ಸಡಗರ-ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಸೆ. ೭:  ಶ್ರೀಕೃಷ್ಣ ಜನಿಸಿದ ದಿನವನ್ನು ಕೃಷ್ಣ ಜನ್ಮಾಷ್ಠಮಿಯಾಗಿ ಆಚರಿಸಲಾಗುತ್ತಿದೆ. ಬುಧವಾರ ನಾಡಿನಾದ್ಯಂತ ಕೃಷ್ಣ ಜನ್ಮಾಷ್ಠಮಿ ಹಬ್ಬವನ್ನು ಸಡಗರ-ಸಂಭ್ರಮ, ಭಕ್ತಿಭಾವದಿಂದ ಆಚರಿಸಲಾಯಿತು. ಕೃಷ್ಣ ಮಂದಿರಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಯಾಗಿದ್ದವು.ಶ್ರೀಕೃಷ್ಣ ಜನ್ಮಾಷ್ಠಮಿ ಹಿನ್ನೆಲೆಯಲ್ಲಿ ಕೆಲ ಪೋಷಕರು ತಮ್ಮ ಪುಟಾಣಿ ಮಕ್ಕಳಿಗೆ ಕೃಷ್ಣ ಹಾಗೂ ರಾಧೆಯ ವೇಷಭೂಷಣ ತೊಡಿಸಿ ಸಂಭ್ರಮಿಸಿದರು. ಹಲವು ಸಂಘಸಂಸ್ಥೆಗಳು ಶ್ರೀಕೃಷ್ಣ ವೇಷಭೂಷಣ ಸ್ಪರ್ಧೆ ಆಯೋಜಿಸಿದ್ದವು. ಆಕರ್ಷಕ ವೇಷಭೂಷಣ ಧರಿಸಿದ ಮಕ್ಕಳಿಗೆ ಬಹುಮಾನ ವಿತರಿಸಿದವು.
ಹಲವೆಡೆ ವಿವಿಧ ಸಾಂಪ್ರದಾಯಿಕ ಆಟೋಟ ಕಾರ್ಯಕ್ರಮಗಳು ಆಯೋಜನೆಯಾಗಿದ್ದವು. ಶ್ರೀಕೃಷ್ಣ ಜನ್ಮಾಷ್ಠಮಿಗೆ ಗಣ್ಯರು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಶುಭ ಹಾರೈಸಿದ್ದಾರೆ.