ಮಾನ್ಯತೇ ಮಾಡಿದ್ದು ಇದಕ್ಕೆ ಸರಕಾರ ಅಡ್ಡಿ ಪಡಿಸಿದರೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವದಾಗಿ ಎಚ್ಚರಿಸಿದರು.
ವಿಜಯಪುರ ಜಿಲ್ಲೆಯ ಮುಖಂಡ ರಾಜು ವೀ. ಗಚ್ಚಿನಮಠ ಮಾತನಾಡಿ ಇಡೀ ವಿಜಯಪುರ ಜಿಲ್ಲೆಯ ಜಂಗಮ ಸಮಾಜ ಬಿ.ಡಿ. ಹಿರೇಮಠರ ಬೆನ್ನಿಗೆ ಇದ್ದು ಅವÀರನ್ನು ಬೆಂಬಲಿಸುವದಾಗಿ ಹೇಳಿದರು.
ಸಾಮಾಜಿಕ ಹೋರಾಟದಲ್ಲಿ ಸೋಲಿಲ್ಲದ ಖ್ಯಾತಿ ಹೊಂದಿರುವ ಬಿ.ಡಿ. ಹಿರೇಮಠರನ್ನು ಇಡೀ ರಾಜ್ಯದ ಸಮಾಜ ಪಕ್ಷಾತೀತವಾಗಿ ಬೆಂಬಲಿಸಿದ್ದು ಪ್ರತಿಯೊಬ್ಬ ಜಂಗಮರ ಹೃದಯ ಗೆದ್ದಿದ್ದಾರೆ ಎಂದರು.
ಬಳ್ಳಾರಿಯ ಕಲ್ಯಾಣಮಠದ ಶ್ರೀಗಳು, ಮಮದಾಪುರ ವಿರಕ್ತಮಠ ಶ್ರೀಗಳು ಕೋಲಾರದ ಗಣಕುಮಾರ, ಸಿಂದಗಿಯ ಶಂಕ್ರಯ್ಯ ಹಿರೇಮಠ, ಶೈಲಜಾ ಸ್ಥಾವರಮಠ, ಅರಕೇರಿಮಠ, ಪ್ರಭುಸ್ವಾಮಿ ಹಿರೇಮಠ ಜೈನಾಪೂರ, ಶಾಂತಾಬಾಯಿ ಹಿರೇಮಠ, ಡಾ|| ವಸ್ತ್ರದ, ಸದಾಶಿವ ಕಾಖಂಡಕಿಮಠ, ದಯಾನಂದ ಧಾರವಾಡಮಠ, ಜಗದೀಶ ರೂಗಿಮಠ, ಅಥರ್ಗಾದ ಶಿವಯ್ಯ ಮಠಪತಿ, ಸಾಲೋಟಗಿಯ ಹಿರೇಪಟ್ಟ ಚನ್ನಬಸಯ್ಯ ಹಿರೇಮಠ, ನಿಂಗಯ್ಯ ಯಾದವಾಡಮಠ, ವಿಶ್ವೇಶ್ವರಯ್ಯ ಮಠಪತಿ, ಈಶ್ವರಯ್ಯ ಶಿರೋಳಮಠ, ತಿಕೋಟಾದ ಸೋಮನಾಥ ಮಠಪತಿ, ಎಸ್.ಎಸ್. ಹಿರೇಮಠ, ಸಿದ್ದಯ್ಯ ಹಳ್ಳಿ, ಸೇರಿ ಸಾಲೋಟಗಿ, ಮಮದಾಪೂರ, ಗುಣದಾಳ, ನಿಡಗುಂದಿ, ಮಸೂತಿ, ತಾಳಿಕೋಟಿ, ಬಬಲೇಶ್ವರ, ಕಾಖಂಡಕಿಯ ಮುಖಂಡರು ಹಾಗೂ ಸಾವಿರಕ್ಕೂ ಹೆಚ್ಚು ಜನ ಪ್ರೀಡಂ ಪಾರ್ಕನಲ್ಲಿ 2 ದಿನದ ಸತ್ಯಪ್ರತಿಸಾದನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.