ಸತತ ಅಧ್ಯಯನದಿಂದ ಯಶಸ್ಸು

ಲಕ್ಷ್ಮೇಶ್ವರ,ಮಾ20: ವಿದ್ಯಾರ್ಥಿಗಳು ಸತತ ಅಧ್ಯಯನದಿಂದ ಹೆಚ್ಚಿನ ಅಂಕಗಳಿಸಲು ಸಾಧ್ಯ. ಕಠಿಣ ಪರಿಶ್ರಮ ನಿಮ್ಮ ಭವಿಷ್ಯದ ದಾರಿಗೆ ಹೆಚ್ಚಿನ ಬೆಳಕು ಚೆಲ್ಲುತ್ತದೆ. ಆದ್ದರಿಂದ ಮಕ್ಕಳು ದೈರ್ಯದಿಂದ ಅಭ್ಯಾಸ ಮಾಡಬೇಕು ಎಂದು ಡಿಡಿಪಿಐ ಬಸವಲಿಂಗಪ್ಪ ಹೇಳಿದರು. ಸಮೀಪದ ಗೊಜನೂರ ಸರ್ಕಾರಿ ಪ್ರೌಢಶಾಲೆಗೆ ಆಕಸ್ಮಿಕ ಬೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಮಕ್ಕಳು ಸತ್ಯವನ್ನೇ ನುಡಿಯಬೇಕು. ಪ್ರಿಯವಾಗಿ ಹೇಳಬೇಕು ಏಕೆಂದರೆ ನಾವು ದೇವರಿಗಿಂತ ಹೆಚ್ಚು. ನಮ್ಮ ಮೇಲೆ ನಾವು ನಂಬಿಕೆ ಇಟ್ಟವರು. ಅದಕ್ಕಾಗಿ ನಮ್ಮ ಹಣೆ ಬರಹ ನಮ್ಮ ಕೈಯಲ್ಲಿಯೇ ಇದ್ದು ಅದಕ್ಕೆ ಇರುವ ದಾರಿಗಳು ವಿಭಿನ್ನವಾಗಿದ್ದು ನಾವೇ ಹುಡಿಕಿಕೊಳ್ಳಬೇಕು. ಶಿಸ್ತು, ಅಭಿಲಾಷೆ, ದೇಶಪ್ರೀತಿ ಮಾತ್ರ ಶೇ 100 ರಷ್ಟು ಸಾಧನೆ ಹೊಂದಿದ್ದು ನಾವು 100 ರಷ್ಟು ಫಲಿತಾಂಶ ಮಾಡುವ ನಿಟ್ಟಿನಲ್ಲಿ ಯಾವಾಗಲೂ ಅಧ್ಯಯನದಲ್ಲಿ ತೊಡಗಬೇಕೆಂದರು.
ಮಕ್ಕಳು ಬರವಣಿಗೆ, ಕಾಗುಣಿತಾಕ್ಷರ ಹಾಗೂ ದಿನನಿತ್ಯದ ವ್ಯವಹಾರ ಲೆಕ್ಕಗಳ ಪರಿಚಯವಾಗದ ಹೊರತು ಕಲಿಕೆ ಅಪೂರ್ಣವಾಗುತ್ತದೆ. ಆ ದೆಸೆಯಲ್ಲಿ ಶಿಕ್ಷಕರು ಮಕ್ಕಳಿಗೆ ಮೊಬೈಲ್ ಗೀಳನ್ನು ಹೊಡೆದೊಡಿಸಿ ನೈತಿಕ, ಮೌಲ್ಯ ಶಿಕ್ಷಣ, ನೀಡಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಡಯಟ್ ಪ್ರಾಚಾರ್ಯರಾದ ಎಸ್.ಡಿ.ಗಾಂಜಿ ಅಭಿಪ್ರಾಯಪಟ್ಟರು.
ಮಕ್ಕಳಿಗೆ ವಿಭಿನ್ನವಾಗಿ ರಸಪ್ರಶ್ನೆ, ಹರಟೆ, ಆಲಿಸುವಿಕೆ, ಸೆಮಿನಾರ್, ಗುಂಪು ಚರ್ಚೆ, ವಿಭಿನ್ನವಾದ ಮೌಲ್ಯಮಾಪನ ತಂತ್ರ ಇತ್ಯಾದಿ ಬಳಕೆಯೊಂದಿಗೆ ವಿಶಿಷ್ಠವಾದ ಕಲಿಕೆಯನ್ನು ಪರಿಣಾಮಕಾರಿಯಾಗಿಸಬೇಕೆಂದು ಸಲಹೆ ನೀಡಿದರು.
ಶಾಲೆಯ ವಾತಾವಣ, ಪರಿಸರ ನೋಡಿದರೆ ಪರಮಾನಂದವಾಗುತ್ತದೆ. ಇಂತಹ ಕಲಿಕೆಯ ವಾತಾವರಣದಲ್ಲಿರುವ ಮಕ್ಕಳು ಅಂತಹ ಜ್ಞಾನದ ಪರಮಾನಂದ ಗಳಿಸಿಕೊಂಡು ಸಮಾಜದ ಕೊಡುಗೆಯಾಗಬೇಕೆಂದರು. ಶಾಲೆಯ ಪರಿಸರ, ಕೊಠಡಿ, ತಂತ್ರಜ್ಞಾನ ಇತ್ಯಾದಿ ಅವಲೋಕಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ತಮ ಫಲಿತಾಂಶ ನಿಡುವುದರೊಂದಿಗೆ ಈ ಶಾಲೆ ಇನ್ನೂ ಎತ್ತರಕ್ಕೆ ಏರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ವರ್ಗಕೋಣೆಯಲ್ಲಿ ಮಕ್ಕಳೊಂದಿಗೆ ಸಾಕಷ್ಟು ಚರ್ಚೆ, ಸಂವಾದದ ನಂತರ ಶಿಕ್ಷಕರ ಸಭೆ ನಡೆಸಿದ ಉಪನಿರ್ದೇಶಕರು ಅಮೂಲ್ಯ ಸಲಹೆ ಮಾರ್ಗದರ್ಶನ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎಸ್.ಬುರಡಿಯವರು ಶಿಕ್ಷಣದ ತಳಹದಿ ಎಂದರೆ ಸಮುದಾಯ-ಶಿಕ್ಷಕ, ವಿದ್ಯಾರ್ಥಿಗಳ ಸಹಕಾರ. ಅದು ಇಲ್ಲಿ ಪರಿಪೂರ್ಣವಾಗಿದ್ದು ಗಣನೀಯವಾಗಿ ಈ ಶಾಲೆ ಅಭಿವೃದ್ಧಿ ಪಥದತ್ತ ಸಾಗಿ ಗುಣಾತ್ಮಕ ಶಿಕ್ಷಣ ನೀಡುತ್ತಿದೆ ಎಂದರು. ಡಯಟ್ ಉಪನ್ಯಾಸಕರಾದ ಹೆಚ್.ಬಿ.ರಡ್ಡೇರ, ಮುಖ್ಯ ಶಿಕ್ಷಕರಾದ ರವಿ ಬ ಬೆಂಚಳ್ಳಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.