
ಕೋಲಾರ,ಮೇ.೨೪:ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಜ್ಯ ಸಮಿತಿ ವತಿಯಿಂದ ನೂತನವಾಗಿ ರಚನೆಯಾದ ಸರ್ಕಾರದಲ್ಲಿ ನಾಯಕ ಸಮುದಾಯದ ಮುತ್ಸದ್ದಿ ರಾಜಕಾರಣಿ ಸತೀಶ್ ಜಾರಕಿಹೊಳಿ ಅವರನ್ನು ರಾಜ್ಯ ಸಮಿತಿ ಪದಾಧಿಕಾರಿಗಳು ಭೇಟಿ ನೀಡಿ ಅಭಿನಂದಿಸಿದರು.
ಬೆಂಗಳೂರಿನ ಡಾಲರ್‍ಸ್ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ನೂತನ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಆಯ್ಕೆಯಾಗಿರುವ ಸತೀಶ್ ಜಾರಕಿಹೊಳಿ ಅವರನ್ನು ಸಮಿತಿಯ ಪದಾಧಿಕಾರಿಗಳು ಅಭಿನಂದಿಸಿದ ಸಂದರ್ಭದಲ್ಲಿ ಅವರು ಮಾತನಾಡಿ ಸಮುದಾಯದ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಿ ಮುಂದಿನ ದಿನಗಳಲ್ಲಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಜಿ.ಟಿ.ಚಂದ್ರೇಶಕರಪ್ಪ, ಪ್ರಧಾನ ಕಾರ್ಯದರ್ಶಿ ಕೆಂಪರಾಮಯ್ಯ, ರಾಜ್ಯ ಉಪಾಧ್ಯಕ್ಷ ಡಾ.ಗೋಪಾಲಕೃಷ್ಣ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ, ನಿವೃತ್ತ ಎಸಿಪಿ ಅಧಿಕಾರಿ ಪಂಪಾಪತಿ, ರಾಜ್ಯ ನಿರ್ದೇಶಕ ಸಂಚಿಕೆ ನಾರಾಯಣಪ್ಪ, ರಾಜ್ಯ ಕಾರ್ಯದರ್ಶಿ ಈ.ರಾಜಪ್ಪ, ಜಿ ನಾಗರಾಜ್, ಗಾಣದ ಹುಣಸೆ ಸಿಂಗಾಪುರ್ ವೆಂಕಟೇಶ್, ವೆಂಕಟೇಶ್, ಪುಷ್ಪ ಲಕ್ಷ್ಮಣಸ್ವಾಮಿ, ನಾಗಮಣಿ, ಜಿಂಕಲ್, ಜಿ.ಕೆ.ನಾಗರಾಜು, ಬಳ್ಳಾರಿ ಯರ್ರಿಸ್ವಾಮಿ, ಕೆ.ನಾಗರಾಜು, ತಿಮ್ಮರಾಜು ಇದ್ದರು.