ಸತತ ಪರಿಶ್ರಮ ಪಟ್ಟರೆ ಪ್ರತಿಯೊಬ್ಬರೂ ಸಾಧನೆ ಮಾಡಬಹುದು

ಹೊಸದುರ್ಗ.ಆ.೧: ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಪ್ರತಿಭೆ ಇದ್ದೆ ಇರುತ್ತದೆ, ಪ್ರತಿಯೊಬ್ಬರೂ ಸಹಾ ಸತತ ಪರಿಶ್ರಮ ಪಟ್ಟರೆ ಯಾವುದೇ ಕ್ಷೇತ್ರದಲ್ಲಾದರೂ ಸಹ ಸಾಧನೆ ಮಾಡಬಹುದು ಎಂದು ತಾಲೂಕು ಶ್ರೀ ವೀರ ಮಡಿವಾಳ ಮಾಚಿದೇವ ಸಂಘದ ಗೌರವಾಧ್ಯಕ್ಷ ಬಿ.ಆರ್.ರಾಮಕೃಷ್ಣಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಪಟ್ಟಣದ ಶ್ರೀ ವೀರ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ  ನಾಗತಿಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ರಾಜ್ಯ ಶ್ರೀ ವೀರ ಮಡಿವಾಳ ಮಾಚಿದೇವ ಯುವ ಸೇನಾ ಪಡೆಯ ವತಿಯಿಂದ ಆಯೋಜಿಸಲಾಗಿದ್ದ ಚಿತ್ರದುರ್ಗ ಹಾಗೂ ದಾವಣಗೆರೆ ಅವಳಿ ಜಿಲ್ಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.ಇಂದು ಯಾರನ್ನೂ ಸಹಾ ಕೇವಲ ಅಂಕಗಳಿಕೆಯಲ್ಲಿ ವ್ಯಕ್ತಿತ್ವ ಅಳೆಯಲು ಸಾಧ್ಯವಿಲ್ಲ. ಪ್ರತಿಯೋಬ್ಬರೂ ಸಹಾ ಒಂದಲ್ಲಾ ಒಂದು ಪ್ರತಿಭೆಯಿಂದ ಮುಂದೆ ಬರುತ್ತಾರೆ ಕೇವಲ ಅಂಕಗಳಿಕೆಗಾಗಿ ಶಾಲೆಗೆ ಹೋಗಬಾರದು. ಅಲ್ಲಿನ ಸಂಸ್ಕೃತಿಯನ್ನು ಕಲಿಯುವಂತಿರಬೇಕು. ಉನ್ನತ ಗುರಿಯೊಂದಿಗೆ ಶಿಕ್ಷಣಭ್ಯಾಸ ಆರಂಭಿಸಿ, ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ಗುರುತಿಸಿಕೊಳ್ಳಬೇಕು ಎಂದು ಅಭಿಪ್ರಾಯಿಸಿದರು.ಸದ್ಗುರು ಆಯುರ್ವೆಧ ಸಂಸ್ಧೆಯ ಮಾಲಿಕ ಪ್ರದೀಪ್ ಮಾತನಾಡಿ ಮಡಿವಾಳ ಸಮಾಜದವರ ಮೂಲ ಕಸುವನ್ನು ಬೇರೆ ಸಮಾಜದವರು ಬಳಸಿಕೊಂಡು ಇಂದು ಸರ್ಕಾರದಿಂದ ಸಾವಿರಾರು ಕೋಟಿ ಅನುದಾನ ತಗೆದುಕೊಳ್ಳುತ್ತಿರುವುದು ಬೇಸರದ ಸಂಗತಿ,ಮಡಿವಾಳ ಸಮಾಜದವರು ಮೊದಲು ವೃತ್ತಿಯನ್ನ ಪ್ರೀತಿಸಿ ಗೌರವಿಸಿದರೆ ಅವರ ಬದುಕು ಬಂಗಾರವಾಗುತ್ತದೆ ಎಂದು ಕರೆ ನೀಡಿದರು.ಸೇನಾ ಪಡೆಯ ಗೌರವಾಧ್ಯಕ್ಷ ಎನ್.ಕೆ.ತಿಪ್ಪೇಸ್ವಾಮಿ ಮಾತನಾಡಿ ನಾವು ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಧಿಕವಾಗಿ ಹಿಂದೆ ಉಳಿದಿದ್ದೇವೆ,ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಅಸ್ತಿ ಮಾಡುವುದನ್ನು ಬಿಟ್ಟು ಅವರಿಗೆ ಉತ್ತಮವಾದ ವಿದ್ಯಾಭ್ಯಾಸ ನೀಡಿ ಸುಸಂಸ್ಕೃತರನ್ನಾಗಿ ಮಾಡುವುದರ ಮೂಲಕ ಮಕ್ಕಳನ್ನ ಸಮಾಜದ ಆಸ್ತಿಯನ್ನಾಗಿ ಮಾಡಿ ಎಂದು ಕರೆ ನೀಡಿದ ಅವರು ನಮ್ಮಲ್ಲಿ ಜಾಗೃತಿ ಇಲ್ಲದಿದ್ದರೆ ಸಮುದಾಯ ಅವನತಿಯತ್ತಾ ಹೋಗುತ್ತದೆ ಸಮುದಾಯಕ್ಕೆ ಸಂಪರ್ಕಗಳ ಅವಶ್ಯಕತೆ ಇದೆ, ಪರಿಶ್ರಮ ಇಲ್ಲದಿದ್ದರೆ ಬೆಳವಣಿಗೆ ಹಾಗಲು ಸಾದ್ಯವಿಲ್ಲ, ಹಿಂದುಳಿದ ಸಮುದಾಯಗಳಿಗೆ ಸಹಾಯ ಮಾಡು ಗುಣ ಬೆಳೆಯಬೇಕಿದೆ,ಅಂಧ ಪ್ರತಿಭೆಗಳನ್ನು ಗುರುತಿಸಿ ಅವರನ್ನ ಪೊತ್ಸಾಹಿಸುವ ಕೆಲಸವಾಗಬೇಕಿದೆ ಎಂದು ಕರೆ ನೀಡಿದರು.ರಾಜ್ಯ ಶ್ರೀ ವೀರ ಮಡಿವಾಳ ಮಾಚಿದೇವ ಯುವ ಸೇನಾ ಪಡೆಯ ಅಧ್ಯಕ್ಷ ನಾಗತಿಹಳ್ಳಿಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು,ಕಾರ್ಯಕ್ರಮದಲ್ಲಿ ಯುವಸೇನಾ ಪಡೆಯ ಕಾರ್ಯಾದ್ಯಕ್ಷ ಬೆನಕನಹಳ್ಳಿಶಿವಣ್ಣ, ತಾಲೂಕು ಇಸ್ತಿçà ಕಾರ್ಮಿಕರ ಸಂಘದ ಅಧ್ಯಕ್ಷ ಮೀರಸಾಬಿಹಳ್ಳಿಶಿವಣ್ಣ, ಶ್ರೀ ವೀರ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಎಸ್.ಗಂಗಾಧರ್,ಮಹಿಳಾ ಅಧ್ಯಕ್ಷೆ ರೇಖಾ ಮಂಜುನಾಥ್, ಕಾರ್ಯಧರ್ಶಿರಮೇಶ್, ಸುರೇಶ್, ಜಾನಕಲ್ಲುದೇವರಾಜ್, ಕೆಲ್ಲೋಡುಮಂಜುನಾಥ್ ಎಂ.ಸುರೇಶ್, ಅರಲಹಳ್ಳಿಮಂಜುನಾಥ್ ಪಶುವೈಧ್ಯಾಧಿಕಾರಿ ತಿಪ್ಪೇಸ್ವಾಮಿ ಮುಂತಾದವರು ಉಪಸ್ಧಿತರಿದ್ದರು. 

Attachments area