ಸಣ್ಣ ಮಾರುಕಟ್ಟೆ ಮರು ನಿರ್ಮಾಣಕ್ಕೆ
 ಪಾಲಿಕೆಗೆ ಆಪ್ ಒತ್ತಾಯ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.11:  ನೆಲಸಮಗೊಳಿಸಿರುವ ಶಿಥಿಲಾವಸ್ಥೆಯಲ್ಲಿದ್ದ ಸಣ್ಣ ಮಾರುಕಟ್ಟೆಯನ್ನು ತೆರವುಗಿಳಿಸಿದ್ದು. ಅಲ್ಲಿ ಮತ್ತೆ ಮಾರುಕಟ್ಟೆಯನ್ನು ಮರು ನಿರ್ಮಾಣ ಮಾಡಬೇಕು ಎಂದು ಆಪ್ ಪಕ್ಷ  ಪಾಲಿಕೆಯನ್ನು ಒತ್ತಾಯಿಸಿದೆ.
ಸಣ್ಣ ಮಾರುಕಟದಟೆಯಲ್ಲಿ  ನೂತನವಾಗಿ ಕಟ್ಟಡ ನಿರ್ಮಿಸಲು ಡಿ.ಪಿ.ಆರ್. ತಯಾರಿಸುತ್ತಿದ್ದು. ಅದು  ರೂ.10.50 ಕೋಟಿ ವೆಚ್ಚದಲ್ಲಿ ಜಿ-2 ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ಇದೆ.
ನಗರವು ದಿನದಿಂದ ದಿನಕ್ಕೆ ಜನಸಂಖ್ಯೆಯು ಬೆಳೆಯುತ್ತಿದ್ದು, ಸಣ್ಣ ಮಾರುಕಟ್ಟೆಯ ಪ್ರದೇಶವು ಬಳ್ಳಾರಿ ನಗರದ ಹೃದಯಭಾಗದಲ್ಲಿದೆ, ಬೆಂಗಳೂರು ರಸ್ತೆಗೆ ಅಂಟಿಕೊಂಡು ರಾಯಲ್ ವೃತ್ತದಿಂದ ಎ.ಪಿ.ಎಂ.ಸಿ. ಯ ಮುಖ್ಯದ್ವಾರದ ವರೆಗೆ ಎಡ ಮತ್ತು ಬಲಭಾಗಗಳಲ್ಲಿ ಎಲ್ಲವೂ ಸಹ ವಾಣಿಜ್ಯ ಮಳಿಗೆಗಳು ಇವೆ.
ಹೂವಿನ ಮಾರುಕಟ್ಟೆ, ಎಲ್.ಎನ್.ಟೆಂಪಲ್ ರಸ್ತೆ, ಬ್ರಾಹ್ಮಣ ಬೀದಿ, ಇಲ್ಲಿಯೂ ಸಹ ಜನಸಂದಣಿ ತುಂಬಾ ಇದ್ದು, ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆಯು ತುಂಬಾ ಮುಖ್ಯ ವಾಗಿರುತ್ತದೆ. ಆದ್ದರಿಂದ ತಾವು ನಿರ್ಮಿಸಲು ಹೊರಟಿರುವ ಜಿ+2 ಕಟ್ಟಡದ ಬದಲಾಗಿ ಜಿ+4 ಕಟ್ಟಡವನ್ನು ನಿರ್ಮಿಸಿ ದ್ವಿಚಕ್ರ ವಾಹನಗಳಿಗೆ ಹಾಗು ನಾಲ್ಕು ಚಕ್ರದ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿಕೊಡವುದರ ಜೊತೆಗೆ ಸುಸಜ್ಜಿತವಾದ ಸುಲಭ ಶೌಚಾಲಯದ ವ್ಯವಸ್ಥೆಯನ್ನೂ ಸಹ ಕಲ್ಪಿಸಿ ಕೊಟ್ಟಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುತ್ತದೆದೆಂದು ಮನವಿಯಲ್ಲಿ ಕೋರಿದೆ.
ನಗರದ ದೊಡ್ಡ ಮಾರುಕಟ್ಟೆ ಬಳಿಯೂ  ದ್ವಿಚಕ್ರ ವಾಹನಗಳಿಗೆ ಹಾಗು ನಾಲ್ಕು ಚಕ್ರದ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿಕೊಡವುದರ ಜೊತೆಗೆ ಸುಸಜ್ಜಿತವಾದ ಸುಲಭ-ಶೌಚಾಲಯದ ವ್ಯವಸ್ಥೆ ಮಾಡಬೇಕು ಎಂದು ಕೋರಿದೆ. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮಲ್ಲಪ್ಪ, ಜೆ.ವಿ.ಮಂಜುನಾಥ್ ಮೊದಲಾದವರು ಇದ್ದರು.