(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.17: ಪ್ರಾಚೀನ ಕಾಲದಿಂದಲೂ ಕಥಾ ಪರಂಪರೆಯಲ್ಲಿ ವಿಶಿಷ್ಟವಾದ ಸ್ಥಾನಮಾನವನ್ನು ಬಳ್ಳಾರಿ ಜಿಲ್ಲೆ ಪಡೆದುಕೊಂಡಿದೆ. ಗದ್ಯದ ಹೃದ್ಯತನವನ್ನು ಹೇಳಿಕೊಟ್ಟ ಶಿವಕೋಟಿ ಇದೇ ನೆಲದ ಕಥೆಗಾರ. ಇಲ್ಲಿ ಎಲ್ಲಾ ಕಾಲಘಟ್ಟದಲ್ಲಿಯೂ ಸಂವೇದನಾಶೀಲ ಕಥೆಗಾರರು ಹುಟ್ಟಿಕೊಂಡಿದ್ದಾರೆ. ಸಮಕಾಲೀನ ಸಂದರ್ಭದಲ್ಲಿ ಕುಂವೀ, ಕೇಶವ ಮಳಗಿ, ಚಂದ್ರಕಾಂತ ವಡ್ಡು, ವಸುಧೇಂದ್ರ, ವೆಂಕಟೇಶ ಉಪ್ಪಾರ್, ಮಲ್ಲಿಕಾರ್ಜುನ ವಣೆನೂರು, ವೀರೇಂದ್ರ ರಾವಿಹಾಳ್ ತುಂಬಾ ಸತ್ವಯುತವಾಗಿ ಬರೆಯುತ್ತಿದ್ದಾರೆ. ಆದರೆ ಮಹಿಳಾ ಕಥೆಗಾರರು ಮಾತ್ರ ಯಾರೂ ಕಾಣುತ್ತಿಲ್ಲ. ಇದು ಈ ಭಾಗದ ಹಿನ್ನಡೆಯಾಗಿದೆ. ಇದು ಮುಂದಿನ ದಿನಗಳಲ್ಲಿ ಬದಲಾಗಬೇಕು. ಎಂದು ಲೇಖಕಿವ ಡಾ. ವಸುಂಧರಾ ಭೂಪತಿ ಹೇಳಿದರು.
ಅವರು ತಾಲ್ಲೂಕಿನ ಬಾಲಾಜಿನಗರದಲ್ಕಿರುವ ನಂದನವನದಲ್ಲಿ ಬೆಂಗಳೂರಿನ ವೀರಲೋಕ ಹಾಗೂ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ದೇಸಿ ಜಗಲಿ ಕಥಾ ಕಮ್ಮಟದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇಸಿ ಜಗಲಿ ರಾಜ್ಯ ಸಂಚಾಲಕ ಕಥೆಗಾರರಾದ. ಹನುಮಂತ ಹಾಲಿಗೇರಿ ವಹಿಸಿದ್ದರು.
ಡಾ. ತಿಪ್ಪೇರುದ್ರ ಕಾರ್ಯಕ್ರಮ ನಿರೂಪಿಸಿದರು. ಕಥಾ ಕಮ್ಮಟ ಶಿಬಿರದ ಸಂಚಾಲಕರಾದ ಡಾ. ಶಿವಲಿಂಗಪ್ಪ ಕೆ ಹಂದಿಹಾಳು ಪ್ರಾಸ್ತಾವಿಕ ವಂದಿಸಿದರೆ, ಸಹ ಸಂಚಾಲಕರಾದ ವೀರೇಂದ್ರ ರಾವಿಹಾಳ್ ಎಲ್ಲರನ್ನು ಸ್ವಾಗತಿಸಿದರು.