ಸತಿ- ಪತಿಗಳ ಮದ್ಯ ವಿರಸ ಬೇಡ- ಅನೋನ್ಯ ಜೀವನ ನಡೆಸಿ

ಸಿರವಾರ.ಫೆ೨೮- ಮಠಗಳಿಂದ ಆಯೋಜನೆ ಮಾಡುವ ಸಾಮೂಹಿಕ ವಿವಾಹಗಳಲ್ಲಿ ನೂತನ ಜೀವನಕ್ಕೆ ಕಾಲಿಡುವ ಸತಿ ಪತಿಗಳು ತಮ್ಮ ಜೀವನದಲ್ಲಿ ವಿರಸವನ್ನುಂಟು ಮಾಡುಕೊಳದೆ ಅನೋನ್ಯತೆಯಿಂದ ಇದೂ ಆದರ್ಶ ದಂಪತಿಗಳಾಗಿ ಬಾಳಿ ಎಂದು ಕಿಲ್ಲೆ ಬೃಹನ್ಮಠದ ೧೦೦೮ ಶಾಂತಮಲ್ಲ ಶಿವಾಚಾರ್ಯರು ನುಡಿದರು. ತಾಲೂಕಿನ ನವಲಕಲ್ ಬೃಹನ್ಮಠದ ಲಿಂ.ಷ.ಬ್ರ.ಸೋಮಶೇಖರ ಶಿವಾಚಾರ್ಯರ ೨೬ ನೇ ಜಾತ್ರಾ ಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯ ಸಾನಿದ್ಯ ವಹಿಸಿ ತಮ್ಮ ಆಶಿರ್ವಚನದಲ್ಲಿ ಮದುವೆಗಳು ಮಠಗಳಲ್ಲಿ ಮಾತ್ರ ಶಾಸ್ತ್ರ ಸಮ್ಮತದಿಂದ ನಡೆದಿವೆ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹ ವಾದವರೂ ಉತ್ತಮ ಸತಿಪತಿಗಳಾಗಿ ಜೀವನ ಸಾಗಿಸುತ್ತಿದ್ದಾರೆ.
ಮಠಗಳ ಶಕ್ತಿ ಭಕ್ತರ ನಂಬಿಕೆಯ ಮೇಲೆ ಇವೆ. ವಿಶ್ವವೇ ಭಾರತವನ್ನು ವಿಶ್ವಗುರುವಾಗುವುದಕ್ಕೆ ಮಠಗಳು ಕಾರಣ. ಮಠದಲ್ಲಿ ಜರುಗುತ್ತಿರುವ ಕಾರ್ಯಕ್ಕೆ ಎಲ್ಲಾರೂ ಕೈ ಜೊಡಿಸಿದ್ದಾರೆ ಎಂದರು. ಮಠದ ಪಿಠಾಧಿಪತಿ ಅಭಿನವ ಶ್ರೀ ಸೋಮನಾಥ ಶಿವಾಚಾರ್ಯ ತಮ್ಮ ಆಶಿರ್ವಚನದಲ್ಲಿ ಭಕ್ತರ ಭಕ್ತಿಯೇ ಶ್ರೀಮಠದ ಶಕ್ತಿಯಾಗಿದೆ. ಸೋಮಶೇಖರ ಶಿವಾಚಾರ್ಯ ಹಾಕಿ ಕೊಟ್ಟ ಮಾರ್ಗದಲ್ಲಿ ಅವರ ಭಯಕೆಯಂತೆ. ವಿವಿದ ಮಠದ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವೆ.ಗಬ್ಬೂರಿನ ಬೂದಿ ಬಸವೇಶ್ವರ ಅವರು ತಿಳಿಸಿದಂತೆ ಕ್ರೀಡಾಕೂಟ, ಸಾಮೂಹಿಕ ವಿವಾಹ ಆಯೋಜನೆ ಮಾಡುತ್ತಿದೆನೆ. ಮಠಕ್ಕೆ ಶಾಂಭವಿ ದೇವಿಯ ಗೋಪುರು, ಉತ್ಸವ ಮೂರ್ತಿಗೆ ೫೧ ಕೆಜಿ ಬೆಳ್ಳಿ ಬೇಕಿರುವ ಕಾರಣ ಭಕ್ತರು ಉದಾರವಾಗಿ ದೇಣಿಗೆ ನೀಡುವ ಮೂಲಕ ಸೇವೆ ಮಾಡಿ ಎಂದರು. ಮಾಜಿ ಶಾಸಕ ಗಂಗಾಧರ ನಾಯಕ ಮಾತನಾಡಿ ೯೪ ರಿಂದಲೂ ಈ ಮಠದ ಭಕ್ತನಾಗಿರುವೆ. ಅಂದಿನಿಂದಲೂ ಮಠದೊಂದಿಗೆ ಅವಿನಾಭಾವ ಸಂಭಂದ ಇದೇ. ಶಾಸಕರಾಗಿದಾಗ ಸಮುದಾಯ ಭವನ ನಿರ್ಮಿಸಿದೆ ಎಂದರು. ಶರಣಯ್ಯನಾಯಕ ಹಾಗೂ ಜಿ.ಲೋಕರೇಡ್ಡಿ ಮಾತನಾಡಿ ನಿಮ್ಮ ಆರ್ಥಿಕ ಸ್ಥಿತಿಗೆ ತಕ್ಕಂತೆ ಮಕ್ಕಳನ್ನು ಹೆರಬೇಕು, ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ, ರೈತ, ದೇಶ ಸೇವೆಗೆ ಮುಡಿಪಾಗಿಡಬೇಕು. ಅತ್ತಮಾವರಲ್ಲಿ ತಂದೆ ತಾಯಿ ಕಾಣಿ, ಸೋಸೆಯನ್ನು ಮಗಳಂತೆ ಕಂಡಾಗ ಜೀವನ ಸುಂದರವಾಗಿರುತ್ತದೆ. ದುಶ್ಚಟಗಳಿಗೆ ಬಲಿಯಾಗಬೇಡಿ ಎಂದರು. ಮಾನಪ್ಪ ನಾಯಕ ಮಾತನಾಡಿ ದೇಶ ರಕ್ಷಣೆಗೆ ನಿಮ್ಮ ಮಕ್ಕಳನ್ನು ತಯಾರಿಗೊಳಿಸಬೇಕು. ಸಂಸಾರದಲ್ಲಿ ಹೊಂದಾಣಿಕೆ ಮುಖ್ಯ ಎಂದರು. ಅತ್ತನೂರ & ಸೋಮವಾರಪೇಟೆಯ ಅಭಿನವ ರಾಚೋಟಿವೀರ ಶಿವಾಚಾರ್ಯ,ದೇವರಭೂಪುರದ ಅಭಿನವ ಗಜದಂಡ ಶಿವಾಚಾರ್ಯರು, ಚುಕ್ಕಿ ಸೂಗಪ್ಪ ಸಾಹುಕಾರ ಮಾತನಾಡಿದರು. ೫೮ ಜೋಡಿಗಳು ನೂತನ ಜೀವನಕ್ಕೆ ಕಾಲಿಟರು. ಬೆಳಗ್ಗೆ ಶಾಂಭವಿ ಮೂರ್ತಿಗೆ, ಸೋಮೇಶ್ವರ ಸ್ವಾಮಿಗಳ ಕರ್ತೃಗದ್ದುಗೆಗೆ ಹಾಗೂ ಎಲ್ಲಾ ದೇವಸ್ಥಾನಗಳಲ್ಲಿ ರುದ್ರಾಭಿಷೇಕ, ಸಹಸ್ರ ಮಂಗಳಾರತಿ, ಜಂಗಮ ವಟುಗಳಿಗೆ ಅಯ್ಯಾಚಾರ ಕಾರ್ಯಕ್ರಮ ಜರುಗಿತು. ಕ್ರಿಕೇಟ್, ಎತ್ತುಗಳಿಂದ ಕಲ್ಲು ಎಳೆಯುವ ಸ್ಪರ್ದೆ,ರಂಗೋಲಿ, ಕಬ್ಬಡಿ, ಸೇರಿದಂತೆ ವಿವಿಧ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು. ವೇದಿಕೆಯ ಮೇಲೆ ಡಾ.ಪಂಚಾಕ್ಷರಿ ಶಿವಾಚಾರ್ಯ,ಗಬ್ಬೂರಿನ ಬೂದಿ ಬಸವ ಶಿವಾಚಾರ್ಯರು, ಬಾಲಯೋಗಿ ರೇಣುಕಾ ಶಾಂತಮಲ್ಲಶಿವಾಚಾರ್ಯರು,ಬೇಟ್ಟಪ್ಪ ತಾತ ಜಾಗಟಗಲ್, ಚರಬಸವತಾತ ಯರಮರಸ್, ಆದರ್ಶನಾಯಕ, ವೈ.ಅಮರೇಶಪ್ಪ,ದೇವರಾಜಗೌಡ, ಶಿವಶರಣಗೌಡ, ತಾ.ಪಂ ಮಾಜಿ ಅದ್ಯಕ್ಷ ದೇವರಾಜ ಕುರಕುಂದಾ,ಅಯ್ಯಪ್ಪ ನಾಯಕ ಮ್ಯಾಖಲ, ಅನಿತ ಬಸವರಾಜ ಮಂತ್ರಿ, ವಿಜಯಲಕ್ಷ್ಮಿ, ನಿರುಪಣೆಯನ್ನು ವೀರಭದ್ರಯ್ಯ ಸ್ವಾಮಿ ಅತ್ತನೂರು.