ಸತತ ಪರಿಶ್ರಮವೇ ಸಾಧನೆಯ ಮೆಟ್ಟಿಲು:ಮಲ್ಲಿಕಾರ್ಜುನ

ಸೈದಾಪುರ:ನ.16:ಮಕ್ಕಳು ನಿರಂತರ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ಸಂಪಾದಿಸಬೇಕು ಅಂದಾಗ ಮಾತ್ರ ಭವಿಷ್ಯತ್ತಿನಲ್ಲಿ ಯಶಸ್ವಿಗಳಿಸಲು ಸಾಧ್ಯ ಎಂದು ಪ್ರಾಂಶುಪಾಲ ಮಲ್ಲಕಾರ್ಜುನ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಬಾಲಛೇಡ ಅಲ್ಪಸಂಖ್ಯಾತರ ಸಮೂದಾಯ ನವೋದಯ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಂಡಿತ ಜವಾಹರಲಾಲ ನೆಹರೂರವರ ಜನ್ಮದಿನೋತ್ಸವದ ಅಂಗವಾಗಿ ಮಕ್ಕಳ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿರು. ನೆಹರೂ ಅವರು ಅಸಾಮಾನ್ಯ ವ್ಯಕ್ತಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀ ಸೇರಿದಂತೆ ಇತರ ಹೊರಾಟಗಾರರೊಂದಿಗೆ ಸಕ್ರೀಯವಾಗಿ ಪಾಲ್ಗೊಂಡು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಯಶಸ್ವಿಯಾದರು. ಅಲ್ಲದೆ ಭಾರತ ಪ್ರಧಾನಿಯಾಗಿಯೂ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ನೀವುಗಳು ಸಹ ಸಮಾಜ ಉಪಯುಕ್ತ ಕಾರ್ಯಗಳಲ್ಲಿ ಭಾಗವಹಿಸುವದರ ಮೂಲಕ ಉತ್ತಮ ನಾಗರೀಕರಾಗಿ ಹೊರ ಹೊಮ್ಮಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿ ಆನಂದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮರೆಪ್ಪ ಕಟ್ಟಿಮನಿ, ಶಿಕ್ಷಕರಾದ ವಿಶ್ವನಾಥ, ನರಸಪ್ಪ, ಹಣಮಂತರಾವ, ವಿನೋದ, ಆಂಜನೇಯ, ಚಾಂದಪಾಷ, ರಾಕೇಶ, ಶೋಭಾ, ಕವಿತಾ, ಸವಿತಾ ಇತರರಿದ್ದರು. ಚನ್ನಪ್ಪ ಸ್ವಾಗತಿಸಿದರು. ಸರಿತಾ ನಿರೂಪಿಸಿದರು. ಸಾಬಣ್ಣ ವಂದಿಸಿದರು.