
ಕೋಲಾರ,ಮಾ,೧೫-ಕಟ್ಟಕಡೆಯ ಸಮುದಾಯಗಳನ್ನು ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗ ಕಡೆಗಣಿಸುವ ಮೂಲಕ ಸಾಮಾಜಿಕ ಅನ್ಯಾಯ ಮಾಡುತ್ತಿದ್ದಾರೆಂದು ಜೆಡಿಎಸ್ ರಾಜ್ಯ ಕೋರ್‌ಕಮಿಟಿ ಸದಸ್ಯ ಸಮೃದ್ದಿ ಮಂಜುನಾಥ್ ಆರೋಪಿಸಿದರು.
ಮುಳಬಾಗಿಲಿನ ಡಿವಿಜಿ ಕನ್ನಡ ಗಡಿಭವನದಲ್ಲಿ ಕೊರಚ ಕೊರಮರ ಸಂಘದ ಜನಜಾಗೃತಿ ಸಮಾವೇಶದಲ್ಲಿ ಕುಲಗುರು ನುಳಿಯ ಚನ್ನಯ್ಯ ರವರಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಕಟ್ಟಕಡೆಯ ಸಣ್ಣ ಪುಟ್ಟ ಜಾತಿಗಳ ಜನತೆಯನ್ನು ಯಾರೂ ಸಹ ಕಡೆಗಣಿಸಬಾರದು, ಇದರಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗುತ್ತದೆಂದು ಆತಂಕ ವ್ಯಕ್ತಪಡಿಸಿದರು.
ಕಳೆದ ಚುನಾವಣೆಯಲ್ಲಿ ನಾನು ಕಡಿಮೆ ಅಂತರಗಳ ಮತಗಳಿಂದ ಸೋತಿದ್ದೇನೆ, ಆದರೂ ಈ ಕ್ಷೇತ್ರ ಬಿಡದೇ ಸಮಾಜ ಸೇವೆ ಮುಂದುವರೆಸಿಕೊಂಡು ಬರುತ್ತಿದ್ದೇನೆ, ಈ ಬಾರಿಯಾದರೂ ಜನತೆ ನನಗೆ ಆರ್ಶೀವಾದಿಸಬೇಕೆಂದು ಮನವಿ ಮಾಡಿದರು.
ಸಮುದಾಯ ಭವನ ನಿರ್ಮಾಣಕ್ಕೆ ಆರ್ಥಿಕವಾಗಿ ನೆರವು ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಆರ್ಥಿಕ ಸಹಾಯ ನೀಡುವುದಾಗಿ ಭರವಸೆ ನೀಡಿದರು.
ಕೊರಚ ಕೊರಮರ ಸಂಘದ ರಾಜ್ಯಾಧ್ಯಕ್ಷ ದೇವಹಳ್ಳಿ ಜಿ.ಚಂದ್ರಣ್ಣ, ರಾಜ್ಯ ಉಪಾಧ್ಯಕ್ಷ ಗ್ಯಾಸ್ ಶೀಧರ್‌ಬಾಬು, ಜೆಡಿಎಸ್ ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ರಘುಪತಿರೆಡ್ಡಿ, ಶ್ರೀನಿವಾಸರೆಡ್ಡಿ, ಗೊಲ್ಲಹಳ್ಳಿ ಜಗದೀಶ್, ಮುನಿಸ್ವಾಮಿಗೌಡ, ಎಂ.ಆರ್.ಮುರಳಿ, ಸಂಘದ ಜಿಲ್ಲಾಧ್ಯಕ್ಷ ಎನ್.ವಡ್ಡಹಳ್ಳಿ ವಿ.ಆರ್.ಶಂಕರಪ್ಪ, ತಾಲೂಕು ಅಧ್ಯಕ್ಷ ಡಿ.ಎನ್.ಶ್ರೀನಿವಾಸ್, ರಾಜ್ಯ ನಿರ್ದೇಶಕ ರವೀಂದ್ರಬಾಬು, ರಮೇಶ್‌ಬಾಬು, ಸುರೇಶ್, ಮುನಿವೆಂಕಟಪ್ಪ, ಎನ್. ಶಂಕರ್, ಎಂ.ವೆಂಕಟೇಶ್ ಇದ್ದರು.