ಸತತ ಪರಿಶ್ರದಿಂದ ಸಾಧನೆ ಸಾಧ್ಯಬಿಇಒ ಸಿದ್ದಪ್ಪ

 
ಹರಿಹರ.ನ.೨೪;  ಶಿಕ್ಷಣ ಸಂಸ್ಥೆಗಳು ಬೋಧನೆಯೊಂದಿಗೆ ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡಿದರೆ ಮಕ್ಕಳನ್ನು ಭವಿಷ್ಯದಲ್ಲಿ ಸ್ವಾವಲಂಬಿ ಪ್ರಜೆಗಳನ್ನಾಗಿ ಮಾರ್ಪಡಿಸಲು ಸಾಧ್ಯ ಎಂದು ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಸಿ ಸಿದ್ಧಪ್ಪ ಅಭಿಪ್ರಾಯಪಟ್ಟರು.  ಸಂತ ಅಲೋಶಿಯಸ್ ಪದವಿ ಪೂರ್ವ   ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ “ಎಕ್ಸ್ ಪೋ-21” ವಸ್ತುಪ್ರದರ್ಶನವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು  ಗುರಿಯೊಂದಿಗೆ  ಪರಿಶ್ರಮ, ಸತತ ಅಭ್ಯಾಸದಲ್ಲಿ ತೊಡಗಿಸಿಕೊಂಡರೆ ಏನನ್ನಾದರೂ ಸಾಧಿಸಬಹುದುಅಭ್ಯಾಸದೊಂದಿಗೆ ಧ್ಯಾನ,ಯೋಗ,ವ್ಯಾಯಾಮ ಗಳ ಅಗತ್ಯವನ್ನು ಪರೀಕ್ಷೆ  ಸಮೀಪಿಸಿದಾಗ ಆತುರಾತುರವಾಗಿ ಅಭ್ಯಾಸ  ಮಾಡದೆ, ಪ್ರಾರಂಭದಿಂದಲೇ ಹಂತಹಂತವಾಗಿ ಅಧ್ಯಯನದಲ್ಲಿ ತೊಡಗಿಸಿಕೊಂಡರೆ ಸುಲಭವಾಗಿ ಯಶಸ್ಸನ್ನು ಪಡೆಯಬಹುದು ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಸಾಮಾನ್ಯ ವಿದ್ಯಾರ್ಥಿಗಳೂ ಕೂಡ ಅಸಾಮಾನ್ಯವಾದ ಸಾಧನೆಗೈಯಬಹುದು ಎಂದು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ನ ಯುವ ಶಕ್ತಿಯನ್ನು ದೇಶದ ಶಕ್ತಿ ಯನ್ನಾಗಿ ಮಾರ್ಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.ವೇದಿಕೆಯಲ್ಲಿ ಹರಿಹರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಶ್ರೀನಿವಾಸ್,ಕಾಲೇಜಿನ ಮುಖ್ಯಸ್ಥರಾದ ಫಾದರ್.ಎರಿಕ್ ಮಥಾಯಸ್,ಕಾಲೇಜಿನ ಪ್ರಾಂಶುಪಾಲರಾದ ಬ್ಯಾಪ್ಟಿಸ್ಟ್ ಸನ್ನಿ ಗುಡಿನ್ಹೊ,ಉಪ ಪ್ರಾಂಶುಪಾಲರಾದ ಪುಷ್ಪಲತಾ ಅರಸ್ ಹಾಗೂ ಮೌಸಿನ್ ಉಲ್ಲಾ, ಕಾರ್ಯಕ್ರಮ ಸಂಯೋಜಕರಾದ ಪಾಸ್ಕಲ್ ಫರ್ನಾಂಡಿಸ್,ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಆದಿಲ್ ಹಾಗೂ ಉಪಾಧ್ಯಕ್ಷೆ ಶ್ರೇಯಾ.ಎಂ ಹಾಗೂ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು. ವಸ್ತು ಪ್ರದರ್ಶನದಲ್ಲಿ ಆಯೋಜಿಸಿದಇವರಿಗೆ  ಬಹುಮಾನಗಳನ್ನು ನೀಡಲಾಯಿತು.ವೇದಿಕೆಯ ಅತಿಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು ಈ ವೇಳೆ ಹರ್ಷಿತಾ, ಶೆನ್ವಿ ಖುರತ್ ಉಲೇನ್ ಸಲ್ಮಾ.ಶಿಕ್ಷಕ ವೃಂದದವರು ವಿದ್ಯಾರ್ಥಿ ವಿದ್ಯಾರ್ಥಿನಿಯರು ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಇದ್ದರು 

Attachments area