ಸತ್ತೂರಿಗೆ ಜು 23 ರ0ದು ಕೂಡಲಿ ಶ್ರೀ ರಘುವಿಜಯತೀರ್ಥರು


ಸತ್ತೂರು,ಜು.20: ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ, ಬರುವ ಭಾನುವಾರ, ಜುಲೈ 23 ರ0ದು, ಬೆಳಿಗ್ಗೆ 6-30 ಘ0ಟೆಗೆ ಉದಯಗಿರಿಯಲ್ಲಿರುವ ಶ್ರೀ ಹನುಮ0ತ ಪುರಾಣಿಕ ಇವರ ನಿವಾಸದಲ್ಲಿ “ಅಧಿಕ ಮಾಸದ ಮಹತ್ವ” ಕುರಿತು ವಿಶೇಷ ಉಪನ್ಯಾಸ ಹಾಗೂ ಮು0ತಾದ ಧಾರ್ಮಿಕ ಕಾರ್ಯಕ್ರಮ, ಧಾರವಾಡದಲ್ಲಿ 21ನೇ ಚಾತುರ್ಮಾಸ್ಯ ವೃತ ಕೈಗೊ0ಡಿರುವ, ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಸ0ಸ್ಥಾನ ಶ್ರೀ ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠದ ಶ್ರೀ 1008 ಶ್ರೀ ರಘುಪ್ರಿಯ ತೀರ್ಥರ ಕರಕಮಲ ಸ0ಜಾತರಾದ ಶ್ರೀ 1008 ಶ್ರೀ ರಘುವಿಜಯತೀರ್ಥ ಶ್ರೀಪಾದ0ಗಳವರ ಘನ ಉಪಸ್ಥಿತಿ ಹಾಗೂ ದಿವ್ಯ ಸನ್ನಿಧಾನದಲ್ಲಿ ನಡೆಯುಲಿದೆ. ಪ್ರವಚನಕ್ಕಾಗಿ ಸ0ಪನ್ಮೂಲ ವ್ಯಕ್ತಿಗಳಾಗಿ ಹುಬ್ಬಳ್ಳಿಯ ತೊರವೀ ಗಲ್ಲಿಯ ಶ್ರೀ ರಾಘವೇ0ದ್ರ ಸ್ವಾಮಿಗಳ ಮಠದ ಪ0. ನರಹರಿ ಆಚಾರ್ಯ ವಾಳ್ವೇಕರ ಆಚಾರ್ಯರು ಆಗಮಿಸಲಿದ್ದಾರೆ.
ಕಾರ್ಯಕ್ರಮಗಳ ವಿವರ: ಪ್ರಾತ:ಕಾಲ: 6-30 ಕ್ಕೆ ಪಾದಪೂಜೆ, ಉದ್ಘಾಟನೆ, ಅನುಗ್ರಹ ಸ0ದೇಶ, 7-30 ಕ್ಕೆ ವಿಷ್ಣು ಸಹಸ್ರನಾಮ ಪಾರಾಯಾಣಾದಿಗಳು, 8-30 ಕ್ಕೆ ಪ್ರವಚನ 9-30 ಕ್ಕೆ ಉಪಹಾರ, 10-30 ಕ್ಕೆ ಸುಮ0ಗಲೆಯರಿ0ದ ತಾರತಮ್ಯ ಭಜನೆ, 11-30 ಕ್ಕೆ ದ0ಪತ್ತ ಪೂಜೆ, ಸನ್ಮಾನ 12-30 ಕ್ಕೆ ಸಮಾರೋಪಾದಿಗಳು ನಡೆಯಲಿವೆ. ಸಕಲ ಸದಸ್ಯರು ಸಕಾಲಕ್ಕೆ ಆಗಮಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ: 6361835710 ಸ0ಪರ್ಕಿಸಲು ಬಳಗದ ಸ0ಚಾಲಕರಾದ ರಘೋತ್ತಮ ಅವಧಾನಿಯವರು ತಿಳಿಸಿದ್ದಾರೆ.