ಸತ್ತವರ ಹೆಸರಿನಲ್ಲಿದ್ದ ಜಮೀನಿನ ನಕಲಿ ದಾಖಲೆ‌ಸೃಷ್ಟಿ; ಪ್ರತಿಭಟನೆ

ಹರಪನಹಳ್ಳಿ.ಜು.೨೩ : ಸತ್ತವರ ಹೆಸರಿನಲ್ಲಿದ್ದ ಜಮೀನುಗಳನ್ನು ನಕಲಿ ದಾಖಲೆಗಳ ಆಧಾರದ ಮೇಲೆ ಭೂಮಿ ನೋಂದಾ ಯಿತದಾನ ಸೃಷ್ಟಿಸಿದ ಪತ್ರ ಬರಹಗಾರರು ಮತ್ತು ಅಧಿಕಾರಿಗಳು ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಮಿತ್ರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಇಲ್ಲಿ ಉಪನೋಂದಾಣಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಉಪನೋಂದಣಾಧಿಕಾರಿಗೆ ಮನವಿ ಸಲ್ಲಿಸಿದರು.ರಾಜ್ಯ ಅಧ್ಯಕ್ಷ ಎಚ್.ವೆಂಕಟೇಶ್ ಮಾತನಾಡಿ, ಸುಳ್ಳು ವಂಶವೃಕ್ಷ ಹಾಗೂ ನಕಲಿ ದಾಖಲೆಗಳ ಮೂಲಕ ಸತ್ತವರ ಹೆಸರಿನಲ್ಲಿರುವ ಜಮೀನುಗಳು ಮತ್ತು ಪಾಲು, ಹಿಸ್ಸೆ ಬರಬೇಕಾದ ಜಮೀನು ಗಳನ್ನು ವಂಚಿಸುವ ಉದ್ದೇಶದಿಂದ ನಕಲಿ ಕಚೇರಿಯಲ್ಲಿ ನಕಲಿ ದಸ್ತಾವೇಜು ಗಳು ಬಳಕೆ ಮಾಡಿ ನೋಂದಾಣಿ ಮಾಡು ತ್ತಿದ್ದಾರೆ. ಇದರಿಂದ ಸಾಮಾನ್ಯ ರೈತಾಪಿ,ಬಡ ಜನರಿಗೆ ಆರ್ಥಿಕ ಮತ್ತು ಕಾನೂನಿನ ತೊಡಕುಂಟಾಗುತ್ತಿದೆ. ಅಲ್ಲದೇ ಸಂಬAಧವೇ ಇಲ್ಲದವರ ಜಮೀನುಗಳನ್ನು ಕಬಳಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ದೂರಿದರು.ಸ್ಥಳೀಯ ಬಾಣಗೇರಿ ಕಟ್ಟಿ ಕಾಶೀಂಸಾಬ್ ಅವರ ಸರ್ವೆ ನಂಬರ್ 166/ಎ ಪೈಕಿ ವಿಸ್ತೀರ್ಣ 7 ಸೆಂಟ್ಸ್ ಭೂಮಿ ವಾರಸುದಾರ ಮೃತಪಟ್ಟಿದ್ದರು, ಅವರು ಬದುಕಿದ್ದಾರೆ ಎಂದು ದಾಖಲೆ ಸೃಷ್ಟಿಸಿ,ಮತ್ತೊಬ್ಬರಿಗೆ ದಾನ ಮಾಡಿಸಲಾಗಿದೆ.ಇದನ್ನು ಪತ್ರ ಬರಹಗಾರ ಇಮ್ರಾನ್ ಭಾಷಾರವರೇ ನೋಂದಾಣಿ ಮಾಡಿಸಿದ್ದು,ಅವರ ಪರವಾನಿಗೆ ರದ್ದುಪಡಿಸಬೇಕು.ಇದರಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಕೆ.ರಾಜು, ದಾದಾಪೀರ್,ಮಾಬುಭಾಷಾ, ಹಾಲಪ್ಪ,ರೇಣುಕಮ್ಮ, ದಾದಾಪೀರ್,ರಾಜಪ್ಪ, ಖಾಜಾಪೀರ್ ಇತರರಿದ್ದರು