
ಮಾಲೂರು,ಮೇ.೨೨- ವಿದ್ಯಾರ್ಥಿಗಳು ವ್ಯಾಸಂಗದ ದಿನಗಳಲ್ಲಿ ಶ್ರದ್ಧೆ, ಸಮಯಪ್ರಜ್ಞೆ, ಛಲ, ಗುರಿಯನ್ನು ಇಟ್ಟುಕೊಂಡು ಸತತ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಶೈಕ್ಷಣಿಕವಾಗಿ ಸಾಧನೆಯನ್ನು ಮಾಡಬಹುದಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ರೈಲ್ವೆ ನಿಲ್ದಾಣದ ರಸ್ತೆಯ ಬಳಿ ಇರುವ ಬಿಜಿಎಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ೨೦೨೨-೨೩ನೇ ಸಾಲಿನಲ್ಲಿ ಎಸೆಸೆಲ್ಸಿ ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ, ಛಲ, ಆಸಕ್ತಿ, ಗುರಿಯನ್ನು ಇಟ್ಟುಕೊಂಡು ತಮ್ಮ ಮನಸ್ಸನ್ನು ಒಂದೆಡೆ ಕ್ರೂಡೀಕರಿಸಿ, ವ್ಯಾಸಂಗದ ದಿನಗಳಲ್ಲಿ ಶ್ರಮವಹಿಸಿ ಓದಿನಲ್ಲಿ ತೊಡಗಿಸಿಕೊಂಡರೆ ನಮಗೆ ಫಲಸಿಗುತ್ತದೆ. ದೈಹಿಕವಾಗಿ ತರಗತಿಗಳಲ್ಲಿದ್ದಾಗ ಮಾನಸಿಕವಾಗಿ ಎಚ್ಚರವಿರಬೇಕು ಮನಸ್ಸನ್ನು ತರಗತಿಗಳಲ್ಲಿಯೇ ಕಟ್ಟಿಹಾಕಬೇಕು, ಹೊರಗಡೆ ಹರಿಯಲು ಬಿಡಬಾರದು, ಶಿಕ್ಷಕರು ಮಾಡುವ ಪಾಠ ಪ್ರವಚನಗಳನ್ನು ಗ್ರಹಿಸಬೇಕು, ತರಗತಿಗಳಿಗೆ ಶೇಕಡ ನೂರರಷ್ಟು ಹಾಜರಿಯಾದರೆ ಶ್ರದ್ಧೆಯಿಂದ ಪಾಠ ಪ್ರವಚನ ಕೇಳಿದರೆ, ಶೈಕ್ಷಣಿಕವಾಗಿ ಉತ್ತಮ ಸಾಧನಯನ್ನು ಮಾಡಬಹುದಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಅಧಂಬರ್ಧ ಓದಿದರೆ ಮುಂದೆ ಪಶ್ಚತಾಪ ಪಡಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ಶ್ರಮವಹಿಸಿ ಓದುವ ಮೂಲಕ ಸಾಧನೆಗೈದು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಹೇಳಿದರು.
ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ ಎಸೆಸೆಲ್ಸಿ, ಪಿಯುಸಿ, ಶಿಕ್ಷಣ ಪಡೆದವರು ನಮ್ಮ ಸಂಸ್ಥೆಯಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾದರೆ ಹೆಣ್ಣು ಮಕ್ಕಳಿಗೆ ಬೆಂಗಳೂರಿನಲ್ಲಿ ಮಠದ ಶಾಲೆಯಾದ ವಾಣಿಜ್ಯಶಾಸ್ತ್ರಕಾಗಿ ದಾಖಲಾದರೆ ಆ ಹೆಣ್ಣು ಮಕ್ಕಳಿಗೆ ಕಡಿಮೆ ದರದಲ್ಲಿ ಶಿಕ್ಷಣ ನೀಡುವುದರ ಜೊತೆಗೆ ಐಎಎಸ್, ಕೆಎಎಸ್, ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ನೀಡಲಾಗುವುದು, ಜಗತ್ತಿನಲ್ಲಿ ಯಾವ ಹುದ್ದೆಯೂ ಕೇವಲವಲ್ಲ ಮನುಷ್ಯತ್ವದಿಂದ ವ್ಯತ್ಯಾಸ ಇರುವುದಿಲ್ಲ ನಾವು ಮಾಡುವ ಕೆಲಸ ನಮಗೆ ತೃಪ್ತಿಕರವಾಗಿರಬೇಕು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಶಾಖ ಮಠದ ಪೀಠಾಧಿಪತಿ, ಮಂಗಳಾನಂದ ಸ್ವಾಮಿ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ರಾಮು, ಪಟ್ಟಣದ ಬಿಜಿಎಸ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬೈಯಣ್ಣ ಮುಖಂಡರುಗಳಾದ ಕೆಂಪಣ್ಣ, ಆರ್.ಪ್ರಭಾಕರ್, ಬೆಳ್ಳಾವಿ ಸೋಮಣ್ಣ, ಡಿ.ಎಂ.ವಿಜಯ್ ಕುಮಾರ್, ಮಂಜುನಾಥ್, ಜಗನ್ನಾಥ್, ರಾಜೇಶ್, ಪ್ರಾಂಶುಪಾಲರಾದ ತಿಮ್ಮರಾಯಪ್ಪ, ಶ್ರೀಧರ್ ಮೂರ್ತಿ, ಕಾಲೇಜಿನ ಬೋಧಕ ಸಿಬ್ಬಂದಿ ಹಾಜರಿದ್ದರು.