ಸತ್ತವರ ಸಂಖ್ಯೆಯಲ್ಲಿ ಸುಳ್ಳು ಹೇಳ್ತಾ ಇರೋ ನರೇಂದ್ರ ಮೋದಿ: ಕಿಡಿ

ಮೈಸೂರು: ಮೇ.30: ಸತ್ತವರ ಸಂಖ್ಯೆಯಲ್ಲಿ ಸುಳ್ಳು ಹೇಳ್ತಾ ಇರೋರು ಭಾರತ ದೇಶದ ಇತಿಹಾಸದಲ್ಲಿ ಯಾರಾದ್ರೂ ಇದ್ರೆ ಅದು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಂದು ಮಾಜಿ ಶಾಸಕರಾದ ಎಂ.ಕೆ ಸೋಮಶೇಖರ್ ಕಿಡಿ ಕಾಡಿದರಿ.
ಅವರು ಇಂದು ಬೆಳಿಗ್ಗೆ ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಮೋದಿ ನೇತೃತ್ವದ ಸರ್ಕಾರ 7 ವರ್ಷದ ಸಾಧನೆ ಸಂಭ್ರಮಾಚರಣೆ ಇದೆ ಅಂಥ ಕಾಣಿಸುತ್ತಿದೆ. ದೇಶದ ಉದ್ದಗಲಕ್ಕೂ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.
ಒಂದು ಸಣ್ಣ ಉದಾಹರಣೆ ಸಾಕ್ಷಿ ಸಮೇತವಾಗಿ ಮೊನ್ನೆ ದಿನ ಮೈಸೂರು ನಗರದಲ್ಲಿ ಕೋವಿಡ್ ನಿಂದ ಮಾತ್ರ ಸತ್ತವರ ಸಂಖ್ಯೆ 34. ಆದರೆ ಜಿಲ್ಲಾಡಳಿತ ಹೇಳಿರುವ ಸಾವಿನ ಸಂಖ್ಯೆ-12. ನಿನ್ನೆ ದಿನ ಕೋವಿಡ್ ನಿಂದ ಸತ್ತವರು ವಿಜಯನಗರ ಸ್ಮಶಾನ-8, ಜಯನಗರ ಸ್ಮಶಾನ-2, ಜೋಡಿ ತೆಂಗಿನ ಮರ ಸ್ಮಶಾನ-12, ಮುಸ್ಲೀಮರ ಸ್ಮಶಾನ 8, ಕ್ರಿಶ್ಚಿಯನ್ ಸ್ಮಶಾನ-3 ಒಟ್ಟು 33 ಆದರೆ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡುವಾಗ ಮೈಸೂರು ನಗರದಲ್ಲಿ 19 ಕೋವಿಡ್ ಸಾವು ಎಂದು ಹೇಳುತ್ತಾರೆ.
ಏಕೆ ಈ ರೀತಿ ಸಾವನ್ನು ಮುಚ್ಚಿಡುತ್ತಿದ್ದಾರೆ. ಇದೊಂದು ಸಣ್ಣ ನಗರದಲ್ಲಿ ಹೀಗೆ ಇನ್ನೂ ದೊಡ್ಡ ನಗರಗಳು ಬೆಂಗಳೂರಿನಂಥ ದೊಡ್ಡ ದೊಡ್ಡ ನಗರಗಳಲ್ಲಿ ಎಷ್ಟು ಸಾವಿನ ಸಂಖ್ಯೆಗಳನ್ನು ಮುಚ್ಚಿಡಬಹುದು. ಗುಜರಾತಿನಲ್ಲಿ ಸಾವಿನ ಸಂಖ್ಯೆಗಳನ್ನು ಸರ್ಕಾರ ಹೇಳುವುದಕ್ಕೂ ಮರಣ ಪತ್ರಗಳನ್ನು ವಿತರಣೆ ಮಾಡುವುದಕ್ಕೂ ಬಹಳಷ್ಟು ವ್ಯತ್ಯಾಸವಿದ್ದು ಇತರ ಸಾಕ್ಷಿ ಆಧಾರಗಳನ್ನು ಗಮನಿಸಿದಾಗ 61 ಸಾವಿರ ವ್ಯತ್ಯಾಸ ಬರುತ್ತದೆ.ಇದರ ಬಗ್ಗೆ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆ ನಡೆಯುತ್ತಲೇ ಇದೆ. ಈ ಬಿಜೆಪಿಯವರು ಸುಳ್ಳಿನ ಕಾರ್ಖಾನೆ ಎನ್ನುವುದು ಗೊತ್ತಿದೆ. ಆದರೆ ಸಾವಿನಲ್ಲೂ ಈ ಬಗೆಯ ದೊಡ್ಡ ಸುಳ್ಳು ಹೇಳುತ್ತಿರುವುದು ಈ ದೇಶದ ದುರಂತವೇ ಸರಿ. ಇನ್ನೂ ದಿನಾದಿನ ಕೊರೊನಾ ಪಾಸಿಟಿವ್ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಪರೀಕ್ಷೆ ಮಾಡಿದರೆ 42%ಪಾಸಿಟಿವ್ ಬರುತ್ತಿದೆ ಎಂದು ಹೇಳುತ್ತಿದ್ದಾರೆ. ಆದ್ರೆ ಪರೀಕ್ಷೆ ಕೇಂದ್ರಗಳನ್ನೇ ಮುಚ್ಚುತ್ತಿದ್ದಾರೆ. ಸೋಂಕಿನ ಲಕ್ಷಣಗಳಿಂದ ಬಳಲಿ ಆಸ್ಪತ್ರೆ, ಪರೀಕ್ಷಾ ಕೇಂದ್ರಗಳ ಬಾಗಿಲಿನ ಬಳಿ ಅಲೆಯುತ್ತಿರುವುದರಿಂದಲೇ ತಿಳಿಯುತ್ತಿದೆ. 75 ಜನಕ್ಕೆ ಟೋಕನ್ ಕೊಟ್ಟರೆ 25ಜನಕ್ಕೆ ಪರೀಕ್ಷೇನೆ ಮಾಡಲ್ಲ. ಇನ್ನೂ ಪ್ರತಿ ಗುರುವಾರ ಬಾಣಂತಿ ದಿನ ಎಂದು ಹೇಳಿ ಕೆಲವು ಕಡೇ ಆರ್.ಟಿ.ಪಿ.ಸಿ.ಆರ್ ಕೋರೊನಾ ಪರೀಕ್ಷೆ ಮಾಡುವುದೇ ಇಲ್ಲ.
ಗ್ರಾಮೀಣಾ ಭಾಗದಲ್ಲಿ ಇನ್ನೂ ಕಷ್ಟ ಪೂರ್ಣ ಪರೀಕ್ಷೆ ಮಾಡುತ್ತಲೇ ಇಲ್ಲ, ಅದನ್ನೂ ಮೀರಿ ಪರೀಕ್ಷೆ ಮಾಡಿದರೂ ವರದಿ ನೀಡಲು 3 ದಿನ ಬೇಕಾಗುತ್ತದೆ. ಅಲ್ಲಿಯವರೆಗೆ ಸೋಂಕಿತ ಎಲ್ಲಾ ಕಡೆ ಸುತ್ತಾಡಿ ಸೋಂಕು ಹರಡಿ, ಮನೆಯವರಿಗೂ ಹರಡಿ ಖಾಯಿಲೆಯನ್ನು ಅಂಟಿಸುತ್ತಿದ್ದಾರೆ. ಈ ರೀತಿಯಾಗಿ ರೋಗ ವೇಗವಾಗಿ ಹರಡುತ್ತಿದೆ. ಕೋರೊನಾ 42%ಸರಾಸರಿ ಎಂದು ಅಧಿಕೃತವಾಗಿ ಪ್ರಕಟಣೆಯಲ್ಲಿ ಹೇಳಿದ್ದಾರೆ. ಹಾಗೆಯೇ ಸೋಂಕಿನ ಲಕ್ಷಣವಿರುವ ಎಲ್ಲರಿಗೂ ಪರೀಕ್ಷೆ ಮಾಡಬೇಕು.ಅದನ್ನ ಮಾಡದೆ ಹೋದರೆ ಒಳಗಡೆ ಎಲ್ಲರಿಗೂ ಈ ರೋಗ ಹರಡಿ ಉಲ್ಭಣಗೊಂಡು ಕೊನೆ ಕ್ಷಣದಲ್ಲಿ ಆಸ್ಪತ್ರೆಯ ಬಾಗಿಲು ತಟ್ಟುತ್ತಾರೆ. ಅಂತಿಮವಾಗಿ ಐಸಿಯು ಗಾಗಿ ಅಲೆದಾಡಿ ಸಿಗದೆ ಮರಣ ಹೊಂದುವ ಸಂಕಷ್ಟಕ್ಕೆ ತಲುಪುತ್ತಾರೆ.ಈಗಾಗಿಯೇ ಮರಣದ ಪ್ರಮಾಣ ಜಾಸ್ತಿಯಾಗುತ್ತಿದೆ ಎಂದು ತಿಳಿಸಿದರು.
ಇನ್ನೂ ಲಸಿಕಾ ವಿಚಾರದಲ್ಲಿ ಕೇವಲ ಪ್ರಚಾರ ಮಾತ್ರ ಪಡೆದರು.ನಾಗರೀಕರಿಕೆ ತಲುಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.ಇಡೀ ದೇಶದಲ್ಲೆಡೆ ಲಸಿಕಾ ಉತ್ಸವ ಆಚರಣೆ ಎಂದು ಪ್ರಚಾರ ಗಿಟ್ಟಿಸಿದರು.ಇನ್ನೂ ಸನ್ಮಾನ್ಯ ಮುಖ್ಯಮಂತ್ರಿಗಳೂ ಬೆಂಗಳೂರಿನಲ್ಲಿ 18-44 ವಯಸ್ಸಿನವರಿಗೆ ಲಸಿಕೆ ನೀಡುವುದಕ್ಕೆ ಚಾಲನೆ ನೀಡಿದರು. ಅದರ ನಂತರದ ದಿನದಲ್ಲೇ ಯುವಕ-ಯುವತಿಯರಿಗೆ ಲಸಿಕೆ ಇಲ್ಲ ಆಸ್ಪತ್ರೆಗಳ ಬಳಿ ಬರಬೇಡಿ ಎಂದು ಆರೋಗ್ಯ ಸಚಿವರು ಪತ್ರಿಕಾ ಹೇಳಿಕೆ ಕೊಡುತ್ತಾರೆ.
ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಉಪಾಧ್ಯಕ್ಷರಾದ ರಾಜಾರಾಂ, ಪಾಲಿಕೆ ಸದಸ್ಯರಾದ ಜೆ ಗೋಪಿ, ಮಾಜಿ ಸದಸ್ಯ ಎಂ ಸುನೀಲ್, ಸೇವಾದಳ ಗಿರೀಶ್, ಐಟಿ ಸೆಲ್ ಅಧ್ಯಕ್ಷರಾದ ನಿರಾಲ್ ಶಾ, ಗುಣಶೇಖರ್ ಹಾಜರಿದ್ದರು.