ಸತೀಶ್ ಜಾರಕಿಹೊಳಿಗೆ ಡಿಸಿಎಂ, ಸಮಾಜ ಕಲ್ಯಾಣ ಖಾತೆ ನೀಡಲು ಒತ್ತಾಯ

ದಾವಣಗೆರೆ.ಮೇ.೧೭; ಹಿಂದುಳಿದ ನಾಯಕ ಸತೀಶ್ ಹಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ ಮತ್ತು ಸಮಾಜ ಕಲ್ಯಾಣ ಖಾತೆ ನೀಡುವಂತೆ ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದ ಹರಿಹರ ತಾಲೂಕು ಸಂಚಾಲಕ ಮಾರುತಿ ದಾಸರ್ ಒತ್ತಾಯಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ, ನಾಯಕ ಸಮುದಾಯ ಪ್ರಶ್ನಾತೀತ ನಾಯಕ, ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ, ಬಡವರ ಆಶಾಕಿರಣ, ಸದಾ ಹಸನ್ಮುಖಿ, ಸರ್ವ ಜಾತಿ, ಮತ, ಧರ್ಮೀಯರನ್ನು ಪ್ರೀತಿಸುವ ಸತೀಶ್ ಜಾರಕಿಹೊಳಿ ಅವರನ್ನು ರಾಜ್ಯದ ಉಪ-ಮುಖ್ಯಮಂತ್ರಿಗಳನ್ನಾಗಿ ಮಾಡಿ, ಉತ್ತಮ ಖಾತೆಯನ್ನು ನೀಡುವ ಮುಖಾಂತರ ಪರಿಶಿಷ್ಟರ ಏಳಗೆಗೆ ಶ್ರಮಿಸಬೇಕೆಂದು ಆಗ್ರಹಿಸಿದರು.ದೇಶಾದ್ಯಂತ ಕೋವಿಡ್  ಸಾಂಕ್ರಾಮಿಕ ರೋಗದಲ್ಲಿ ಎಲ್ಲಾ ವರ್ಗದವರಿಗೂ ತಮ್ಮ ಸ್ವಂತ ಖರ್ಚಿನಲ್ಲಿ ಉಚಿತ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಹಂಚಿ ಜನೋಪಯೋಗಿ ಕೆಲಸವನ್ನು ನಿರ್ವಹಿಸಿದ್ದಾರೆ. ಪರಿಶಿಷ್ಟ ಪಂಗಡವನ್ನು ಒಗ್ಗೂಡಿ ರಾಜ್ಯದ 15 ಪರಿಶಿಷ್ಟ ಪಂಗಡಗಳ ಮೀಸಲು ಕ್ಷೇತ್ರಗಳಲ್ಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲ-ಸಿಕೊಂಡು ಬರುವಲ್ಲಿ ಸಹಕರಿಸಿದ್ದಾರೆ ಎಂದು ಮಾಹಿತಿ ನೀಡಿದರು.ದೂರದೃಷ್ಟಿಯುಳ್ಳ ನೇತಾರರಾಗಿರುವ ಸತೀಶ್ ಜಾರಕಿಹೊಳಿ ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಿ ಸಮಾಜ ಕಲ್ಯಾಣ ಖಾತೆಯನ್ನು ನೀಡಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಟಿಯಲ್ಲಿ ಟಿ.ಆರ್.ಪ್ರಶಾಂತ, ಕೆ.ಇ.ಮಂಜುನಾಥ್, ಜಿ.ಟಿ. ಗೋವಿಂದ ರಾಜ ಇದ್ದರು.