ಸತತ ಮಳೆಯಿಂದಾಗಿ ಕೊಡೆ ಮೊರೆ ಹೋಗುತ್ತಿರುವ ಜನರು

ಕಲಬುರಗಿ :ಜು.14: ಜಿಲ್ಲೆಯಲ್ಲಿ ಸತತವಾಗಿ ಹಲವು ದಿನಗಳಿಂದ ಬೆನ್ನುಬಿಡದೆ ಸುರಿಯುತ್ತಿರುವ ಈ ಮಳೆಯೂ ಅಂಬ್ರೆಲ್ (ಕೊಡೆ ) ಗಳ ಮಹತ್ವ ಏನು ಎಂಬುದನ್ನು ಜನರಿಗೆ ಮನವರಿಕೆ ಮಾಡಿದೆ .

ಸತತವಾಗಿ ಮುಂದುವರೆಯುವ ಮಳೆಯಿಂದಾಗಿ ಶೀತ ಜ್ವರ, ಚಳಿ ಸಮಸ್ಯೆಯು ಉಂಟಾಗುತ್ತಿದೆ. ತಣ್ಣನೆಯ ಗಾಳಿಗೆ ಮತ್ತು ಮಳೆಗೆ ಅಂಜಿ ಬೆಳಗಿನ ಜಾವಾ ಜಾಗಿಂಗ್ ಹೋಗುವವರು ಕೂಡ ಹೋಗುತ್ತಿಲ್ಲ.ಈ ಮಳೆಗೆ ಮನೆಯಿಂದ ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಮೂಲೆ ಸೇರಿದ್ದ ಚಳಿಗಾಲಕ್ಕೆ ಸೀಮಿತವಾಗಿರುವ ಶ್ವೇಟರ್, ಮಪಾಲರ್ ಇನ್ನಿತರ ಉಡುಪುಗಳು ಮತ್ತು ಛತ್ರಿಗಳನ್ನು ಸಾರ್ವಜನಿಕರು ಈ ಮಹಾ ಮಳೆ ಮತ್ತು ಥಂಡಿಯಿಂದಾಗಿ ಹೊರ ತೆಗೆದಿದ್ದಾರೆ .

ಮಾರುಕಟ್ಟೆಗೆ ಆಗಮಿಸಿದ ವಿವಿಧ ಬಗೆಯ ಛತ್ರಿಗಳು :

ಕಲರ್ ಕಲರ್ ನಲ್ಲಿ ರಸ್ತೆಯ ಬದಿಯಲ್ಲಿ ಒಂದಕ್ಕಿಂತ ಒಂದು ಮಿಂಚುತ್ತಿದ್ದು ಹಾದಿ ಹೋಗುವವರನ್ನು ಕೈ ಬಿಸಿ ತನ್ನತ್ತ ಕರೆಯುತ್ತಿವೆ ಅದ್ರಲ್ಲೂ ಕಾಲೇಜಿನ ಹುಡುಗಿ ಹುಡುಗರನ್ನು ಅಂತು ಆಕರ್ಷಣೆಗೆ ಒಳಗಾಗುವಂತೆ ಮಾಡುತ್ತಿವೆ.

ಛತ್ರಿಗಳ ಬೆಲೆ : ಹಿಂದಿನ ಕಾಲದಲ್ಲಿ 50 ರೂಪಾಯಿ ಯಿಂದ 100 ರೂಪಾಯಿ ವರೆಗೆ ಇದ್ದ ಬೆಲೆ ಇಂದು ಬಾಯಿ ಮೇಲೆ ಬೆರೆಳು ಇಟ್ಟುಕೊಳ್ಳುವಂತೆ ಮಾಡುತ್ತಿವೆ.

ಪ್ರಸ್ತುತ ಕೊಡೆಗಳ ಬೆಲೆ 100, 200,250, 300, ವರೆಗೆ ಏರುಗತಿಯಲ್ಲಿ ದರಗಳಿದಾವೆ.

ರೇಣುಕಾ ಪಾಳಾ : ಕೊಡೆಗಳ ಬೆಲೆ ಜಾಸ್ತಿ ಆಗಿದೆ ಆದ್ರೂ ಅನಿವಾರ್ಯವಿದೆ. ಈ ಮಳೆ ಹೊಡೆತಕ್ಕೆ ಕೊಡೆಗಳನ್ನು ಖರೀದಿ ಮಾಡುವುದು ಅನಿವಾರ್ಯವಿದೆ ಎನ್ನುತ್ತಿದ್ದಾರೆ.

ಅನ್ನಪೂರ್ಣ ಪೆÇಲೀಸ್ ಇಲಾಖೆ : ಮಳೆಗಾಲದ ಇಂದಿನ ದಿನಗಳಲ್ಲಂತೂ ಕೊಡೆ ಇಲ್ಲದೆ ಮನೆ ಹೊರ ಹೋಗುವಂತಿಲ್ಲ . ಆದ್ದರಿಂದ ನೋಡಲು ಸುಂದರ , ಆಕರ್ಷಕವಾದ ಹಾಗೂ ಬಾಳಿಕೆ ಬರುವಂಥ ಛತ್ರಿ ಕೊಳ್ಳಬೇಕು .

ಕಾಶಿಬಾಯಿ. ಸಿ.ಗುತ್ತೇದಾರ ಪಾಳಾ