“ಸತತ ಶ್ರಮದಿಂದ ಸಾಧನೆ ಸಾಧ್ಯ : ಸಿಪಿಐ ಉಮೇಶ್ ಕಾಂಬ್ಳೆ”

ರಾಯಚೂರು: ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡುವ ವಿದ್ಯಾರ್ಥಿಗಳ ಸತತ ಪರಿಶ್ರಮದಿಂದ ಮುತುವಜಿ ವಹಿಸಿ ಸಾಧನೆ ಮಾಡಬೇಕು ಹಾಗೂ ದೂರ ದೃಷ್ಟಿ ಚಿಂತನೆ ಹೊಂದುವಂತಾಗಬೇಕೆಂದು ಲೋಕಯುಕ್ತ ಸಿ.ಪಿ.ಐ ಶ್ರೀ.ಉಮೇಶ್ ಕಾಂಬ್ಳೆ ಹೇಳಿದರು.
ನಗರದ ಮಾನಸ ಗ್ರಂಥಾಲಯ ೨೪ಘಿ೭ ಹಾಗೂ ಧಾರವಾಡದ ಮೇರು ಅಕಾಡೆಮಿ ವತಿಯಿಂದ IಂS/ಈಆಂ/Sಆಂ/ಏಂS/ PಔಐIಅಇ ನೇಮಕಾತಿ ಕುರಿತು ವಿಶೇಷ ಕಾರ್ಯಗಾರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಾಕಷ್ಟು ಸೌಕರ್ಯ ಪಠ್ಯಕ್ರಮ ಲಭ್ಯವಿದ್ದಾಗಲೂ ಕೂಡ ಶ್ರಮದ ಅಗತ್ಯತೆ ಇದೆ ಎಂದು ಹೇಳಿದರು. ಇನ್ನೋರ್ವ ರೇಲ್ವೆ ಪೋಲಿಸ್ ಇಲಾಖೆಯ ಸಿಪಿಐ ಶ್ರೀ ಜನಗೌಡ ಮಾತನಾಡಿ ತಮಗೆ ರಾಯಚೂರಿನಲ್ಲಿ ಇಂತಹ ಮಾರ್ಗದರ್ಶನ ನಿಡುವ ಸಂಸ್ಥೆ ಮುಂದೆ ಬಂದಿರುವುದು ಶ್ಲಾಘನಿಯ ಎಂದು ಶುಭ ಕೋರಿದರು. ಧಾರವಾಡದ ಮೇರು ಅಕಾಡೆಮಿಯ ಡಾ||ರುದ್ರೇಶ್ ಮೇಟಿ ಹಾಗೂ ಎಸ್.ಕೆ.ಇ ಪ್ಯಾರ ಮೇಡಿಕಲ್ & ನರ್ಸಿಂಗ್ ಕಾಲೇಜಿನ ಕಾರ್ಯದರ್ಶಿ ಡಾ||ಬಾಬುರಾವ್ ಎಂ ಶೇಗುಣಿಸಿ, ಡಾ|| ಗುರುರಾಜ್ ಗೋಡಿಗೇರಿ ಇತರರು ಸೇರಿ ಸನ್ಮಾನಿಸಿದರು.