ಸತೀಶ್ ಜಾರಕಿ ಹೊಳಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಕೋಲಾರ, ನ.೧೦- ಕೆ.ಪಿ.ಸಿ.ಸಿ. ಅಧ್ಯಕ್ಷ ಸತೀಶ್ ಜಾರಕಿ ಹೊಳಿ ಅವರ ಹಿಂದೂ ಅಶ್ಲೀಲ ಪದ ಹೇಳಿಕೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಬಂಗಾರಪೇಟೆ ರಸ್ತೆಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ನಡೆಸಿ ಸತೀಶ್ ಜಾರಕಿ ಹೊಳಿ ಅವರ ಪ್ರತಿಕೃತಿ ದಹನ ಮಾಡಿದರು,
ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್ ಅವರು ಮಾತನಾಡಿ ಹಿಂದೂ ಎಂಬ ಪದವನ್ನು ಅಶ್ಲೀಲ ಎಂಬ ಹೇಳಿಕೆ ನೀಡಿ ಸನಾತನ ಧರ್ಮದ ಬುಡಕ್ಕೆ ಕೈ ಹಾಕಿರುವುದು ಅವರ ಮೂರ್ಖತನದ ಪರಮಾವಧಿಯಾಗಿದೆ ಈ ಹೇಳಿಕೆಯಿಂದ ದೇಶಕ್ಕೆ ಅಪಮಾನ ಮಾಡಿದಂತಾಗಿದೆ.ಕೇವಲ ಓಟಿಗಾಗಿ ರಾಜಕೀಯವಾಗಿ ನೀಡಿರುವಂತ ಹೇಳಿಕೆಯು ಅವರ ಅಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಟೀಕಿಸಿದರು,
ಸತೀಶ್ ಜಾರಕಿ ಹೊಳಿ ಅವರು ತಮ್ಮ ವ್ಯಾಸಂಗ ಅವಧಿಯಲ್ಲಿನ ಟಿ.ಸಿ. ದಾಖಲಾತಿಗಳಲ್ಲಿನ ಜಾತಿ-ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೋಧಿಸದೆ ಯಾವ ಧರ್ಮದ ಹೆಸರನ್ನು ಹಾಕಿರುತ್ತಾರೆ ಎಂಬುದನ್ನು ಪರಿಶೀಲಿಸಿ ನಂತರ ಅವರು ಹೇಳಿಕೆಗಳನ್ನು ವ್ಯಾಖನಿಸಲಿ. ಇಷ್ಟು ದಿನಗಳಿಂದ ಹಿಂದು ಎಂಬ ಪದ ಬಳಕೆ ಮಾಡಿ ಕೊಂಡು ಅಧಿಕಾರವನ್ನು ಅನುಭವಿಸಿ ನಂತರ ಇಂಥ ಹೇಳಿಕೆಯನ್ನು ನೀಡುತ್ತಿರುವುದು ಕಂಡರೆ ಅವರು ಹತಾಶರಾಗಿ ನಾಲಿಗೆ ಹಿಡಿತವಿಲ್ಲದೆ ಹೇಳಿಕೆ ನೀಡಿದ್ದಾರೆ ಎಂದು ವ್ಯಂಗವಾಡಿದರು,
ಹಿಂದೂ ಎಂಬುವುದು ಭಾರತೀಯರ ನಾಗರೀಕತೆಯ ಸಂಕೇತವಾಗಿದೆ. ನಮ್ಮ ಭಾವನೆಗಳಿಗೆ ಗೌರವ ಮತ್ತು ಸಂಕೇತದ ಬೆಳವಣಿಗೆಗೆ ಪೂರಕವಾಗಿದೆ ಅದರೆ ಅಲ್ಪಸಂಖ್ಯಾತರನ್ನು ಒಲೈಸಿ ಕೊಳ್ಳಲು ತನ್ನ ಧರ್ಮವನ್ನೆ ಟೀಕಿಸಿ ಖಂಡಿಸುವಂಥ ಹೇಳಿಕೆಗಳನ್ನು ರಾಜ್ಯದ ಜನತೆ ಕ್ಷೇಮಿಸಲಾರರು, ಸಾರ್ವಜನಕ ವಲಯದಲ್ಲಿ ಅವರ ಹೇಳಿಕೆಯಿಂದ ಅಶಾಂತಿ, ಅಸಹನೆ ಭುಗಿಲೆದ್ದಿದೆ. ಕಾನೂಣು ಸುವ್ಯವಸ್ಥೆಗಳ ಪಾಲನೆ ಧಕ್ಕೆಯುಂಟಾಗಿದೆ. ಕೊಡಲೇ ಅವರ ವಿರುದ್ದ ಕಾನೂನು ಕ್ರಮ ಜರುಗಿಸಿ ಬಂಧಿಸ ಬೇಕೆಂದು ಆಗ್ರಹ ಪಡೆಸಿದರು,
ರಾಜ್ಯ ಯುವ ಮೋರ್ಚಾ ಮುಖಂಡ ಓಂಶಕ್ತಿ ಚಲಪತಿ ಮಾತನಾಡಿದರು, ಸತೀಶ್ ಜಾರಕಿ ಹೊಳಿ ಹಿಂದೂ ವಿರೋಧಿ, ದೇಶದ ವಿರೋಧಿ, ಐ.ಎಸ್.ಐ, ಏಜೆಂಟ್, ಜನ ವಿರೋಧಿ ಎಂದು ಘೋಷಣೆಗಳನ್ನು ಕೊಗಿದ ಪ್ರತಿಭಟನಾಕಾರರು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು, ಕೆಲ ಕಾಲ ರಸ್ತೆ ತಡೆ ಮಾಡಿ ನಂತರ ಸತೀಶ್ ಜಾರಕಿ ಹೊಳಿ ಅವರ ಪ್ರತಿಕೃತಿಯನ್ನು ದಹಿಸಿದರು,
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಕೆ.ಯು.ಡಿ.ಅಧ್ಯಕ್ಷ ವಿಜಯಕುಮಾರ್, ರಾಜ್ಯ ಮಾವು ಅಭಿವೃದ್ದಿ ಮಂಡಳಿ ಅಧ್ಯಕ್ಷ ವಾಸುದೇವರಾವ್, ಮುಖಂಡರಾದ ಕೃಷ್ಣಮೂರ್ತಿ, ಎಸ್.ಬಿ.ಮುನಿವೆಂಕಟಪ್ಪ. ಸಿ.ಡಿ.ರಾಮಚಂದ್ರ, ಗೋವಿಂದರಾಜು, ಅಪ್ಪಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್, ಕೆಂಬೋಡಿ ನಾರಾಯಣಸ್ವಾಮಿ, ಮಂಜುನಾಥ್, ಗಾಂಧಿನಗರ ನಾರಾಯಣಸ್ವಾಮಿ, ಓಹಿಲೇಶ್, ಹಾರೋಹಳ್ಳಿ ವೆಂಕಟೇಶ್, ಪಾಲ್ಗುಣ, ಜಿಲ್ಲಾಯುವ ಮೋರ್ಚಾ ಅಧ್ಯಕ್ಷ ಬಾಲಜಿ, ವಕ್ಫಬೋರ್ಡ್ ಅಧ್ಯಕ್ಷ ಜಾಮೀನ್,ನಾರಾಯಣಸ್ವಾಮಿ ಮುಂತಾದವರು ಭಾಗವಹಿಸಿದ್ದರು,