ಶಿವಮೊಗ್ಗ, ಮಾ. 22: ಶಿವಮೊಗ್ಗ ನಗರದ ಲ್ಲಿ ಬುಧವಾರ ಜೆಸಿಐ ಶಿವಮೊಗ್ಗ ಶಾಶ್ವತಿ ಘಟಕದಿಂದ ಯುಗಾದಿ ಹಬ್ಬವನ್ನು ಅತ್ಯಂತ ಸಡಗರ,-ಸಂಭ್ರಮದಿಂದ ಆಚರಿಸಲಾಯಿತು.
ಶಿವಮೊಗ್ಗದ ಅಮೃತ್ ಲೇಔಟ್ ನಲ್ಲಿರುವ ಸಂಘದ ಅಧ್ಯಕ್ಷೆ ಡಾ. ಶಾಂತಾ ಸುರೇಂದ್ರ ಅವರ ನಿವಾಸದಲ್ಲಿ ಹಬ್ಬ ಆಚರಣೆ ಮಾಡಲಾಯಿತು. ಈ ವೇಳೆ ಸಂಘದ ಸದಸ್ಯರು ಪರಸ್ಪರ ಬೇವು-ಬೆಲ್ಲ ವಿತರಣೆ ಮಾಡಿದರು.ನಂತರ ಯುಗಾದಿ ಹಬ್ಬಕ್ಕೆ ಸಂಬಂಧಿಸಿದ ಗೀತೆಗಳ ಗಾಯನ ನಡೆಯಿತು. ಈ ವೇಳೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಈ ವೇಳೆ ಸಂಘದ ಅಧ್ಯಕ್ಷೆ ಶಾಂತಾ ಸುರೇಂದ್ರ ಸೇರಿದಂತೆ ಪ್ರಮುಖರು ಹಬ್ಬದ ಮಹತ್ವದ ಕುರಿತಂತೆ ಮಾತನಾಡಿದರು.