ಸತತ ಪರಿಶ್ರಮದಿಂದ ಸಾಧನೆ- ಸಕಲ ಸಾಧ್ಯ- ಪೂಜಾ

ಸಿರವಾರ.ನ.೨೩- ಜೀವನದಲ್ಲಿ ಯಶಸ್ಸು ಸುಮ್ಮನೆ ಬರುವುದಿಲ್ಲ, ಸತತ ಪರಿಶ್ರಮ ಇರಬೇಕು, ಅದರಲೂ ನನಂತವರಿಗೆ ಈ ರೀತಿ ಮಾಡುತ್ತೆನೆ ಎಂದಾಗ ಅನೇಕರು ಅವಮಾನ ಮಾಡಿದರು.
ಈಗ ಸಮಾಜ ನನಗೆ ಸನ್ಮಾನಿಸಿ ಗೌರವಿಸಿ, ಕೈಮುಗಿಯುತ್ತಿದೆ ಅಂದರೆ ನಾನು ಸಹಿಸಿದ ಅವಮಾನ ಅದನ್ನು ಸಹಿಸಿಕೊಂಡು ಕಠಿಣ ಪರಿಶ್ರಮದಿಂದ ಓದಿ ಶಿಕ್ಷಕಿಯ ಹುದ್ದೆಗೆ ಆಯ್ಕೆಯಾಗಿದ್ದನೇ ಎಂದು ತೃತೀಯ ಲಿಂಗ ಪೂಜಾ ನೀರಮಾನ್ವಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಕಾರ್ಯಕರ್ತರ ಹಾಗೂ ವಿವಿಧ ಸಂಘಟನೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ನನ್ನ ದೇಹದಲ್ಲಿ ಆದ ಬದಲಾವಣೆಯಿಂದ ಸಮಾಜ, ಮನೆಯವರು ಅವಮಾನಿಸಿದರು ಆದರೂ ಛಲಬಿಡದೆ ಓದಿ, ಶಾಲೆಯ,ಕಾಲೇಜಿನಲ್ಲಿ ಎಲ್ಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರಿವೆ.
ಪ್ರಾಥಮಿಕ, ಪ್ರೌಢ ನೀರಮಾನವಿಯಲ್ಲಿ, ಪಿಯುಸಿ ಪದವಿ ಮಾನ್ವಿಯಲ್ಲಿ, ಬಿಎಡ್ ರಾಯಚೂರಿನ ನಂದಿನ ಕಾಲೇಜಿನಲ್ಲಿ ವ್ಯಾಸಂಗ ಮಾಡಿದೆ. ಜೀವನದಲ್ಲಿ ಕಲಿಕಾ ಉತ್ಸಾಹ ಯಾವತ್ತು ಕಳೆದುಕೊಳ್ಳಬಾರದು. ಹಿಂದೆ ಯಾರು ಸಹ ಮಾಡಿಲ, ಇಂದು ಎಲ್ಲಾರೂ ನನನೂ ಗುರುತಿಸಿ ಸನ್ಮಾನಿಸುತ್ತಿದ್ದಾರೆ. ಎಲ್ಲರಂತೆ ನಮ್ಮನ್ನು ಕಾಣಬೇಕು ಎಂದರು. ಹಿರಿಯ ಮುಖಂಡ ಜಿ.ಲೋಕರಡ್ಡಿ ಮಾತನಾಡಿ ಜ್ಞಾನಕ್ಕೆ ಜಾತಿ, ಧರ್ಮ,ಲಿಂಗ ಬೇದವು ಇರುವುದಿಲ. ಪೂಜಾ ತೆಗೆದುಕೊಂಡ ನಿರ್ಧಾರ ಪ್ರಶಂಸಾರ್ಹವಾಗಿದೆ. ಇವರು ತೃತೀಯ ಲಿಂಗದವರಿಗೆ ಮಾರ್ಗದರ್ಶಕರಾಗಿ ಬೇಳೆಯಲಿ, ಬಿಕ್ಷೆ ಬೇಡಿ ಜೀವನ ಮಾಡುವುದಷ್ಟೇ ಜೀವನ ಎಂದುಕೊಂಡವರು ಇವರನ್ನು ನೋಡಿ ಕಲಿಯಬೇಕು. ಮುಂದೆ ಶಿಕ್ಷಕರ ದಿನಾಚರಣೆಯಲ್ಲಿ ಉತ್ತಮ ಶಿಕ್ಷಕಿ ಎಂದು ಶಾಸಕರ ಬಂಗಾರದ ಪದಕ ನಿಮ್ಮದಾಗಲಿ. ನಿಮಗೆ, ನಿಮ್ಮಂತವರಿಗೆ ನಾನು ನಮ್ಮ ಊರಿನವರು ಸಹಾಯ ಮಾಡಲು ಯಾವಾಗಲು ಸಿದ್ದ ಎಂದರು.
ಈ ಸಂದರ್ಭದಲ್ಲಿ ದಾನನಗೌಡ, ನಾಗರಾಜಗೌಡ ಡಿಎನ್ ವೈ, ಪ.ಪಂ.ಸದಸ್ಯರಾದ ಕೃಷ್ಣನಾಯಕ, ಸೂರಿ ದುರುಗಣ್ಣ ನಾಯಕ, ಅಜೀತ್ ಕುಮಾರ, ಹಸೇನ ಅಲಿ, ಮೌಲಸಾಬ್ ವರ್ಚಸ್ಸ್,ಮಾರ್ಕಪ್ಪ, ಎಂ.ಡಿ.ವಲಿಸಾಬ್,ರಂಗನಾಥ ಬೋವಿ,ನಾಗರಾಜ,ಸತ್ತರಸಾಬ್, ಚಂದ್ರಶೇಖರಗೌಡ,ಚಿದಾನಂದ ಕರಿಗೂಳಿ,ಯಲ್ಲಪ್ಪದೊರೆ,ಅಂಬುನಾಯಕ, ಡಿ.ಯಮನೂರು, ಸೂರಿ ಹುಸೇನಪ್ಪನಾಯಕ, ಶಂಕರ ಮರಾಟ, ಶಂಕರಗೌಡ, ಶಾಂತಪ್ಪ ಪಿತಗಲ್.ಷರೀಫ್ ಸೇರಿದಂತೆ ಅನೇಕರು ಇದ್ದರು.