
ಔರಾದ :ಜ.16: ಮಾನವೀಯ ಸಂಬಂಧ ಬೆಸೆಯುವ ರೈತರ ಸುಗ್ಗಿ ಹಬ್ಬ, ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ ಹಬ್ಬವನ್ನು ತಾಲ್ಲೂಕಿನಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಚಿಣ್ಣರು, ಯುವತಿಯರು, ಮಹಿಳೆಯರು, ಹೊಸ ಉಡುಗೆಗಳನ್ನು ತೊಟ್ಟು ಸಕ್ಕರೆ ಅಚ್ಚು, ಎಳ್ಳು, ಬೆಲ್ಲದ ಪೆÇಟ್ಟಣ, ಕಬ್ಬಿನ ಜಲ್ಲೆಯನ್ನು ತಮ್ಮ ಸ್ನೇಹಿತರು, ಬಂಧುಗಳಿಗೆ ವಿನಿಮಯ ಮಾಡಿಕೊಂಡು ಹಬ್ಬದ ಶುಭಕೋರಿ ಸಂಭ್ರಮಿಸಿದರು.
ಸಂಕ್ರಾಂತಿ ಹಬ್ಬ ತನ್ನದೇ ಆದ ವಿಶೇಷತೆ ಹೊಂದಿದೆ, ಈ ಹಬ್ಬಕ್ಕೆ ಮುತೈದೆ ಸ್ತ್ರೀಯರು ನೆರಮನೆ ಸ್ತ್ರೀಯರಿಗೆ ಉಡಿ ತುಂಬಿ ದಾನವನ್ನು ನೀಡುತ್ತಾರೆ, ಇದರಲ್ಲಿ ಅರಿಶಿಣ, ಕುಂಕುಮ, ಎಳ್ಳು-ಬೆಲ್ಲ, ಹೀಗೆ ಹಲವು ಪದಾರ್ಥಗಳಿಂದ ಉಡಿ ತುಂಬಿದರು. ಮಕ್ಕಳಿಗೆ ಹಣ್ಣುಗಳನ್ನು ಎರೆದು, ಮಕ್ಕಳು ಮುಂದೆ ಕುಟುಂಬ, ಸಮಾಜಕ್ಕೆ ಫಲ ನೀಡುವಂತಾಗಲಿ, ಈ ಸಂಕ್ರಾಂತಿ ಹಬ್ಬವು ಎಲ್ಲರ ಜೀವನದಲ್ಲಿ ಒಳಿತನ್ನು ತರಲಿ ಎಂದು ಪ್ರಾರ್ಥಿಸಿದರು.