
ಕೋಲಾರ,ಮೇ,೨೫:ಸರಳತೆಯ ಸಾಹುಕಾರ, ಅಭಿವೃದ್ಧಿಯ ಹರಿಕಾರ ಸತೀಶ್ ಜಾರಕಿಹೊಳಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಜಿಲ್ಲಾ ನಾಯಕ ಜನಾಂಗದ ಮುಖಂಡರು ಶುಭ ಕೋರಿ ಸನ್ಮಾನಿಸಿದರು.
ಜಿಲ್ಲಾ ಮುಖಂಡರಾದ ನರಸಿಂಹಯ್ಯ, ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಬಾಲಗೋವಿಂದ್, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಭಾ ತಾಲೂಕು ಅಧ್ಯಕ್ಷ ಆನಂದ್‌ಕುಮಾರ್, ಐತರಾಸನಹಳ್ಳಿ ನರಸಿಂಹಯ್ಯ, ಗರುಡನಹಳ್ಳಿ ಬಾಬು, ವಕ್ಕಲೇರಿ ಬಾಬು, ರಾಜ್ಯ ಸಂಘಟನಾ ಕಾರ್ಯದರ್ಶಿ ಬೆಳ್ಳೂರು ತಿರುಮಲೇಶ್, ಕುಡುವನಹಳ್ಳಿ ಆಂಜಿ, ರಂಗನಾಥ್, ಜಿಲ್ಲಾಧ್ಯಕ್ಷ ಕೋಟೆ ಮಧು, ಲಕ್ಷ್ಮಣ್, ಶ್ಶಾಮನಾಯಕ್, ಮೇಡಿಹಾಳ ಮಂಜು, ಮುನಿರಾಜು, ಕಲ್ಲಂಡೂರು ನಾಗರಾಜ್ ಇದ್ದರು.