ಸತತ ಮಳೆಯಲ್ಲಿ ಹಲಕೊಡ ಸಿದ್ದೇಶ್ವರ ಜಾತ್ರೆ

ಚಿಂಚೋಳಿ,ಸ 6: ತಾಲೂಕಿನ ಹಲಕೊಡ ಗ್ರಾಮದ ಸಿದ್ದೇಶ್ವರ ದೇವರ ಜಾತ್ರೆಯು ಶ್ರಾವಣ ಮಾಸದ ಮೂರನೇ ಸೋಮವಾರ ಸತತ ಮಳೆಯಲ್ಲೂ ಕೂಡ ಅದ್ಧೂರಿಯಾಗಿ ಜಾತ್ರೆಯು ಜರುಗಿತು. ಬೆಳಗ್ಗೆ ಸಿದ್ದೇಶ್ವರ ದೇವರ ರುದ್ರಾಭಿಷೇಕ ಮಾಡಲಾಯಿತು ನಂತರ ಹಲಕೊಡ ಗ್ರಾಮದ ದೇವಾಲಯದ ಅರ್ಚಕ ವಿಶ್ವನಾಥ ಸ್ವಾಮಿ, ಅವರ ಮನೆಯಿಂದ ಸಿದ್ದೇಶ್ವರ ಗುಡಿ ವರೆಗೆ ಪಲ್ಲಕ್ಕಿ ಮೆರವಣಿಗೆ ಸತತ ಮಳೆ ಇದ್ದರೂ ಕೂಡ ಭಕ್ತರು ಮಳೆಯಲಿ ಪಲ್ಲಕ್ಕಿ ಮೆರವಣಿಗೆ ಮಾಡಿದರು ಈ ಸಂದರ್ಭದಲ್ಲಿ ಸಿದ್ದೇಶ್ವರ ದೇವಾಲಯದ ಕಮಿಟಿಯ ಸದಸ್ಯರು ಮತ್ತು ಅನೇಕ ಭಕ್ತರು ಜಾತ್ರೆಯಲ್ಲಿ ಭಾಗಿಯಾಗಿದ್ದರು