ಸಡಗರ ಸಂಭ್ರಮದ ಸ್ವಾತಂತ್ರ್ಯ ಹಬ್ಬ

ಸಿಂಧನೂರು,ಆ.೧೪-
ಸ್ವಾತಂತ್ರ್ಯ ದಿನಾಚರಣೆಯ ಮುನ್ನ ದಿನವಾದ ಇಂದು ನಗರದಲ್ಲಿ ತಾಲೂಕಾ ಆಡಳಿತ ಏರ್ಪಡಿಸಿದ್ದ ನನ್ನ ಮಣ್ಣು ನನ್ನ ದೇಶ ಸಿಂಧನೂರು ನಡೆಗೆ ಸ್ವಾತಂತ್ರ್ಯೋತ್ಸವ ಕಡೆಗೆ ವಿಶಿಷ್ಟ ವಿನೂತನ ಕಾರ್ಯಕ್ರಮ ಮಾಡುವ ಮೂಲಕ ನಗರದಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು.
ಆಹಾರ ಇಲಾಖೆ, ಆರೋಗ್ಯ, ಕೃಷಿ, ತೋಟಗಾರಿಕೆ, ಅರಣ್ಯ ಕಂದಾಯ, ಶಿಕ್ಷಣ, ಇಲಾಖೆ ಇನ್ನಿತರ ಇಲಾಖೆಗಳ ಸ್ಥಬ್ಧ ಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು. ಛತ್ರಿ ಚಾಮರಗಳಿಂದ ಮಕ್ಕಳು ಮಹಿಳೆಯರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣು ಪ್ರಕಾಶ ಪಾಟೀಲ್ ಸೇರಿದಂತೆ ಶಾಸಕರು ಅಧಿಕಾರಿಗಳನ್ನು ಅದ್ದೂರಿಯಾಗಿ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು.
ತಾಲೂಕಿನ ೩೦ ಗ್ರಾಮ ಪಂಚಾಯ್ತಿಗಳಿಂದ ಪವಿತ್ರವಾದ ಮಣ್ಣಿನ್ನು ತಂದು ಅದನ್ನು ರಾಷ್ಟ್ರ ರಾಜಧಾನಿ ದೆಹಲಿಗೆ ತೆಗೆದುಕೊಂಡು ಹೋಗುವಂತೆ ಮಣ್ಣನ್ನು ನೀಡಿದರು. ಅಂಗನವಾಡಿ ಕಾರ್ಯಕರ್ತೆಯರು ಇಲಕಲ್ ಸೀರೆಯನ್ನು ತೊಟ್ಟು ಕುಂಬಗಳ ಮೂಲಕ ಮೆರವಣಿಗೆಯಲ್ಲಿ ಭಾಗವಸಿದ್ದರು.
ನಗರದಲ್ಲಿ ನಿನ್ನೆಯಿಂದ ನಗರದ ಅಂಗಡಿ ಹಾಗೂ ಸರ್ಕಾರಿ ಕಛೇರಿಗಳ ಮೇಲೆ ವಿದ್ಯುತ್ ದೀಪಾಲಂಕಾರ ಮಾಡಿದ್ದರಿಂದ ನಗರ ವಿದ್ಯುತ್ ಬೆಳಕಿನಿಂದ ಜಗಮಗಿಸುವ ಮೂಲಕ ನಗರ ನೋಡುಗರ ಕಣ್ಣು ಸೇಳೆಯುವಂತೆ ಆಕರ್ಷಕವಾಗಿದ್ದು ಕಂಡು ಬಂದಿತು.
ಉತ್ಸಾಹ ಯುವ ತಹಸೀಲ್ದಾರ ಅರುಣ ಕುಮಾರ ದೇಸಾಯಿ. ನಗರ ಸಭೆಯ ಪೌರಾಯುಕ್ತರಾದ ಮಂಜುನಾಥ ಗುಂಡುರ ಇವರ ವಿಶೇಷ ಅಸಕ್ತಿ ತೆಗೆದುಕೊಂಡು ಎಲ್ಲಾ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯನ್ನು ಒಂದು ಹಬ್ಬದಂತೆ ಜನರು ಅಧಿಕಾರಿಗಳು ಜನ ಪ್ರತಿನಿಧಿ ಗಳು ಭಾಗವಹಿಸಿದ್ಧರು ಕಾರ್ಯಕ್ರಮನ್ನು ನೋಡಿ ಶಾಸಕ ಹಂಪನಗೌಡ ಬಾದರ್ಲಿಯವರು ಮೆಚ್ಚಿಗೆ ವ್ಯಕ್ತಪಡಿಸಿದರು.