ಸತ್ಯನಾರಾಯಣ ಪೇಟೆಯಲ್ಲಿ ಕೆಅರ್ ಪಿ ಅಭ್ಯರ್ಥಿ ಲಕ್ಷ್ಮೀ ಅರುಣ ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.27: ಬಡ ಜನರ ಶ್ರಮ ಎಂತಹುದು ಎಂದು ಈಗ ನನಗೆ ತಿಳಿದಿದೆ. ಉರಿ ಬಿಸಿಲಿನಲ್ಲೂ ನಿಮ್ಮ ದುಡಿಮೆ ಮನ ಕಲಕುವಂತಹುದು ಎಂದು ಬೀದಿ ವ್ಯಾಪಾರಿಗಳ ಸಮಾಲೋಚನೆ ನಡೆಸಿದ ನಗರ ಕೆಅರ್ ಪಿ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರ ಮಾತುಗಳಿವು. 
ಇಂದು ನಗರದ ಸತ್ಯನಾರಾಯಣ ಪೇಟೆಯಲ್ಲಿ ಮನೆ ಮನೆಗೆ ತೆರಳಿ  ಮತಯಾಚಿಸಿದ ಅವರು. ರಸ್ತೆಯಲ್ಲಿ ತರಕಾರಿ, ಹೂ, ಹಣ್ಣು ಮಾರಾಟ ಮಾಡುವ ಬಡ ಜನರೊಂದಿಗೆ ಮಾತನಾಡಿ, ಕುಟುಂಬ ನಿರ್ವಹಣೆಗೆ ನಿಮ್ಮ ಶ್ರಮ ಶ್ಲಾಘನೀಯ ಎಂದರು. ನಿಮ್ಮಂತಹ ಬಡಜನರ ಏಳಿಗೆ ಬಯಸಿರುವ ಜನಾರ್ಧನ ರೆಡ್ಡಿ ಅವರಿಗೆ ಶಕ್ತಿ‌ ತುಂಬಲು ಕೆಆರ್ ಪಿ ಪಕ್ಷಕ್ಕೆ ಮತ ನೀಡಿ, ಪ್ರತಿ ತಿಂಗಳು 2500 ರೂ ನೀಡಲಿದೆಂದು ತಿಳಿಸಿ ಮತ ಪಡೆಯುವ ಭರವಶೆ ಪಡೆದುಕೊಂಡರು.
ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.