ಸತ್ಕಾರ ಸಮಾರಂಭ

(ಸಂಜೆವಾಣಿ ವಾರ್ತೆ)
ಬೈಲಹೊಂಗಲ,ಜು31: ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಿ ಸಾಧನೆ ಮಾಡಿದಲ್ಲಿ ಯಶಸ್ಸಿನ ಮೆಟ್ಟಲು ಹತ್ತಬಹುದೆಂದು ಡಾ. ಪ್ರಕಾಶ ಹಳ್ಯಾಳ ಹೇಳಿದರು.
ತಾಲೂಕಿನ ನೇಸರಗಿ ಗ್ರಾಮದ ವೇದಾಂತ್ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಅರ್ಹತಾ ಪರೀಕ್ಷೆ ನಿಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಪಾಸಾದ ವಿದ್ಯಾರ್ಥಿಗಳ ಸತ್ಕಾರ, ಪತ್ರಕರ್ತರ ದಿನಾಚರಣೆ, ರಕ್ತ ತಪಾಸಣಾ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ನಿಟ್ ಪರೀಕ್ಷೆಯು ಕಠಿಣವಾಗಿದ್ದರೂ ಕೂಡಾ ಅದನ್ನು ಹೆಂಚಿನ ಅಂಕಗಳೊಂದಿಗೆ ಪಾಸಾಗಿ ರಾಜ್ಯಕ್ಕೆ 4 ನೇ ಸ್ಥಾನ ಮತ್ತು ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡ ಸಮೃದ್ದಿ ದೇಸಾಯಿ, ಪ್ರತೀಕ್ಷಾ ಮಲ್ಲೂರ, ರಾಹುಲ್ ಗಡದವರ ಸಾಧನೆ ಅಪಾರವಾಗಿ ಎಂದರು.
ನಿಟ್ ಪರೀಕ್ಷೆಯಲ್ಲಿ ಪಾಸಾದ ಸಮೃದ್ದಿ ದೇಸಾಯಿ, ಪ್ರತೀಕ್ಷಾ ಮಲ್ಲೂರ, ರಾಹುಲ್ ಗಡದವರ, ಹಿರಿಯ ಪತ್ರಕರ್ತರಾದ ಸಿ.ವಾಯ್.ಮೆಣಶಿನಕಾಯಿ, ಪ್ರಕಾಶ ಕೆಳಗಿನಮನಿ ಯವರನ್ನು ಸತ್ಕರಿಸಲಾಯಿತು.
ಡಾ.ಜಿ.ಬಿ.ಕಾರಾಂವಿ, ಡಾ.ಎಂ.ಆರ್.ಮುಲ್ಲಾ, ಶಿಕ್ಷಕ ಮಹಾಂತೇಶ ತೊರನಗಟ್ಟಿ, ನಾಗರಾಜ ತುಬಾಕಿ, ಮಲ್ಲಿಕಾರ್ಜುನ ಗಡದವರ, ಶಿಕ್ಷಕರಾದ ರಾಜು ಗೆಜ್ಜಿ, ಸಂತೋಷ ಪಾಟೀಲ, ಎಸ್.ಆರ್.ಪಾಟೀಲ, ಶಿಕ್ಷಕ ಮಹಾಂತೇಶ ಚಿಲ್ಲಾಪೂರ, ಶಿವಾನಂದ ಲಾಳಶಿಂಗಿ, ಚಂದ್ರಯ್ಯ ಸುಂಕದ, ಸುರೇಶ ಇಂಚಲ, ಇನ್ನಿತರರು ಇದ್ದರು.