
ಕಲಬುರಗಿ:ಮಾ.13:ವಿದ್ಯಾರ್ಥಿಗಳು ಪ್ರತಿನಿತ್ಯ ಕ್ರಮಬದ್ದವಾದ ಅಧ್ಯಯನವನ್ನು ಮೈಗೂಡಿಸಿಕೊಂಡು ಸತತ ಅಧ್ಯಯನದಿಂದ ನಿರ್ಧಿಷ್ಟ ಗುರಿ ಸಾಧನೆ ಸಾಧ್ಯವಾಗುತ್ತದೆ, ಇಂದಿನ ಆಧುನಿಕ ಮತ್ತು ತಾಂತ್ರಿಕ ಯುಗದಲ್ಲಿ ಮಾನವೀಯ ಮೌಲ್ಯಗಳು ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಗೂ ಪತ್ರಕರ್ತ ಸುರೇಶ ಲೇಂಗಟಿ ಹೇಳಿದರು.
ಶನಿವಾರ ಸಂಜೆ ಕಮಲಾಫುರ ತಾಲೂಕಿನ ಮಹಾಗಾಂವ ಕ್ರಾಸ್‍ನಲ್ಲಿರುವ ಸರಕಾರಿ ಶ್ರೀಮತಿ ಇಂದಿರಾಗಾಂದಿ ವಸತಿ ನಿಲಯದಲ್ಲಿ ಹಮ್ಮಿಕೊಂಡ ಶಾಲಾ ವಾರ್ಷಿಕೋತ್ಸವ ಮತ್ತು ಬಿಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಕನ್ನಡ ಭಾಷೆಗೆ ಮೊಟ್ಟ ಮೊಟ್ಟ ಮೊದಲ ಕೃತಿ ನೀಡಿ ಹೆಮ್ಮೆ ಕಲ್ಯಾಣ ಕರ್ನಾಟಕಕ್ಕಿದೆ, ಅಲ್ಲದೆ ಕನ್ನಡ ಸಾಹಿತ್ಯಕ್ಕೆ ವಚನಶಾಸ್ತ್ರ ನೀಡಿ ಹೆಮ್ಮ ಸಹ ನಮ್ಮ ಭಾಗಕ್ಕೆ ಸಲ್ಲುತ್ತದೆ,ಕನ್ನಡ ಉಳಿಸಿ ಬೆಳೆಸುವಲ್ಲಿ ಕಸಾಪ ನಿರಂತರ ಶ್ರಮಿಸುತ್ತಿದೆ, ಮುಂಬರುವ ದಿನಗಳಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿ ಸಾಂಸ್ಕøತಿಕ ವಾತಾವರನ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ, ನಿಮೆಲ್ಲರ ಸಹಕಾರವಿರಲಿ ರಂದರು.
ವಸತಿ ಶಾಲೆಗಳ ಜಿಲ್ಲಾ ಸಮನ್ವಯಾಧಿಕಾರಿ ಶಿವರಾಂ ಚವ್ಹಾಣ ಮಾತನಾಡಿ ಇಂದು ಸರಕರಿ ವಸತಿ ಶಾಲೆಗಳಲ್ಲಿ ಹಿಂದಿಗಿಂತ ಗುಣಮಟ್ಟದ ಶಿಕ್ಷನ ನೀಡಲಾಗುತ್ತಿದೆ, ಇದರ ಪ್ರತಿಫಲವೆಂಬಂತೆ ಕಳೆದ ವರ್ಷ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದ ವಿದ್ಯಾರ್ಥೀ ವಸತಿ ಶಾಲಾಎಯ ವಿದ್ಯಾರ್ಥಿಯಾಗಿದ್ದ, ಇಲ್ಲಿರುವ ವಿದ್ಯಾರ್ಥಿಗಳು ಯಾರಿಗೂ ಕಡಿಮೆ ಇಲ್ಲ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಾಧನೆ ಹೊರಹೊಮ್ಮಲಿ ಎಂದರು.
ಕಳೆದ ವರ್ಷ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ಕೆಲ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತ್ಕರಿಸಿ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀನಿವಾಸ ಸರಡಗಿಶ್ರೀ ರೇವಣಸಿದ್ದ ಶಿವಾಚಾರ್ಯ,ವಸತಿ ಶಾಲೆಗಳ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅಣವೀರ ಹರಸೂರ, ವಸತಿ ಶಾಲೆಗಳ ಜಿಲ್ಲಾ ಸಮನ್ವಯಾಧಿಕಾರಿ ಶಿವರಾಂ ಚವ್ಹಾಣ, ಅವರಾದ ಕೆಆರ್‍ಸಿಆರ್‍ಸಿಆರ್ ಪ್ರಾಂಶುಪಾಲ ಭೀಮಾಶಂಕರ ತಳವಾರ, ಮಹಾಗಾಂವ ಕ್ರಾಸ್ ವಸತಿ ಶಾಲೆ ಪ್ರಾಂಶುಪಾಲ ಮಲ್ಲಿಕಾರ್ಜುನ ಬಿರಾದರ, ಕೊಡ್ಲಿ ವಸತಿ ಶಾಲೊಎ ಪ್ರಾಂಶುಪಾಲ ರಾಜಶೇಖರ ಮಾಂಗ್, ಪಟ್ಟಣ ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲ ಶರಣಬಸ್ಸಪ್ಪ ಪಾಟೀಲ, ಕಸಬಾ ವಸತಿ ಶಾಲೆ ಪ್ರಾಂಶುಪಾಲ ಸಂತೋಷ ದೊಡ್ಡಮನಿ, ಗುಂಡಗುರ್ತಿ ವಸತಿ ಶಾಲೆ ಪ್ರಾಂಶುಪಾಲ ಶರಣಬಸ್ಸಪ್ಪ ಮಾಂಗಶೆಟ್ಟಿ, ಶಿವಾನಂದ ನಿರೋಣಿ, ಡಿಐಇ ಕುಮಾರಸ್ವಾಮಿ, ವೈಜನಾಥ ಬಂಡೆ, ರಾಜಕುಮಾರ ಅಮರನಾಥ
ಶಿವಶಂಕರ ಬಿರಾದರ, ಪರಸುರಾಮ ಕಂಬಾರ, ಗಂಗಾಧರ ಸೋನಾರ, ರವಿಕುಮಾರ, ಮಲ್ಕಮ್ಮ ಬಿರಾದರ, ಶ್ರೀಲತಾ ಸಜ್ಜನ, ವೈಶಾಲಿ, ಜ್ಯೋತಿ, ರಾಜಕುಮಾರ ಇತರರು ಇದ್ದರು.
ಅಶೋಕ ಕೋಟಿ ನಿರೂಪಣೆ, ಸ್ವಾಗತ ಕಿಶನ ಚವ್ಹಾಣ, ಪ್ರೀತಿ ಕಲಶೆಟ್ಟಿ ವಂದಿಸಿದರು.
ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸರಕಾರ ಸಾಕಷ್ಟು ಸವಲತ್ತುಗಳನ್ನು ಒದಗಿಸುತ್ತಿದೆ, ಇದರ ಸದುಪಯೊಗ ಪಡೆದು ಶಿಕ್ಷಕರ ಮಾರ್ಗದರ್ಶನ ಪಡೆದು ಜೀವನದಲ್ಲಿ ಹೆಚ್ಚಿನ ಪ್ರತಿಶತ ಫಲಿತಾಂಶ ತಂದು ಹೆತ್ತವರಿಗೆ, ಶಿಕ್ಷಕರಿಗೆ ಮತ್ತು ಗ್ರಾಮಕ್ಕೆ ಕಿರ್ತಿ ತರುವ ಕಾರ್ಯ ಮಾಡಬೇಕು…..ಶ್ರೀ ರೇವಣಸಿದ್ದ ಶಿವಾಚಾರ್ಯ, ಶ್ರೀನಿವಾಸ ಸರಡಗಿ