ಸತತ ಅಧ್ಯಯನ ಏಕಾಗ್ರತೆಯಿಂದ ಸಾಧನೆ ಸಾಧ್ಯ


ಲಕ್ಷ್ಮೇಶ್ವರ,ಮೇ.27: ಪಟ್ಟಣದ ಶ್ರೀಮತಿ ಕಮಲ ಶ್ರೀ ವೆಂಕಪ್ಪ ಎಂ ಅಗಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಲಾಂಜೆ -2023 ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳೆಗಿಸುವ ಮೂಲಕ ಹುಬ್ಬಳ್ಳಿ ಡಾಕ್ ಟ್ರರ್ನ್ ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜಯ್ ಕಬಾಡಿ ಅವರು ಮಾತನಾಡಿ ಜಗತ್ತು ತಾಂತ್ರಿಕತೆ ಅತ್ಯಂತ ಮುಂದುವರೆದಿದೆ, ಕ್ಷಣ ಕ್ಷಣಕ್ಕೂ ತಂತ್ರಜ್ಞಾನ ಮತ್ತು ಮಾಹಿತಿ ಕ್ಷೇತ್ರದಲ್ಲಿ ಬದಲಾವಣೆಗಳಾಗುತ್ತಿದ್ದು ಆ ಬದಲಾವಣೆಗಳಿಗೆ ತಕ್ಕಂತೆ ವಿದ್ಯಾರ್ಥಿಗಳು ಸಹ ತಮ್ಮ ಭವಿಷ್ಯವನ್ನು ಬೆಳಗಿಸಿಕೊಳ್ಳಬೇಕು.
ವಿದ್ಯಾರ್ಥಿಗಳು ಜೀವನದಲ್ಲಿ ಅಚಲವಾದ ವಿಶ್ವಾಸ ಗುರಿ ಮತ್ತು ಸಾಧನೆಯ ಕಡೆ ಗಮನಹರಿಸಿ ಕಲಿತ ಸಂಸ್ಥೆಗೆ ಹೆತ್ತ ತಂದೆ ತಾಯಿಗಳಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಮುನ್ನುಗ್ಗಬೇಕು ಸತತವಾದ ಅಧ್ಯಯನ ಮತ್ತು ಏಕಾಗ್ರತೆಯಿಂದ ಕೂಡಿದಾಗ ಮಾತ್ರ ಸಾಧನೆಗೈಯಲು ಸಾಧ್ಯವಾಗುತ್ತದೆ.
ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಅಲಿಯದೆ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ತಾವೇ ಜವಾಬ್ದಾರಿ ವಹಿಸಿಕೊಂಡು ಸಂಸ್ಥೆಗಳನ್ನು ಆರಂಭಿಸುವ ಮೂಲಕ ತಮ್ಮ ಜೀವನದಲ್ಲಿ ಗುರುತುಗಳನ್ನು ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾಕ್ಟರ್ ಉದಯ ಹಂಪಣ್ಣವರ್ ವಹಿಸಿದ್ದರು ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯ ಡಾಕ್ಟರ್ ಪರಶುರಾಮ್ ಬಾರ್ಕಿ ಡಾಕ್ಟರ್ ಗಿರೀಶ್ ಯತ್ನಳ್ಳಿ ಮಾಲತೇಶ್ ಐಜಿ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.