ಸಣ್ಣ ಕೈಗಾರಿಕೆ ಸಚಿವರ ಪ್ರವಾಸ

ಕಲಬುರಗಿ,ಜು.14:ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪೂರ ಅವರು ಜುಲೈ 15 ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿಯಿಂದ ಶಹಾಪೂರಕ್ಕೆ ಪ್ರಯಾಣಿಸುವರು.
ನಂತರ ಸಚಿವರು ಅಂದು ಸಂಜೆ 6 ಗಂಟೆಗೆ ಶಹಾಪೂರದಿಂದ ಮರಳಿ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಜುಲೈ 16 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕಲಬುರಗಿ ನಗರದ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆ ವಿಚಾರಣೆ ನಡೆಸುವರು. ಅಂದು ರಾತ್ರಿ 8.45 ಗಂಟೆಗೆ ಕಲಬುರಗಿಯಿಂದ ಸೋಲಾಪುರ-ಹಾಸನ್ ಎಕ್ಸ್‍ಪ್ರೆಸ್ ರೈಲಿನ ಮೂಲ ಬೆಂಗಳೂರಿಗೆ ಪ್ರಯಾಣಿಸುವರು.