ಸತಿ-ಪತಿಯರಲ್ಲಿ ಆತ್ಮೀಯತೆ ಇದ್ದರೆ ಬಾಳು ಬಂಗಾರ:ಸಿದ್ದಲಿಂಗಶ್ರೀ

ತಾಳಿಕೋಟೆ:ಜೂ.21: ದಾಂಪತ್ಯ ಜೀವನವೆಂಬುದು ಸುಖಃವಾಗಿ ಸುಗಮವಾಗಿ ಹಾಗೂ ಸಮೃದ್ದಿಯೊಂದಿಗೆ ನಡೆಯಬೇಕಾದರೆ ಮೊದಲಿಗೆ ಸತಿಪತಿಯಾದವರಲ್ಲಿ ಆತ್ಮೀಯತೆ ಭಾವನೆ ಎಂಬುದು ಹುಟ್ಟಿ ಬರಬೇಕು ಅಂದರೆ ಮಾತ್ರ ಸುಗಮ ಜೀವನ ಸಾಗಲು ಅನುಕೂಲವಾಗಲಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.

ಮಂಗಳವಾರರಂದು ಸ್ಥಳೀಯ ಭಾವಸಾರ ಕ್ಷತ್ರೀಯ ಸಮಾಜದ ಶ್ರೀ ಅಂಬಾಭವಾನಿ ಮಂದಿರದಲ್ಲಿ ಸ್ವಾತಂತ್ರ್ಯ ಯೋಧ ದಿ.ಶಿವಯೋಗಪ್ಪ ಸಾಲಂಕಿ ಅವರ ಮೊಮ್ಮಗ ರಮೇಶ ಸಾಲಂಕಿ ಅವರ 25ನೇ ವರ್ಷದ ವಿವಾಹವಾರ್ಷಿಕೋತ್ಸವದಲ್ಲಿ ದಿವ್ಯ ಸಾನಿದ್ಯವಹಿಸಿ ಸತಿ-ಪತಿಗೆ ಆಶಿರ್ವಾದಗೈದು ಮಾತನಾಡುತ್ತಿದ್ದ ಶ್ರೀಗಳು ಶ್ರೀಮಠಕ್ಕೆ ಆಗಮಿಸಿದ ಭಕ್ತರು ಕುಟುಂಭದ ಜೀವನ ಅಷ್ಟೇ ಅಲ್ಲಾ ಮಕ್ಕಳು ಮೊಮ್ಮಕ್ಕಳು ಮನೆಯಲ್ಲಿ ಆಗಲೆಂಬ ಉದ್ದೇಶಹೊತ್ತು ಶ್ರೀಮಠಕ್ಕೆ ಆಗಮಿಸುತ್ತಾರೆ ಅದರಂತೆ ಭಕ್ತನೋರ್ವ ಶ್ರೀಮಠಕ್ಕೆ ಆಗಮಿಸಿ ತನ್ನ ವಿವಾಹವಾದ 25ದಿನದ ಇತಿಹಾಸ ವಿವರಿಸಿದ್ದನ್ನು ಶ್ರೀಗಳು ಕೆಳಗಿನಂತೆ ಕಥೆರೂಪದಲ್ಲಿ ವಿವರಿಸಿದರು.

ಇತ್ತೀಚಗೆ ಒಬ್ಬ ಭಕ್ತ ಗ್ರಾಮಾಂತರ ಪ್ರದೇಶದಿಂದ ಶ್ರೀಮಠಕ್ಕೆ ಆಗಮಿಸಿದ್ದ ತನ್ನ ಕಷ್ಟ ಹೇಳಿದ ಆತ ನನ್ನ ಮಧುವೆಯಾಗಿ 25 ದಿನವಾಯಿತು ಮಧುವೆಯಾಗುವದಕ್ಕಿಂತ ಮುಂಚೆ ನನ್ನ ಹೆಂಡತಿ ನನ್ನ ಕಣ್ಣಲ್ಲಿ ದೇವತೆಯಂತೆ ಕಂಡಳು ಮಧುವೆಯಾಗಿ ಬಹಳೇ ದಿನ ಆಗಿಲ್ಲರೀ ಕೇವಲ 25 ದಿನ ಆಗೈತಿ ದೇವ್ವ ಎಲ್ಲಿಯೂ ಇಲ್ಲಾ ನನ್ನ ಹೆಂಡಿತಿ ಮಾರಿಯಲ್ಲಿ ಇದೆ ಎಂದನಂತೆ ಈ ಮಾತನ್ನು ಕೇಳಿದ ಶ್ರೀಗಳು ಪ್ರಶ್ನೀಸಿದರಂತೆ ಅಂತಹದ್ದು ಏನು ಆಗೈತಿ ಎಂದಾಗ ಉತ್ತರಿಸಿ ಮಧುವೆಕ್ಕಿಂತ ಮುಂಚೆ ಇಬ್ಬರೂ ಗಂಡ ಹೆಂಡಿರಾದ ನಾವು ಬಿಟ್ಟ ಇರಲಾರದಂತೆ ಬಧುಕು ಮಾಡಬೇಕು ಎಂದುಕೊಂಡಿದ್ದೇವು ಮಧುವೆಯಾದ ಮೇಲೆ ಆಕೆ ಯಾವ ಊರಾಗಿದ್ದರೇನು ನಾ ಯಾವೂರಾಗಿದ್ದರೇನು ಚಿಂತೆ ಇಲ್ಲಾ ಅಂದನಂತೆ ಶ್ರೀಗಳು ಇದಕ್ಕೆ ನಿಜವಾದ ಸ್ವಾತಂತ್ರ್ಯ ಎಲ್ಲಿದೆ ಎಂದು ಕೇಳಿದಾಗ ಆತ ಉತ್ತರಿಸಿ ನನಗೇನು 47ರಲ್ಲಿ ಸಿಕ್ಕಂತ ಅದು ಸ್ವಾತಂತ್ರ್ಯ ಅಲ್ಲಾರಿ ನನ್ನ ಹೆಂಡಿಯಿಂದ ನನಗೆ ಮೊದಲು ದೂರು ಮಾಡರೀ ಅದು ಸ್ವಾತಂತ್ರ್ಯ ಅಂದನಂತೆ.

ಈ ಮಾತನ್ನು ಯಾಕೆ ಹೇಳಲು ಕಾರಣವೆಂದು ತಿಳಿ ಹೇಳಿದ ಶ್ರೀಗಳು 25 ದಿನದ ಬಧುಕು ಮಾಡಿದ ವ್ಯಕ್ತಿಗಿಂತ ಸಾಲಂಕಿ ರಮೇಶ ಅವರು ತನ್ನ ಧರ್ಮ ಪತ್ನಿ ಶೋಭಾ ಸಾಲಂಕಿ ಅವರೊಂದಿಗೆ 25ವರ್ಷ ಬಧುಕು ಮಾಡಿರುವದೇ ನಿಜವಾದ ದಾಂಪತ್ಯ ಜೀವನವಿದು ಎಂದು ತಿಳಿ ಹೇಳಿದ ಶ್ರೀಗಳು 25ವರ್ಷದಲ್ಲಿ ಸಮಾಜದಲ್ಲಿ ಯಾರನ್ನೂ ದ್ವೇಶಿಸದೇ ಠೀಕಿಸದೇ ಮಠ ನಮ್ಮದು ಎಂ ಭಾವನೆಯೊಂದಿಗೆ ಎಲ್ಲರೊಂದಿಗೆ ಒಗ್ಗೂಡಿ ಜನಮೆಚ್ಚುಗೆಗೆ ಪಾತ್ರವಾಗಿರುವ ರಮೇಶ ಸಾಲಂಕಿ ಅವರ ಪ್ರೀತಿ ವಾತ್ಸಲ್ಯ ಸದಾ ಎಲ್ಲರ ಮೇಲಿರಲಿ ಶ್ರೀ ಖಾಸ್ಗತನ ಕೃಪೆ ಎಲ್ಲರ ಮೇಲಿರಲಿ ಎಂದು ಶ್ರೀಗಳು ಸಾಲಂಕಿ ಕುಟುಂಭ ಪರಿವಾರದವರಿಗೆ ಶುಭ ಕೋರಿದರು.

ಈ ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀಮತಿ ಕಸ್ತೂರಿಬಾಯಿ ಸಾಲಂಕಿ, ವೀ.ವಿ.ಸಂಘದ ಅಧ್ಯಕ್ಷ ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ), ಹಿರಿಯರಾದ ಚೆನ್ನಬಸ್ಸಪ್ಪ ಸಾಲಂಕಿ, ಸುಭಾಸಚಂದ್ರ ಸಾಲಂಕಿ, ಪ್ರಕಾಶ, ಶಿವಲಿಂಗಪ್ಪ, ಸಿದ್ದರಾಮ, ರಾಕೇಶ, ಸಿದ್ದಾರ್ಥ, ಮಹೇಶ ಸರಶೆಟ್ಟಿ, ಸಂಗೀತಾ ದಾನೇಶ್ವರಿ, ಶಿವಲೀಲಾ, ಮಲ್ಲಿಕಾರ್ಜುನ ಮಸಳಿ, ಬಿ.ಎನ್.ಹಿಪ್ಪರಗಿ, ಪ್ರಕಾಶ ನಿಡಗುಂದಿ, ಶಿವಣ್ಣ ಪಾಲ್ಕಿ, ವಿಶ್ವನಾಥ ಬಿಳೇಭಾವಿ, ಈರಣ್ಣ ಕಲ್ಬುರ್ಗಿ, ವಿಶ್ವನಾಥ ಬಡದಾಳಿ, ಮಹಾಲಿಂಗೇಶ ಪ್ರಥಮಶೆಟ್ಟಿ, ಸುರೇಶ ಪುಲಸ್, ರಮೇಶ ಹಿಪ್ಪರಗಿ ಅವರನ್ನೋಳಗೊಂಡು ತಾಳಿಕೋಟೆಯ ವೈಧ್ಯರು, ಹಾಗೂ ಔಷಧ ವ್ಯಾಪಾರಿಗಳು, ಅಲ್ಲದೇ ವಿವಿಧ ಸಮಾಜ ಬಾಂದವರು ಪಾಲ್ಗೊಂಡಿದ್ದರು.