ಸತತ ಪ್ರಯತ್ನದಿಂದ ಉತ್ತಮ ಸಾಧನೆ ನಮ್ಮದಾಗುತ್ತದೆ:ಲಕ್ಷ್ಮಣ

oppo_0

ಸೈದಾಪುರ:ಏ.17:ಸತತ ಪ್ರಯತ್ನದಿಂದ ಉತ್ತಮ ಸಾಧನೆ ನಮ್ಮದಾಗುತ್ತದೆ. ಇದಕ್ಕೆ ಡಾ.ಬಿ.ಆರ್.ಅಂಬೇಡ್ಕರ ಅವರ ವ್ಯಕ್ತಿತ್ವದ ಜೀವನ ನಮಗೆ ಮಾದರಿಯಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಲಕ್ಷ್ಮಣ ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿನಲ್ಲಿ ಅಜೀಂ ಪ್ರೇಮಜಿ ಫೌಂಡೇಶನ ವತಿಯಿಂದ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ ಜಯಂತಿ ಅಂಗವಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಸಾಕಷ್ಟು ತೊಂದರೆಗಳ ಮಧ್ಯದಲ್ಲಿ ಉತ್ತಮ ಓದನ್ನು ಮುಗಿಸಿ ಶ್ರೇಷ್ಠ ಸಂವಿಧಾನವನ್ನು ನಮಗೆ ಡಾ.ಬಿ.ಆರ್.ಅಂಬೇಡ್ಕರವರು ನೀಡಿದ್ದಾರೆ. ಅವರಲ್ಲಿನ ಛಲ ಹಾಗೂ ಸಾಧನೆ ನಮಗೆ ಸ್ಪೂರ್ತಿಯಾಗಬೇಕು. ಮಹಾನ ಮಾನವತವಾದಿಯಾದ ಅವರು ಎಲ್ಲರಿಗೂ ಸೌಲಭ್ಯವನ್ನು ಕಲ್ಪಿಸುವಲ್ಲಿ ಪ್ರಯತ್ನ ಮಾಡಿದ್ದಾರೆ. ನಮಗೆ ಕೊಡಮಾಡಲಾದ ಹಕ್ಕುಗಳನ್ನು ಹಾಗೂ ಕರ್ತವ್ಯಗಳನ್ನು ಉಪಯೋಗಿಸಿಕೊಂಡು ಅಭಿವೃದ್ಧಿ ಸಾಧಿಸೋಣ ಎಂದು ಕಿವಿ ಮಾತುಗಳನ್ನು ಹೇಳಿದರು.
ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಸಂಪನ್ಮೂಲ ವ್ಯಕ್ತಿ ಸುರೇಶಗೌಡ, ಉಪನ್ಯಾಸಕರಾದ ಹಣಮರೆಡ್ಡಿ ಮೋಟ್ನಳ್ಳಿ, ಶ್ವೇತಾ ರಾಘವೇಂದ್ರ ಪೂರಿ, ಆನಂದ ಪಾಟೀಲ ಕೊಂಡಾಪುರ, ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಇತರರಿದ್ದರು.