ಸಡಗರ-ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಣೆಗೆ ನಿರ್ಧಾರ

ಕಲಬುರಗಿ,ಆ.07: ಕಲಬುರಗಿ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪರೇಡ್(ಡಿ.ಎ.ಆರ್.) ಮೈದಾನದಲ್ಲಿ ದೇಶದ 77ನೇ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 15ರಂದು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ ಸಭೆಯು ಸಹಮತದ ನಿರ್ಧಾರ ಕೈಗೊಂಡಿತು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ನೆರವೇರಿಸಲು ಹಾಗೂ ಧ್ವಜಾರೋಹಣ ಕಾರ್ಯಕ್ರಮಕ್ಕೆ ಜಿಲ್ಲೆಯ ಜನಪ್ರತಿನಿಧಿಗಳನ್ನು, ಗಣ್ಯರನ್ನು ಆಹ್ವಾನಿಸಲು ತಿಳಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಧ್ವಜಾರೋಹಣ ಸಮಾರಂಭವನ್ನು ಆಗಸ್ಟ್ 15 ರಂದು ಬೆಳಿಗ್ಗೆ 9.00 ಗಂಟೆಗೆ ಡಿ.ಎ.ಆರ್. ಗ್ರೌಂಡ್ (ಪೊಲೀಸ್ ಗ್ರೌಂಡ್) ನಲ್ಲಿ ನೆರವೇರಿಸಲು ತೀರ್ಮಾನಿಸಲಾಯಿತು,
ಅಂದು ಬೆಳಗಿನ 7-30 ಗಂಟೆಗೆ ಎಲ್ಲ ಸರ್ಕಾರಿ, ಸರ್ಕಾರದ ನಿಗಮ ಮಂಡಳಿ, ಸರ್ಕಾರಿ ಸ್ವಾಮ್ಯದ ಎಲ್ಲ ಕಚೇರಿಗಳಲ್ಲಿ ಹಾಗೂ ಎಲ್ಲ ಶಾಲಾ ಕಾಲೇಜುಗಳಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಎಲ್ಲ ಅಧಿಕಾರಿಗಳು, ಶಾಲಾ ಕಾಲೇಜು ಮಕ್ಕಳು ಪೊಲೀಸ್ ಗ್ರೌಂಡ್ ಮೈದಾನಕ್ಕೆ 8-30 ಗಂಟೆಯೊಳಗೆ ಆಗಮಿಸಬೇಕೆಂದರು. ಅಧಿಕಾರಿಗಳು ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು.
ಸಕಾರದ ಮಹಾತ್ವಾಕಾಂಕ್ಷಿ ಯೋಜನೆಗಳ ಕುರಿತು ಸ್ತಬ್ದ ಚಿತ್ರಗಳನ್ನು ಸಂಬಂಧಪಟ್ಟ ಇಲಾಖೆಗಳು ಮುತುರ್ವಜಿವಹಿಸಿ ಮಾಡಿಸುವಂತೆ ಸೂಚಿಸಿದರು. ಪಥ ಸಂಚಲನದಲ್ಲಿ ಪ್ರದರ್ಶಿಸಲು ಹಾಗೂ ಮಕ್ಕಳಿಂದ ಪೊಲೀಸ್ ಪರೇಡ ಮೈದಾನದಲ್ಲಿ ನೃತ್ಯ ಮತ್ತು ಸಂಗೀತದ ಕಾರ್ಯಕ್ರಮವನ್ನು ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಾಂಸ್ಕ್ರತಿಕ ಇಲಾಖೆಯಿಂದ ಕಲಾ ತಂಡಗಳ ಪ್ರದಶನವನ್ನು ಏರ್ಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಮಳೆ ಬರುವ ಸಂಭವ ಇರುವುದರಿಂದ (ವಾಟರ ಪ್ರ್ರೂಫ್) ಶ್ಯಾಮಿಯಾನ ಹಾಕಲು ಸಹ ತಿಳಿಸಲಾಯಿತು. ಪೊಲೀಸ್ ಗ್ರೌಂಡನಲ್ಲ್ಲಿ ಆಸನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ತಮಗೆ ನೀಡಿದ ಕೆಲಸಗಳನ್ನು ಅಚ್ಟುಕಟ್ಟಾಗಿ ನಿರ್ವಹಿಸಬೇಕೆಂದರು.
ಸಮಾರಂಭಕ್ಕೆ ಆಗಮಿಸುವ ಗಣ್ಯ ವ್ಯಕ್ತಿಗಳಿಗೆ ಹೂವಿನ ಹರಕ್ಕಾಗಿ ತಗಲುವ ವೆಚ್ಚದ ಹಣವನ್ನು ರೆಡ್ ಕ್ರಾಸ್ ಸಂಸ್ಥೆ ಕಲಬುರಗಿ ಅವರಿಗೆ ಚೆಕ್ ರೂಪದಲ್ಲಿ ನೀಡಲು ಸಭೆ ತೀರ್ಮಾನಿಸಲಾಯಿತು. ಸಂಜೆ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸಂಜೆ 6.30 ಗಂಟೆಗೆ ಸ್ವಾತಂತ್ರ್ಯ ದಿನಾಚರಣೆಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸಂಘಟಿಸಬೇಕೆಂದು ಸೂಚಿಸಿದರು. ರಾಷ್ಟ್ರದ ತ್ರಿವರ್ಣ ಧ್ವಜಾರೋಹಣ ಮಾಡುವಾಗ ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಆಗಸ್ಟ್ 14-08-2023 ಮತ್ತು 15-08-2023 ರಂದು ಕಲಬುರಗಿ ಜಿಲ್ಲೆಯಾದ್ಯಂತ ಸರಕಾರಿ ಕಟ್ಟಡಗಳಿಗೆ ದೀಪಾಲಂಕಾರ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಅದೇ ರೀತಿ ಅಂಗಡಿ ಮುಗ್ಗಟ್ಟುಗಳ ಮತ್ತು ವಿವಿಧ ಖಾಸಗಿ ಉದ್ದಿಮಿಗಳ ಕಟ್ಟಡಗಳ ಮಾಲೀಕರು ದೀಪಾಲಂಕಾರ ವ್ಯವಸ್ಥೆ ಮಾಡಿಕೊಳ್ಳುವಂತೆ ಹಾಗೂ ಮಿನಿ ವಿಧಾನ ಸೌಧ ಭವನಕ್ಕೆ, ಜಗತ್ತ ವೃತ್ತದ ಡಾ: ಬಿ.ಆರ್.ಅಂಬೇಡ್ಕರ್ ಮೂರ್ತಿಗೆ, ಜಗತ್ ಜ್ಯೋತಿ ಬಸವಣ್ಣ ಮೂರ್ತಿಗೆ, ಶ್ರೀ ಬಾಬು ಜಗಜೀವನರಾಮ್ ಮೂರ್ತಿಗೆ, ಮತ್ತು ಸರದಾರ ವಲ್ಲಭಬಾಯಿ ಪಟೇಲ್ ಮೂರ್ತಿಗೆ ದೀಪಾಲಂಕಾರ ಮಾಡಲು ಆಯುಕ್ತರು, ಮಹಾ ನಗರ ಪಾಲಿಕೆ ಕಲಬುರಗಿ ರವರಿಗೆ ತಿಳಿಸಲಾಯಿತು.
ಪೊಲೀಸ್ ಗ್ರೌಂಡನಲ್ಲಿ ಜರುಗಲಿರುವ ಧ್ವಜಾರೋಹಣ ಕಾರ್ಯಕ್ರಮದ ಸ್ಥಳದಲ್ಲಿ ಮುಂಜಾಗೃತ ಕ್ರಮವಾಗಿ ಅಗ್ನಿಶಾಮಕ ವಾಹನ ಮತ್ತು ಸುಸಜ್ಜಿತ ಅಂಬುಲೆನ್ಸ್ ವಾಹನ ಇಟ್ಟುಕೊಳ್ಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲಾ ಅಧಿಕಾರಿಗಳು ತಮಗೆ ನೀಡಿ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಲು ಸೂಚಿಸಿದರು ಯಾವುದೇ ಲೋಪ ಆಗದಂತೆ ನೋಡಿಕೊಳ್ಳಲು ಸಭೆಯಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಎಸ್.ಎಮ್ ಪಂಡಿತ ರಂಗಮಂದಿರಲ್ಲಿ ಸಂಜೆ 05.00 ಗಂಟೆಗೆ ದೇಶಭಕ್ತಿ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗುವವು. .
ಸಭೆಯಲ್ಲಿ ಪೋಲಿಸ ಇಲಾಖೆಯ ಅಧಿಕಾರಿಗಳು ಜಿಲ್ಲಾಮಟ್ಟದ ಅಧಿಕಾರಿಗಳುಸಭೆಯಲ್ಲಿ ಭಾಗವಹಿಸಿದ್ದರು.