ಸತ್ಯದ ನುಡಿಗಳನ್ನು ಬೆಂಬಲಿಸಿ-ಯಲ್ಲಪ್ಪ

ಬಂಗಾರಪೇಟೆ, ನ೨೫: ಹಂಸಲೇಖ ಪರ ಬ್ರಾಹ್ಮಣ್ಯದ ವಿರುದ್ಧ ಇಡೀ ರಾಜ್ಯಾಧ್ಯಂತ ಪ್ರಜ್ಞಾವಂತರು, ಸಂಘಟನೆಗಳು, ವಿದ್ಯಾರ್ಥಿಗಳು, ಕವಿಗಳು, ಕಲಾವಿದರು, ದನಿಯೆತ್ತಿ ಬೆಂಬಲ ಸೂಚಿಸಿ ಹೋರಾಟ ನಡೆಸುತ್ತಿರುವುದಕ್ಕೆ ಅಣ್ಣಯ್ಯ ನೇತೃತ್ವದ ದಸಸಂ-ಕರ್ನಾಟಕ, ಮತ್ತು ರಾಜ್ಯ ದಲಿತ ಕಲಾ ಮಂಡಳಿ ಬೆಂಬಲ ವ್ಯಕ್ತಪಡಿಸುತ್ತಾ ಇತ್ತೀಚೆಗೆ ಕೆಲವು ರಾಜಕೀಯ ನಾಯಕರುಗಳು ವಿಕೃತ ಸ್ವಾಮೀಜಿಗಳು ದಲಿತರ ಗೃಹವಾಸ್ತವ್ಯದ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಮನೆಗಳಿಗೆ ಭೇಟಿ ನೀಡಿ ಪುಕ್ಕಟೆ ಪ್ರಚಾರ ಪಡೆಯುತ್ತಿರುವುದು ಒಂದು ಅವಮಾನಕರ ಸಂಗತಿಯಾಗಿರುತ್ತದೆ. ಪರಿಶಿಷ್ಟರ ಮನೆಗಳಲ್ಲಿ ಸಹ ಭೋಜನಾ ಕೂಟದ ನಾಟಕ ಏರ್ಪಡಿಸಿ ಅವರ ಜಾತಿಯನ್ನು ಹರಾಜು ಹಾಕಿ ಜಾತಿನಿಂದನೆ ಮಾಡಲಾಗುತ್ತಿದೆ. ಹಾಗಾಗಿ ಪರಿಶಿಷ್ಟರ ಮನೆಗಳಲ್ಲಿ ಗ್ರಾಮ ವಾಸ್ಥವ್ಯ ಮಾಡಿರುವ ಮತ್ತು ಮಾಡುವ ಮೇಲ್‌ಜಾತಿಯ ರಾಜಕೀಯ ನಾಯಕರಾಗಲಿ ಸ್ವಾಮೀಜಿಗಳಾಗಲಿ ಅವರ ಮೇಲೆ ಸಂವಿದಾನಕವಾಗಿ ಸಂಬಂಧಪಟ್ಟ ಸರ್ಕಾರಗಳು ಜಾತಿ ನಿಂದನೆ ಕೇಸನ್ನು ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದಸಂಸ-ಕರ್ನಾಟಕ ರಾಜ್ಯ ಕಲಾ ಮಂಡಳಿ ಸರ್ಕಾರವನ್ನು ಒತ್ತಾಯಿಸುತ್ತಾ ಅಸ್ಪೃಶ್ಯತೆ, ಜಾತೀಯತೆ, ಅಸಮಾನತೆಗಳ ವಿರುದ್ಧ ದನಿಯೆತ್ತಿದ ರಾಷ್ಟ್ರ ಪ್ರಶಸ್ತಿ ಪುರಸೃತ ಪ್ರತಿಭಾನ್ವಿತ ಈ ನಾಡಿನ ಸಂಗೀತ ನಿರ್ದೇಶಕ, ಚಿತ್ರಸಾಹಿತಿ, ಡಾ.ಹಂಸಲೇಖ ಅವರ ಮೇಲೆ ನೀಡಿರುವ ದೂರುಗಳನ್ನು ಈ ಕೂಡಲೇ ಸರ್ಕಾರ ಹಿಂಪಡೆಯಬೇಕು ಮತ್ತು ದೂರು ನೀಡಿದವರ ಮೇಲೆ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕಲಾವಿದ ಯಲ್ಲಪ್ಪ ಮತ್ತು ಮಂಜುನಾಥ್ ಅಣ್ಣಯ್ಯ ಅವರು ಆಗ್ರಹಿಸಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.